ಉತ್ತಮ ಆರೋಗ್ಯವಿದ್ದರೆ ಜೀವನ ಆನಂದಿಸುವ ಅವಕಾಶ ಸಿಗುತ್ತದೆ-ಸ್ವಾಮೀಜಿ

KannadaprabhaNewsNetwork |  
Published : Aug 27, 2026, 03:00 AM IST
ಹಾವೇರಿ ನಗರದ ಹುಕ್ಕೇರಿಮಠದ ಶಿವಾನುಭವ ಮಂಟಪದಲ್ಲಿ ಶ್ರಾವಣ ಮಾಸದ ನಿಮಿತ್ತ ಎರಡನೇ ಸೋಮವಾರ ಹಮ್ಮಿಕೊಂಡಿರುವ ವಿಶೇಷ ಕಾರ್ಯಕ್ರಮದಲ್ಲಿ ಹುಕ್ಕೇರಿಮಠ ಡಾ. ಸದಾಶಿವ ಸ್ವಾಮೀಜಿ ಮಾತನಾಡಿದರು. | Kannada Prabha

ಸಾರಾಂಶ

ಸದೃಢ ದೇಹದಲ್ಲಿ ಸದೃಢ ಮನಸ್ಸಿರುತ್ತದೆ ಎನ್ನುವ ಮಾತಿನಂತೆ, ಉತ್ತಮ ಆರೋಗ್ಯ ಇದ್ದರೆ ಮಾತ್ರ, ಜೀವನವನ್ನು ಆನಂದಿಸುವ ಅವಕಾಶ ಸಿಗುತ್ತದೆ ಎಂದು ಹುಕ್ಕೇರಿಮಠದ ಡಾ. ಸದಾಶಿವ ಸ್ವಾಮೀಜಿ ಹೇಳಿದರು.

ಹಾವೇರಿ: ಸದೃಢ ದೇಹದಲ್ಲಿ ಸದೃಢ ಮನಸ್ಸಿರುತ್ತದೆ ಎನ್ನುವ ಮಾತಿನಂತೆ, ಉತ್ತಮ ಆರೋಗ್ಯ ಇದ್ದರೆ ಮಾತ್ರ, ಜೀವನವನ್ನು ಆನಂದಿಸುವ ಅವಕಾಶ ಸಿಗುತ್ತದೆ ಎಂದು ಹುಕ್ಕೇರಿಮಠದ ಡಾ. ಸದಾಶಿವ ಸ್ವಾಮೀಜಿ ಹೇಳಿದರು.

ನಗರದ ಹುಕ್ಕೇರಿಮಠದ ಶಿವಾನುಭವ ಮಂಟಪದಲ್ಲಿ ಶ್ರಾವಣ ಮಾಸದ ನಿಮಿತ್ತ ಎರಡನೇ ಸೋಮವಾರ ಹಮ್ಮಿಕೊಂಡಿರುವ ವಿಶೇಷ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ದಿನನಿತ್ಯದ ವ್ಯಾಯಾಮ, ಯೋಗ, ಧ್ಯಾನವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸತ್ವಯುತ ಆಹಾರ, ಸಾಕಷ್ಟು ನಿದ್ದೆ ಹಾಗೂ ಸಕರಾತ್ಮಕ ಚಿಂತನೆ ಜೊತೆಗೆ ಉತ್ತಮ ಹವ್ಯಾಸಗಳು ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಉತ್ತಮ ಪಡಿಸಲು ಸಹಕಾರಿಯಾಗುತ್ತವೆ. ಏಕೆಂದರೆ ಆರೋಗ್ಯವೇ ಮಹಾಭಾಗ್ಯ ಎಂದರು.

ಭಾರತದ ಸಂಸ್ಕೃತಿ, ಸಂಪ್ರದಾಯಗಳು ಆರೋಗ್ಯದ ಫಲವನ್ನು ನೀಡುವ ಸಂಗತಿಗಳಾಗಿವೆ. ಅನಾದಿ ಕಾಲದಿಂದಲೂ ವೈಜ್ಞಾನಿಕ ಆಧಾರದ ಮೇಲೆಯೇ ಆಚರಣೆಗಳು ನಡೆಯುತ್ತಾ ಬಂದಿವೆ. ಆಧುನಿಕತೆ ಹೆಸರಿನಲ್ಲಿ ನಮ್ಮ ಆಹಾರ ಪದ್ಧತಿಯನ್ನು ಬಿಟ್ಟು, ಅನಾರೋಗ್ಯವನ್ನು ಅಹ್ವಾನ ಮಾಡುತ್ತಿದ್ದೇವೆ. ಹಬ್ಬ, ಹರಿದಿನಗಳು ನಮ್ಮ ಸ್ವಸ್ಥ ಜೀವನದ ಅವಿಭಾಜ್ಯ ಅಂಗಗಳಾಗಿವೆ ಎಂದು ಹೇಳಿದರು.

ಖ್ಯಾತ ವೈದ್ಯ ಡಾ. ಗುಹೇಶ್ವರ ಪಾಟೀಲ ಮಾತನಾಡಿ, ಭಾರತವು ಇಂದು ಮಧುಮೇಹದ ರಾಜಧಾನಿಯಾಗಿದ್ದು, ರೋಗ ಬಂದ ಮೇಲೆ ಚಿಕಿತ್ಸೆ ಮಾಡುವುದಕ್ಕಿಂತ, ರೋಗಗಳು ಬರದಂತೆ ನೋಡಿಕೊಳ್ಳುವುದೇ ಉತ್ತಮ. ಭಾರತದಲ್ಲಿ ಅನಾದಿ ಕಾಲದಿಂದಲೂ ಮಿತ ಆಹಾರ ಮತ್ತು ಸ್ವಸ್ಥ ಆಹಾರಕ್ಕೆ ಮಹತ್ವ ನೀಡಿದ್ದಾರೆ. ಹಲವಾರು ಚಿಕಿತ್ಸಾ ಪದ್ಧತಿಗಳು ಇದ್ದರೂ, ಭಾರತೀಯ ಆರ್ಯುವೇದ ಪದ್ಧತಿಯು ಅತ್ಯಂತ ಪರಿಣಾಮಕಾರಿಯಾಗಿದ್ದು, ಸರ್ವ ರೋಗಗಳಿಗೂ ಯಾವುದೇ ಅಡ್ಡ ಪರಿಣಾಮವಿಲ್ಲದ ಚಿಕಿತ್ಸೆಯಾಗಿದೆ. ಅಡುಗೆ ಮನೆಯಲ್ಲಿಯೇ ನಮ್ಮ ಆರೋಗ್ಯದ ಗುಟ್ಟು ಅಡಗಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಸರ್ಕಾರಿ ವಕೀಲರಾದ ಶಿವಾನಂದ ವಾರ್ತಿ, ನಿವೃತ್ತ ಮುಖ್ಯೋಪಾಧ್ಯಾಯಿನಿ ಚನ್ನಮ್ಮ ಅಂತರವಳ್ಳಿ ಹಾಗೂ ಎಸ್.ಆರ್. ಗೊಡ್ಡೆಮ್ಮಿ ಅವರನ್ನು ಶ್ರೀಮಠದದಿಂದ ಸನ್ಮಾನಿಸಿ ಗೌರವಿಸಲಾಯಿತು. ಹುಕ್ಕೇರಿಮಠದ ಅಕ್ಕನ ಬಳಗದವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

ಸಮಾರಂಭದಲ್ಲಿ ಶಿವಬಸವ ದೇವರು, ಬಸವಲಿಂಗ ದೇವರು, ಎಸ್.ಎಂ. ಹಾಲಯ್ಯನವರಮಠ, ಅಭಿಷೇಕ ಉಪ್ಪಿನ, ಎಸ್.ಎಸ್. ಮುಷ್ಠಿ, ವೀರಣ್ಣ ಅಂಗಡಿ, ಮಹಾಂತೇಶ ಮಠಮಠ, ಸಿ.ಜಿ. ತೋಟಣ್ಣನವರ, ಜೆ.ಬಿ. ಸಾವಿರಮಠ, ಮಹಾಂತಪ್ಪ ಹಲಗಣ್ಣನವರ, ಬಿ. ಬಸವರಾಜ, ಎಂ. ಎಸ್. ಹಿರೇಮಠ, ಎಸ್.ಎನ್. ಮಳೆಪ್ಪನವರ, ಮತ್ತಿತರರು ಉಪಸ್ಥಿತರಿದ್ದರು.

ಪ್ರಾಚಾರ್ಯ ಸಿ.ವಿ. ರವಿ ಸ್ವಾಗತಿಸಿದರು. ಎಸ್.ವಿ. ಹಿರೇಮಠ ನಿರೂಪಿಸಿದರು. ಎಸ್.ಎಸ್. ಮಠಪತಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉಡುಪಿ - ಹೋಟೆಲ್ ಉದ್ದಿಮೆದಾರರ ಸಹಕಾರ ಸಂಘದ ಮಹಾಸಭೆ
ಸೆ. 8, ಮೊಂತಿ ಫೆಸ್ತ್‌ಗೆ ರಜೆ ನೀಡಲು ಸಿಎಂಗೆ ಕಥೊಲಿಕ್ ಸಭಾ ಮನವಿ