ಮನೆಯಿಂದ 15 ಲಕ್ಷ ರು. ಮೌಲ್ಯದ ಚಿನ್ನ ಕಳ್ಳತನ: ಆರೋಪಿ ಸೆರೆ

KannadaprabhaNewsNetwork |  
Published : Apr 01, 2026, 02:30 AM IST
ಬೆಳಗಾವಿ  | Kannada Prabha

ಸಾರಾಂಶ

ಬಾರ್ಕೂರು ಪರಿಸರದ ಹೇರಾಡಿ ಗ್ರಾಮದ ಮಂಜುನಾಥ ರಾವ್ ಅವರ ಮನೆಯಲ್ಲಿ ನಡೆದ ಕಳ್ಳತನ ಪ್ರಕರಣವನ್ನು ಬ್ರಹ್ಮಾವರ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಆರೋಪಿಯನ್ನು ಕೇರಳ ಮೂಲದ ಪಡುಕರೆ ನಿವಾಸಿ ಪ್ರವೀಣ್‌ ಎಂದು ಗುರುತಿಸಲಾಗಿದೆ.

ಉಡುಪಿ: ಬಾರ್ಕೂರು ಪರಿಸರದ ಹೇರಾಡಿ ಗ್ರಾಮದ ಮಂಜುನಾಥ ರಾವ್ ಅವರ ಮನೆಯಲ್ಲಿ ನಡೆದ ಕಳ್ಳತನ ಪ್ರಕರಣವನ್ನು ಬ್ರಹ್ಮಾವರ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಆರೋಪಿಯನ್ನು ಕೇರಳ ಮೂಲದ ಪಡುಕರೆ ನಿವಾಸಿ ಪ್ರವೀಣ್‌ ಎಂದು ಗುರುತಿಸಲಾಗಿದೆ.

ಬಾರ್ಕೂರು ಹೇರಾಡಿ ಗ್ರಾಮದ ಮಂಜುನಾಥ ರಾವ್ ಅವರ ಮನೆಯಲ್ಲಿ ಸಂಚುಬದ್ಧವಾಗಿ ಕಳ್ಳತನ ನಡೆದಿತ್ತು. ಕಳ್ಳ ಯಾವುದೇ ಕುರುಹು ಸಿಗದಂತೆ ಮನೆಗೆ ನುಗ್ಗಿ ಸುಮಾರು 15 ಲಕ್ಷ ರು. ಮೌಲ್ಯದ ಚಿನ್ನಾಭರಣಗಳನ್ನು ದೋಚಿಕೊಂಡು ಪರಾರಿಯಾಗಿದ್ದ, ಇಲ್ಲಿನ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರೂ ಯಾವುದೇ ಸ್ಪಷ್ಟ ಸುಳಿವು ದೊರಕದೇ, ಪ್ರಕರಣವು ಪೊಲೀಸರಿಗೆ ಸವಾಲಾಗಿ ಪರಿಣಮಿಸಿತ್ತು.

ಆದರೇ ಬ್ರಹ್ಮಾವರ ಪೊಲೀಸ್ ತಂಡವು ಆರೋಪಿಯ ಸಂಶಯಾಸ್ಪದ ಚಲನವಲನಗಳನ್ನು ಪರಿಶೀಲಿಸಿ, ವಿವಿಧ ಮಾಹಿತಿಗಳನ್ನು ಸಂಗ್ರಹಿಸಿದ ಬಳಿಕ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

(ಮಸ್ಟ್) ಸಮರ್ಪಕ ಅನಿಲ ವಿತರಣೆ: ಸಂಸದ ಕೋಟ ಸೂಚನೆ
ಅಮೆರಿಕಾ ಹೂಸ್ಟನ್ ನಗರ ಶ್ರೀ ಪುತ್ತಿಗೆ ಮಠದಲ್ಲಿ ರಾಮನವಮಿ