ಮತದಾರರ ಪಟ್ಟಿಯಲ್ಲಿ ಹೆಸರು ಕೈಬಿಡದಂತೆ ಎಸ್ ಐ ಆರ್ ನಿರ್ವಹಣೆಗೆ ಆದ್ಯತೆ: ಭಂಡಾರಿ ಶ್ರೀನಿವಾಸ್

KannadaprabhaNewsNetwork |  
Published : Jul 09, 2026, 02:30 AM ISTUpdated : Jul 09, 2026, 04:29 AM IST
SIR

ಸಾರಾಂಶ

ಕಡೂರುಬಹು ಮುಖ್ಯವಾದ ಮತದಾರರ ಪಟ್ಟಿಯಲ್ಲಿ ಹೆಸರು ಕೈಬಿಟ್ಟು ಹೋಗದಂತೆ ಎಸ್ ಐ ಆರ್ ನಿರ್ವಹಣೆಗೆ ಆದ್ಯತೆ ನೀಡಲಾಗುತ್ತಿದೆ ಎಂದು ಕಡೂರು ಪುರಸಭೆ ಮಾಜಿ ಅಧ್ಯಕ್ಷ ಮತ್ತು ನೂತನ ಬಿಎಲ್ಎ 2 ಆಗಿ ನೇಮಕವಾಗಿರುವ ಭಂಡಾರಿ ಶ್ರೀನಿವಾಸ್ ಹೇಳಿದರು.

 , ಕಡೂರು  :  ಬಹು ಮುಖ್ಯವಾದ ಮತದಾರರ ಪಟ್ಟಿಯಲ್ಲಿ ಹೆಸರು ಕೈಬಿಟ್ಟು ಹೋಗದಂತೆ ಎಸ್ ಐ ಆರ್ ನಿರ್ವಹಣೆಗೆ ಆದ್ಯತೆ ನೀಡಲಾಗುತ್ತಿದೆ ಎಂದು ಕಡೂರು ಪುರಸಭೆ ಮಾಜಿ ಅಧ್ಯಕ್ಷ ಮತ್ತು ನೂತನ ಬಿಎಲ್ಎ 2 ಆಗಿ ನೇಮಕವಾಗಿರುವ ಭಂಡಾರಿ ಶ್ರೀನಿವಾಸ್ ಹೇಳಿದರು.

ಬುಧವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಜಿಲ್ಲಾಕಾಂಗ್ರೆಸ್ ಪಕ್ಷ ಕಡೂರು ಪಟ್ಟಣಕ್ಕೆ ಎಸ್.ಆರ್.ಐ ವೀಕ್ಷಕರಾಗಿ ತಮ್ಮನ್ನು ಹಾಗೂ ಬೀರೂರು ಪಟ್ಟಣಕ್ಕೆ ಪುರಸಭೆ ಹಿರಿಯ ಸದಸ್ಯ ತೋಟದಮನೆ ಮೋಹನ್ ಅವರನ್ನು ನೇಮಕ ಮಾಡಲಾಗಿದೆ.

ಕಡೂರಿನ 23 ವಾರ್ಡುಗಳಲ್ಲಿ ಸರ್ಕಾರದ ಎಸ್ ಆರ್ ಐ ಪ್ರಕ್ರಿಯೆ

ಕಡೂರಿನ 23 ವಾರ್ಡುಗಳಲ್ಲಿ ಸರ್ಕಾರದ ಎಸ್ ಆರ್ ಐ ಪ್ರಕ್ರಿಯೆ ಯಾವ ರೀತಿ ನಡೆಯುತ್ತಿದೆ ಎಂದು ವೀಕ್ಷಣೆ ಮಾಡಿ ಮತದಾರರು ಪಟ್ಟಿಯಿಂದ ಬಿಟ್ಟು ಹೋಗದಂತೆ ಕ್ರಮ ವಹಿಸಲು ಉಸ್ತುವಾರಿಯಾಗಿ ನೇಮಕ ಮಾಡಲಾಗಿದೆ. ಕಡೂರು ವಿಧಾನಸಭಾ ಕ್ಷೇತ್ರದ ಬಿಎಲ್ ಎ 1 ಆಗಿ ಶಾಸಕ ಕೆ.ಎಸ್. ಆನಂದ್ ನೇಮಕವಾಗಿದ್ದಾರೆ ಎಂದರು.

ಕಡೂರು ಬಿಎಲ್‌ ಒ ಆಗಿ ನಾನು ಬೀರೂರು ಪಟ್ಟಣಕ್ಕೆ ತೋಟದಮನೆ ಮೋಹನ್ ಬಿಎಲ್ ಎ 2 ಆಗಿದ್ದೇವೆ ಎಂದು ಹೇಳಿದರು. ವಾರ್ಡುಗಳ ಮ್ಯಾಪಿಂಗ್ ಮುಗಿದಿದ್ದು, ಆದರೆ ಎಸ್ ಆರ್ ಐ ಪ್ರಕ್ರಿಯೆಯಲ್ಲಿ ಕೆಲ ದೂರುಗಳು ಬಂದಿವೆ. ಈ ಗೊಂದಲಗಳಿಗೆ ಒಳಗಾಗದಂತೆ ಮತದಾರರ ಪಟ್ಟಿಯಿಂದ ಕೈ ಬಿಟ್ಟು ಹೋಗದಂತೆ ಜಾಗೃತಗೊಳಿಸಲು ಕ್ರಮ ವಹಿಸಲಾಗುತ್ತಿದೆ ಎಂದರು...

ಸರಿಯಾಗಿ ಮಾಹಿತಿ ನೀಡುವ ಮೂಲಕ ಎಸ್ ಆರ್ ಐ ಭರ್ತಿ ಮಾಡಬೇಕು.

ಅಧಿಕಾರಿಗಳು ಮನೆಗಳಿಗೆ ಬಂದಾಗ ಸರಿಯಾಗಿ ಮಾಹಿತಿ ನೀಡುವ ಮೂಲಕ ಎಸ್ ಆರ್ ಐ ಭರ್ತಿ ಮಾಡಬೇಕು. 2 ಅಥ‍ವಾ 3 ಕಡೆ ಮತಪಟ್ಟಿಯಲ್ಲಿ ಹೆಸರು ಇದ್ದಲ್ಲಿತಮಗೆ ಬೇಕಾದ 1 ಕಡೆ ಮಾತ್ರ ಉಳಿಸಿಕೊಳ್ಳಬೇಕು ಎಂದರು.

ಬೀರೂರು ಪಟ್ಟಣದ ಬಿಎಲ್ ಎ 2 ವೀಕ್ಷಕ ತೋಟದಮನೆ ಮೋಹನ್ ಮಾತನಾಡಿ ಬೀರೂರಿನ 23 ವಾರ್ಡುಗಳಿಗೆ ಪಕ್ಷ ನನ್ನನ್ನು ನೇಮಕ ಮಾಡಿದೆ. ಪ್ರತಿ 3 ವಾರ್ಡಿಗೆ ಇಬ್ಬರನ್ನು ಎಸ್.ಆರ್.ಐ. ಭರ್ತಿ ಮಾಡಲು ನೇಮಕ ಮಾಡಿದ್ದೇವೆ. ಪ್ರಜಾ ಪ್ರಭುತ್ವದಲ್ಲಿ ಬಹುಮುಖ್ಯ ಪಾತ್ರ ವಹಿಸುವ ಮತದಾರರ ಪಟ್ಟಿಯಿಂದ ಹೆಸರು ಕೈ ಬಿಟ್ಟುಹೋಗದಂತೆ ಪಕ್ಷ ವಹಿಸಿರುವ ಜವಾಬ್ದಾರಿಗೆ ಅನುಗುಣವಾಗಿ ಕೆಲಸ ಮಾಡುತ್ತೇವೆ. ಮತದಾರರ ಪಟ್ಟಿಯಲ್ಲಿ ಹೆಸರು ಬಿಟ್ಟು ಹೋಗದಂತೆ ನಾವು ಪಕ್ಷದ ಕಾರ್ಯಕರ್ತರು ಕ್ರಮ ವಹಿಸಲಿದ್ದೇವೆ ಎಂದರು.

ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಈರಳ್ಳಿ ರಮೇಶ್, ಕೆ.ಎಚ್.ಶಂಕರ್, ಶ್ರೀಕಾಂತ್,ಯಾಸೀನ್, ಮನು ಮರುಗುದ್ದಿ, ಜ್ಯೋತಿ ಆನಂದ್, ಕೆ.ಎಸ್.ತಿಪ್ಪೇಶ್, ಕರಿಬಡ್ಡೆರಾಜು, ಚೇತನ್,ಚಿಕ್ಕಣ್ಣ ಸೇರಿದಂತೆ ಮತ್ತಿತರರು ಇದ್ದರು. 

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಎನ್‌ಎಚ್‌ಎಐ ಅಧಿಕಾರಿಗಳೊಂದಿಗೆ ಸಮಾಲೋಚನೆ
ಮಕ್ಕಳ ಸರ್ವಾಂಗೀಣ ಪ್ರಗತಿಗೆ ಕೈಜೋಡಿಸಿ: ಬಿ.ಡಿ. ಬಾಣಕಾರ