ಕನ್ನಡಪ್ರಭ ವಾರ್ತೆ ಗೋಣಿಕೊಪ್ಪ
ನಾಳಿಯಮ್ಮಂಡ ಉಮೇಶ್ ಕೇಚಮಯ್ಯ ತಂಡ ದುಡಿಕೊಟ್ ಪಾಟ್ ಮೂಲಕ ಅತಿಥಿಗಳನ್ನು ಬರಮಾಡಿಕೊಂಡರು. ಅಖಿಲ ಅಮ್ಮ ಕೊಡವ ಸಮಾಜದ ಅಧ್ಯಕ್ಷ ಬಾನಂಡ ಪ್ರತ್ಯು ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಮುಖ್ಯ ಅತಿಥಿಗಳಾದ ಬೆಂಗಳೂರು ಅಮ್ಮ ಕೊಡವ ಸಮಾಜದ ಅಧ್ಯಕ್ಷೆ ಡಾ. ಸರಸ್ವತಿ ಸೋಮೇಶ್, ಹುಣಸೂರು ವಿಭಾಗದ ಡಿಎಫ್‌ಒ ಪುತ್ತಾಮನೆ ಸೀಮಾ ರಂಜನ್, ವಕೀಲರು ಹಾಗೂ ಮೈಸೂರು ಅಮ್ಮ ಕೊಡವ ಸಮಾಜದ ಮಾಜಿ ಅಧ್ಯಕ್ಷ ಚಮ್ಮಣಮಾಡ ಬಿ. ಗಿರೀಶ್ ಅವರು ದೀಪಬೆಳಗಿಸುವ ಮೂಲಕ ಉದ್ಘಾಟಿಸಿದರು.
ನಂತರ ಮಾತನಾಡಿದ ಅತಿಥಿಗಳು ಅಮ್ಮ ಕೊಡವ ಜನಾಂಗದ ಸಂಸ್ಕೃತಿ ಆಚಾರ ವಿಚಾರಗಳ ಉಳಿವಿಗೆ ಇಂತಹ ಕಾರ್ಯಕ್ರಮಗಳು ಅತ್ಯವಶ್ಯಕ. ಸಮಾಜದ ವತಿಯಿಂದ ಪುತ್ತರಿ ನಮ್ಮೆ ಆಯೋಜಿಸುವ ಮೂಲಕ ಅಮ್ಮ ಕೊಡವ ಜನಾಂಗ ಒಟ್ಟಿಗೆ ಸೇರಲು ಅವಕಾಶ ಮಾಡಿಕೊಟ್ಟ ಸಮಾಜದ ಅಧ್ಯಕ್ಷ ಬಾನಂಡ ಪ್ರತ್ಯು ಅವರ ಕಾರ್ಯ ಶ್ಲಾಘನೀಯ ಎಂದರು.ಅಮ್ಮಕೊಡವ ಸಮಾಜದ ವಿದ್ಯಾಭಿವೃದ್ಧಿ ಸಂಘದ ಅಧ್ಯಕ್ಷ ನಾಳಿಯಮ್ಮಂಡ ಉಮೇಶ್ ಕೇಚಮಯ್ಯ ಮಾತನಾಡಿ ವಿಶೇಷ ಸಂಸ್ಕೃತಿ, ವಿಶಿಷ್ಟ ಪರಂಪರೆಯನ್ನು ಹೊಂದಿರುವ ಅಮ್ಮ ಕೊಡವ ಜನಾಂಗದ ಇತಿಹಾಸವನ್ನು ತಿಳಿದುಕೊಳ್ಳುವ ಮೂಲಕ ಯುವ ಜನತೆ ಹಬ್ಬ ಆಚರಣೆಗಳಲ್ಲಿ ಪಾಲ್ಗೊಂಡು ಜನಾಂಗ ಆಚಾರ ವಿಚಾರಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದರು. ಹಿರಿಯರಾದ ಬಾನಂಡ ರಮೇಶ್, ನೆರೆಯಂಡಮ್ಮಂಡ ಪ್ರಭು ಸಭೆಯನ್ನುದ್ದೇಶಿಸಿ ಮಾತನಾಡಿದರು.
ಬಲ್ಯoಡ ದೀಪ್ತಿ, ಆಂಡಮಾಡ ಪವನ್, ಅಚ್ಚಿಯಂಡ ರಿಯಾ ಮತ್ತು ದಿಯಾ, ಪುತ್ತಾಮನೆ ಪ್ರೀತಿ ಮತ್ತು ಭವ್ಯ, ಬಾಚಮಾಡ ದಿವ್ಯ ಮತ್ತು ಶೈನಿ, ಹೆಮ್ಮಚ್ಚಿಮನೆ ಲಹರಿ, ಬಲ್ಯಂಡ ತವನ್, ನೃತ್ಯದ ಮೂಲಕ ರಂಜಿಸಿದರು.
ಸ್ಪರ್ಧೆಯ ವಿಜೇತರು: ಮಹಿಳೆಯರಿಗಾಗಿ ಏರ್ಪಡಿಸಲಾಗಿದ್ದ ಕಣ್ಣಿಗೆ ಬಟ್ಟೆ ಕಟ್ಟಿ ಮಡಿಕೆ ಹೊಡೆಯುವ ಸ್ಪರ್ಧೆಯಲ್ಲಿ ಅಮ್ಮತೀರ ಡೀನಾ ಪ್ರಥಮ, ಪುತ್ತಾಮನೆ ಪೂಜಾ ದ್ವಿತೀಯ, ಆಂಡಮಾಡ ಚೈತ್ರ ತೃತೀಯ ಬಹುಮಾನ ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಪುತ್ತಾ ಮನೆ ಅನಿಲ್ ಪ್ರಸಾದ್, ಜಂಟಿ ಕಾರ್ಯದರ್ಶಿ ಅಮ್ಮತೀರ ಸುರೇಶ್, ಖಜಾಂಚಿ ಅಮ್ಮತೀರ ಗಣೇಶ್, ನಿರ್ದೇಶಕರಾದ ನೆರೆಯಂಡಮ್ಮಂಡ ಉಮಾ ಪ್ರಭು, ಬಾನಂಡ ಅಶೋಕ್, ನೆರೆಯಂಡಮ್ಮಂಡ ಜನಾರ್ದನ ಹಾಗೂ ಗುಂಭೀರ ವಿನಾಯಕ್, ಸಮಾಜದ ಪ್ರಮುಖರು ಇದ್ದರು. ಪುತ್ತಾಮನೆ ವಿದ್ಯಾ ಜಗದೀಶ್ ಪ್ರಾರ್ಥಿಸಿದರು. ಉಪಾಧ್ಯಕ್ಷ ಪಾಡಿಯಮಂಡ ಮುರುಳಿ ಸ್ವಾಗತಿಸಿದರು. ನೆರಯಂಡಮ್ಮಂಡ ಸುಬ್ರಮಣಿ ವಂದಿಸಿದರು. ಹೆಮ್ಮಚ್ಚಿಮನೆ ಕಾವ್ಯ ಅಶ್ವತ್ ನಿರೂಪಿಸಿದರು.