ಉತ್ತಮ ಶಿಕ್ಷಣದಿಂದ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ: ತಮ್ಮಯ್ಯ

KannadaprabhaNewsNetwork |  
Published : Jun 13, 2026, 02:00 AM IST
11ಕೆಕೆಡಿಯು3. | Kannada Prabha

ಸಾರಾಂಶ

ಕಡೂರುಮಕ್ಕಳ ಆರೋಗ್ಯಕ್ಕೆ ಆದ್ಯತೆ ನೀಡುವ ಜೊತೆಗೆ ಉತ್ತಮ ಶಿಕ್ಷಣ ನೀಡಿದರೆ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಶಾಸಕ ಎಚ್. ಡಿ. ತಮ್ಮಯ್ಯ ಹೇಳಿದರು.

ದೇವನೂರಿನ ಸರ್ಕಾರಿ ಶಾಲೆಯ ಕೊಠಡಿಗಳ ಕಾಮಗಾರಿ ವೀಕ್ಷಣೆ

ಕನ್ನಡಪ್ರಭ ವಾರ್ತೆ ಕಡೂರು

ಮಕ್ಕಳ ಆರೋಗ್ಯಕ್ಕೆ ಆದ್ಯತೆ ನೀಡುವ ಜೊತೆಗೆ ಉತ್ತಮ ಶಿಕ್ಷಣ ನೀಡಿದರೆ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಶಾಸಕ ಎಚ್. ಡಿ. ತಮ್ಮಯ್ಯ ಹೇಳಿದರು. ಸಖರಾಯಪಟ್ಟಣ ಸಮೀಪದ ದೇವನೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿರ್ಮಿಸುತ್ತಿರುವ 4 ಹೆಚ್ಚುವರಿ ಕೊಠಡಿಗಳ ಕಾಮಗಾರಿ ವೀಕ್ಷಿಸಿ ಮಾತನಾಡಿ ಕಾಮಗಾರಿಯಲ್ಲಿ ಯಾವುದೇ ರಾಜಿಯಿಲ್ಲ. ಉತ್ತಮ ಶಿಕ್ಷಣ ನೀಡುವ ನಿಟ್ಟಿನಲ್ಲಿ ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣಕ್ಕೆ₹50 ಲಕ್ಷ ಗಳ ವಿಶೇಷ ಅನುದಾನದಡಿ ಅತ್ಯುತ್ತಮ ನಾಲ್ಕು ಕಟ್ಟಡಗಳ ನಿರ್ಮಾಣ ಮಾಡಲಾಗುತ್ತಿದೆ ಎಂದರು.

ಇದೇ ತಿಂಗಳ 21 ರಂದು ಈ ಕೊಠಡಿ ಉದ್ಘಾಟನೆಯಾಗುತ್ತಿವೆ. ಉಳಿದ ಶಾಲೆ ಕೊಠಡಿಗಳಿಗೆ ಮತ್ತು ಅಂಗನವಾಡಿ ಮತ್ತು ಶೌಚಾಲಯಗಳ ಸುಣ್ಣ ಬಣ್ಣಕ್ಕಾಗಿ ₹7 ಲಕ್ಷ ಬಿಡುಗಡೆ ಮಾಡುತ್ತಿದೆ. ಶಾಲಾ ವಿದ್ಯಾರ್ಥಿಗಳಿಗೆ ಯಾವುದೇ ಕೊರತೆ ಆಗದಂತೆ ನೋಡಿ ಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ. ಉತ್ತಮ ಸಮಾಜ ನಿರ್ಮಾಣವಾಗಲು ಆರೋಗ್ಯದ ಜೊತೆಗೆ ಉತ್ತಮ ಶಿಕ್ಷಣ ನೀಡಬೇಕೆಂದರು.

ಬಿಇಓ ಬಹರುದ್ದೀನ್ ಚೋಪ್ರಾ ಮಾತನಾಡಿ ಈ ಶಾಲೆಯಲ್ಲಿರುವ 110 ಮಕ್ಕಳಿಗೆ ತಕ್ಕಂತೆ ಶಿಕ್ಷಕರಿದ್ದಾರೆ. ಅದಕ್ಕನುಗುಣವಾಗಿ ಶಾಸಕರು 4 ಕೊಠಡಿ ನಿರ್ಮಾಣ ಮಾಡಿಸುತ್ತಿದ್ದು ಕಾಮಗಾರಿ ಉತ್ತಮ ವಾಗಿದೆ. ಯಾವುದೇ ಖಾಸಗಿ ಶಾಲೆಗೂ ಕಡಿಮೆಯಿಲ್ಲ ಎಂದರು.ಗ್ರಾಪಂ ಅಧ್ಯಕ್ಷೆ ದೀಪಾ ದಕ್ಷಿಣಮೂರ್ತಿ ಮಾತನಾಡಿ, ದೇವನೂರು ಕೆರೆ ಏರಿ ಭದ್ರಗೊಳಿಸಿ ಪಕ್ಕದಲ್ಲೇ ಇನ್ನೊಂದು ರಸ್ತೆ ನಿರ್ಮಾಣ ಮಾಡುತ್ತಿರುವುದು ಬಹಳಷ್ಟು ಜನರಿಗೆ ಅನುಕೂಲ ಎಂದರು.

ತಾಪಂ ಇಒ ಪ್ರವೀಣ್, ನಿರ್ಮಿತಿ ಕೇಂದ್ರದ ಎಂಜಿನಿಯರ್ ಗಂಗಾಧರ್, ಚಂದ್ರಶೇಖರ್, ಲೋಕೋಪ ಯೋಗಿ ಇಲಾಖೆ ಎಇಇ ಮಲ್ಲಿಕಾರ್ಜುನ್, ಶಾಲೆ ಮುಖ್ಯ ಶಿಕ್ಷಕ ಮಂಜಾನಾಯ್ಕ, ಸಾರ್ವಜನಿಕರು ಮತ್ತು ಮಕ್ಕಳು ಹಾಜರಿದ್ದರು.

11ಕೆಕೆಡಿಯು3.

ಸಖರಾಯಪಟ್ಟಣ ಸಮೀಪದ ದೇವನೂರಿನ ಸರ್ಕಾರಿ ಶಾಲೆಯಲ್ಲಿ ನಿರ್ಮಿಸುತ್ತಿರುವ ನಾಲ್ಕು ಹೆಚ್ಚುವರಿ ಕೊಠಡಿಗಳ ಕಾಮಗಾರಿಯನ್ನು ಶಾಸಕ ಎಚ್. ಡಿ. ತಮ್ಮಯ್ಯ ವೀಕ್ಷಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೆಚ್ಚಿನ ಬೆಲೆಗೆ ರಸಗೊಬ್ಬರ ಮಾರಾಟ, ಕ್ರಮಕ್ಕೆ ಆಗ್ರಹ
ವಿದ್ಯಾರ್ಥಿಗಳು ತಂತ್ರಜ್ಞಾನ ಅಭಿವೃದ್ಧಿ ಸಂಶೋಧನೆಗಳಲ್ಲಿ ತೊಡಗಿಸಿಕೊಳ್ಳಿ