ಸತ್ಯಸಾಯಿ ಗ್ರಾಮದಲ್ಲಿ ಸುವರ್ಣ ಮಹೋತ್ಸವ ಸಂಭ್ರಮಾಚರಣೆ

KannadaprabhaNewsNetwork |  
Published : Jul 07, 2026, 01:30 AM IST
೬ಕೆಎಂಎನ್‌ಡಿ-೫ಮಂಡ್ಯದ ಶ್ರೀ ಸತ್ಯ ಸಾಯಿ ಶಾರದಾನಿಕೇತನಂ ಗುರುಕುಲದ ವಿದ್ಯಾರ್ಥಿಗಳು ಪ್ರದರ್ಶಿಸಿದ ಸೆಲೆಸ್ಟಿಯಲ್ ರಿಥಮ್ಸ್. | Kannada Prabha

ಸಾರಾಂಶ

ಮಂಡ್ಯ ತಾಲೂಕಿನ ಮಾರದೇವನಹಳ್ಳಿಯಲ್ಲಿರುವ ಪ್ರತಿಷ್ಠಿತ ವಿದ್ಯಾ ಸಂಸ್ಥೆ ಶ್ರೀಸತ್ಯ ಸಾಯಿ ಶಾರದಾನಿಕೇತನಂ ಗುರುಕುಲದ ೨೦೦ಕ್ಕೂ ಹೆಚ್ಚು ಬಾಲಕಕರಿಂದ ಶಾಲೆಯ ಮುಖ್ಯ ಕೇಂದ್ರವಾದ ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿಯಲ್ಲಿ ಅಮೋಘ ಪ್ರದರ್ಶನ.

ಕನ್ನಡಪ್ರಭ ವಾರ್ತೆ ಮಂಡ್ಯ

ತಾಲೂಕಿನ ಮಾರದೇವನಹಳ್ಳಿಯಲ್ಲಿರುವ ಪ್ರತಿಷ್ಠಿತ ವಿದ್ಯಾ ಸಂಸ್ಥೆ ಶ್ರೀಸತ್ಯ ಸಾಯಿ ಶಾರದಾನಿಕೇತನಂ ಗುರುಕುಲದ ೨೦೦ಕ್ಕೂ ಹೆಚ್ಚು ಬಾಲಕರು, ಶಾಲೆಯ ಮುಖ್ಯ ಕೇಂದ್ರವಾದ ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿಯಲ್ಲಿ ಅಮೋಘ ಪ್ರದರ್ಶನ ನೀಡಿದರು.

ಈ ವರ್ಷ ಸಂಸ್ಥೆಯು ಸುವರ್ಣ ಮಹೋತ್ಸವ ಸಂಭ್ರಮಾಚರಣೆಯಲ್ಲಿದ್ದು, ಜು.೫ರಂದು ವಾರ್ಷಿಕ ಕ್ರೀಡಾ ಮತ್ತು ಸಾಂಸ್ಕೃತಿಕ ಮಹೋತ್ಸವವನ್ನು ಆಯೋಜಿಸಲಾಗಿತ್ತು. ಭಾರತ ಸೇರಿದಂತೆ ಅನೇಕ ದೇಶಗಳ ಸಾಂಸ್ಕೃತಿಕ, ಸಮರ ಮತ್ತು ಕ್ರೀಡಾ ವಿಷಯಾಧಾರಿತ ಪ್ರದರ್ಶನಗಳನ್ನು ವಿದ್ಯಾರ್ಥಿಗಳು ನೀಡಿದರು.

ಈ ಕಾರ್ಯಕ್ರಮದಲ್ಲಿ ಮಂಡ್ಯದ ಶ್ರೀಸತ್ಯ ಸಾಯಿ ಶಾರದಾನಿಕೇತನಂ ಗುರುಕುಲದ ವಿದ್ಯಾರ್ಥಿಗಳು ಸೆಲೆಸ್ಟಿಯಲ್ ರಿಥಮ್ಸ್ ಕ್ರೇನ್ ಮೂಲಕ ಮೇಲೆತ್ತಿದ ಕಬ್ಬಿಣದ ಚೌಕಾಕೃತಿಯಲ್ಲಿ ವಿದ್ಯಾರ್ಥಿಗಳ ವಿಭಿನ್ನ ಸಾಮೂಹಿಕ ರಚನೆಗಳು. ಯಾವುದೇ ಸುರಕ್ಷಾ ಸಾಧನಗಳಿಲ್ಲದೆ, ಭೂಮಿಯಿಂದ ಸುಮಾರು ೧೦೮ ಅಡಿ ಎತ್ತರದಲ್ಲಿ ನಡೆಸುವ ಈ ರೋಮಾಂಚಕಾರಿ ಪ್ರದರ್ಶನ ನೀಡಿ ನೋಡುಗರನ್ನು ರೋಮಾಂಚನಗೊಳಿಸಿದರು.ಎಚ್.ಎ.ದುವನ್ ಗೌಡ ಕಂಚಿನ ಪದಕ

ಪಾಂಡವಪುರ: ಉತ್ತರಕಾಂಡ್ ರಾಜ್ಯದ ಡೆಹ್ರಾಡೂನ್ ನಲ್ಲಿ ಐಸ್ ಸ್ಕೇಟಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ ಆಯೋಜಿಸಿದ್ದ 21ನೇ ರಾಷ್ಟ್ರೀಯ ಐಸ್ ಸ್ಕೇಟಿಂಗ್ ಚಾಂಪಿಯನ್ ಶಿಪ್ 2026(21 National ICE skating championship) ನಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ್ದ ಎಚ್.ಎ.ದುವನ್ ಗೌಡ ಕಂಚಿನ ಪದಕ ಗೆದ್ದಿದ್ದಾನೆ. ಐಸ್ ಸ್ಕೇಟಿಂಗ್ ಚಾಂಪಿಯನ್ ಶಿಪ್ 2026 ಈ ಸ್ಪರ್ಧೆಯಲ್ಲಿ 10 ರಿಂದ 12 ವರ್ಷದ ವಯೋಮಾನದ ಕೆಟಗರಿಯಲ್ಲಿ ಕಂಚು ಗೆಲ್ಲುವ ಮೂಲಕ ಕರ್ನಾಟಕಕ್ಕೆ ಹೆಮ್ಮೆ ತಂದಿದ್ದಾನೆ. ದುವನ್ ಗೌಡ ತಾಲೂಕಿನ ಹಿರೇಮರಳ್ಳಿಯ ಅರುಣ್ ಕುಮಾರ್ ಮತ್ತು ಚಂದ್ರಕಲಾ ಪುತ್ರನಾಗಿದ್ದು, ಮೈಸೂರಿನ ಪ್ರತಿಷ್ಠಿತ ರಾವ್ ಸ್ಕೇಟಿಂಗ್ ನಲ್ಲಿ ಕೆ ಶ್ರೀಕಾಂತ್ ರಾವ್ ಅವರ ಬಳಿ ಕೋಚಿಂಗ್ ಪಡೆಯುತ್ತಿದ್ದಾನೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

3000ಕ್ಕೂ ಅಧಿಕ ಪಿಂಚಣಿ ಕಾರ್ಡ್ ರದ್ದುಗೊಳಿಸಿ ವಂಚನೆ: ನವೀನ್
ರಾಷ್ಟ್ರದ ಹಿತದೃಷ್ಟಿಯಿಂದ ಎಸ್‌ಐಆರ್ ಅಭೂತಪೂರ್ವ ಕಾರ್ಯಕ್ರಮ