ಪ್ರಜ್ಞಾ ಸೆಂಟ್ರಲ್ ಶಾಲೆ ಮೂವರು ವಿದ್ಯಾರ್ಥಿಗಳಿಗೆ ಚಿನ್ನದ ಪದಕ

KannadaprabhaNewsNetwork |  
Published : Jul 09, 2026, 02:30 AM IST
8ಕೆಕೆಡಿಯು2 | Kannada Prabha

ಸಾರಾಂಶ

ಕಡೂರುಕುಂದಾಪುರ ತಾಲೂಕಿನ ಹಟ್ಟಿಅಂಗಡಿಯಲ್ಲಿ ಜು.6 ರಂದು ನಡೆದ 2026-27 ನೇ ಸಾಲಿನ ಕರ್ನಾಟಕ ಮತ್ತು ಗೋವಾ ರಾಜ್ಯ ಗಳ ಐಸಿಎಸ್‌ಇ ಶಾಲೆಗಳ ವಲಯ ಮಟ್ಟದ ಕರಾಟೆ ಮತ್ತು ಯೋಗ ಸ್ಪರ್ಧೆಗಳಲ್ಲಿ ಭಾಗವಹಿಸಿದ ಕಡೂರಿನ ಪ್ರಜ್ಞಾ ಸೆಂಟ್ರಲ್ ಶಾಲೆ ಮೂವರು ವಿದ್ಯಾರ್ಥಿಗಳು ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಗಳಿಸಿದ್ದಾರೆ ಎಂದು ಪ್ರಜ್ಞಾ ಶಾಲೆ ಕಾರ್ಯದರ್ಶಿ ಎನ್.ಪಿ. ಮಂಜುನಾಥ ಪ್ರಸನ್ನ ತಿಳಿಸಿದರು.

ಕನ್ನಡಪ್ರಭ ವಾರ್ತೆ ಕಡೂರು

ಕುಂದಾಪುರ ತಾಲೂಕಿನ ಹಟ್ಟಿಅಂಗಡಿಯಲ್ಲಿ ಜು.6 ರಂದು ನಡೆದ 2026-27 ನೇ ಸಾಲಿನ ಕರ್ನಾಟಕ ಮತ್ತು ಗೋವಾ ರಾಜ್ಯ ಗಳ ಐಸಿಎಸ್‌ಇ ಶಾಲೆಗಳ ವಲಯ ಮಟ್ಟದ ಕರಾಟೆ ಮತ್ತು ಯೋಗ ಸ್ಪರ್ಧೆಗಳಲ್ಲಿ ಭಾಗವಹಿಸಿದ ಕಡೂರಿನ ಪ್ರಜ್ಞಾ ಸೆಂಟ್ರಲ್ ಶಾಲೆ ಮೂವರು ವಿದ್ಯಾರ್ಥಿಗಳು ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಗಳಿಸಿದ್ದಾರೆ ಎಂದು ಪ್ರಜ್ಞಾ ಶಾಲೆ ಕಾರ್ಯದರ್ಶಿ ಎನ್.ಪಿ. ಮಂಜುನಾಥ ಪ್ರಸನ್ನ ತಿಳಿಸಿದರು.

ಶಾಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ನಮ್ಮ ಶಾಲೆಯ ಒಟ್ಟು 22 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. 14 ವರ್ಷದ ಒಳಗಿನ ಹಾಗೂ 17 ವರ್ಷದೊಳಗಿನ ಎರಡು ವಿಭಾಗದಲ್ಲಿ ಸ್ಪರ್ಧೆಗಳು ಆಯೋಜನೆಗೊಂಡಿತ್ತು. ಸಿ.ಎಂ. ಆಶಿತಾ (ಕರಾಟೆ ಸ್ಪರ್ಧೆ), ಕೆ. ಷಣ್ಮುಖಿ ಮತ್ತು ಸಿ.ಎಂ. ಹರ್ಷಿತಾ ಕಲಾಯೋಗ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಮೂವರು ವಿದ್ಯಾರ್ಥಿ ಗಳು ಚಿನ್ನದ ಪದಕ ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದರು.

ಕರಾಟೆಯಲ್ಲಿ ಸ್ಪರ್ಧಿಸಿದ್ದ ಬಿ.ಜಿ. ಪಾರ್ಥಾ ಮತ್ತು ಅದ್ವೈತ್ ಗುಪ್ತಾ ತಲಾ ಇಬ್ಬರು ವಿದ್ಯಾರ್ಥಿಗಳು ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿ ಪದಕ ಪಡೆದಿದ್ದಾರೆ. ಕಲಾ ಯೋಗ ಸ್ಪರ್ಧೆಯಲ್ಲಿ ಕೆ.ಮಾಣಿಕ್ಯ ಕುಮಾರ್, ಬಿ.ಕೆ. ವನ್ಯಾ, ಬಿ.ಆರ್. ಆಯಿಷಾ, ಇ. ಯಶಸ್ವಿನಿ, ಜಿ.ಸಿ. ಶಾರಿಕಪಾಲ್, ಬಿ.ಆರ್.ಆಯುಷಿ ತಲಾ ಆರು ಜನ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕ ಗಳಿಸಿದ್ದಾರೆ.

ಎಸ್.ಒ. ಹರ್ಷವರ್ಧನ (ಯೋಗಸ್ಪರ್ಧೆ) ಎಚ್.ವಿ. ಆದ್ಯಾ, ಜಿ.ಎಸ್. ಸಾನ್ವಿ ಕರಾಟೆ ಸ್ಪರ್ದೆಯಲ್ಲಿ ಕಂಚಿನ ಪದಕ ಪಡೆದು ಶಾಲೆ ಮಕ್ಕಳು ಕೀರ್ತಿ ತಂದಿದ್ದಾರೆ. ಒಟ್ಟಾರೆ ಐಸಿಎಸ್‌ಇ ಶಾಲೆಗಳ ವಲಯ ಮಟ್ಟದಲ್ಲಿ ಚಿಕ್ಕಮಗಳೂರು, ದಾವಣಗೆರೆ, ಶಿವಮೊಗ್ಗ, ಉಡುಪಿ, ಮಂಗಳೂರು, ರಾಯಚೂರು, ಬೆಳಗಾವಿ, ಉತ್ತರಕನ್ನಡ ಜಿಲ್ಲೆಗಳು ಸೇರಿದಂತೆ ಗೋವಾ ರಾಜ್ಯದ ಶಾಲೆಗಳ ನಡುವೆ ನಡೆದ ವಲಯ ಮಟ್ಟದ ಸ್ಪರ್ಧೆಯಲ್ಲಿ ಸುಮಾರು 200 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು ಎಂದು ಮಾಹಿತಿ ಹಂಚಿಕೊಂಡರು.

ಇದೇ ಸಂದರ್ಭದಲ್ಲಿ ಶಾಲೆ ಆಡಳಿತ ಮಂಡಳಿ ಅಧ್ಯಕ್ಷ ಕೆ.ಎನ್. ರಾಜಣ್ಣ, ನಿರ್ದೇಶಕರಾದ ಡಿ.ಪ್ರಶಾಂತ್, ನವೀನ್ ಡಿ.ಅಲ್ಮೆಡಾ, ಡಾ.ಶಿವಕುಮಾರ್, ಶಾಲೆ ಪ್ರಾಂಶುಪಾಲರಾದ ಡಿ.ಕೆ. ಶಿಲ್ಪಾ, ಸೌಮ್ಯ, ದೈಹಿಕ ಶಿಕ್ಷಕ ವಿ.ಎನ್. ಮಂಜುನಾಥ್, ಕರಾಟೆ ಶಿಕ್ಷಕ ಶಿವಕುಮಾರ್, ಶಿಕ್ಷಕರಾದ ಎಂ,ಆರ್. ಮಂಜುನಾಥ್, ಚೈತ್ರಾ ಸರ್ಜಿ, ಕೆ. ರೂಪಾ ಇದ್ದರು.

8ಕೆಕೆಡಿಯು2.

ಕುಂದಾಪುರದ ಹಟ್ಟಿಅಂಗಡಿಯಲ್ಲಿ ನಡೆದ ಕರ್ನಾಟಕ ಮತ್ತು ಗೋವಾ ರಾಜ್ಯಗಳ ಐಸಿಎಸ್‌ಇ ಶಾಲೆಗಳ ವಲಯ ಮಟ್ಟದ ಕರಾಟೆ ಮತ್ತು ಯೋಗಾ ಸ್ಪರ್ಧೆಯಲ್ಲಿ ಕಡೂರಿನ ಪ್ರಜ್ಞಾ ಶಾಲೆ ವಿದ್ಯಾರ್ಥಿಗಳು ಭಾಗವಹಿಸಿದ್ದರು,

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮತದಾರರ ಪಟ್ಟಿಯಲ್ಲಿ ಹೆಸರು ಕೈಬಿಡದಂತೆ ಎಸ್ ಐ ಆರ್ ನಿರ್ವಹಣೆಗೆ ಆದ್ಯತೆ: ಭಂಡಾರಿ ಶ್ರೀನಿವಾಸ್
ಎಸ್ಐಆರ್: ಗೌರವಧನಕ್ಕೆ ಆಶಾಗಳ ಆಗ್ರಹ