ಕ್ರೀಡೆಯಿಂದ ಸದೃಢ ಆರೋಗ್ಯ ಸಾಧ್ಯ: ಪುಟ್ಟಗೌರಮ್ಮ

KannadaprabhaNewsNetwork |  
Published : Sep 03, 2026, 01:45 AM IST
ಕ್ರೀಡೆಯಿಂದ ಆರೋಗ್ಯ ಸದೃಡ- ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕಿ  ಪುಟ್ಟಗೌರಮ್ಮ | Kannada Prabha

ಸಾರಾಂಶ

ಲಯನ್ಸ್ ಸಂಯುಕ್ತ ಪದವಿಪೂರ್ವ ಕಾಲೇಜು ಹಾಗೂ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಸಹಯೋಗದಲ್ಲಿ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟವು ಪಟ್ಟಣದ ಶ್ರೀ ಮಹದೇಶ್ವರ ಕ್ರೀಡಾಂಗಣದಲ್ಲಿ ಜರುಗಿತು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಲಯನ್ಸ್ ಸಂಯುಕ್ತ ಪದವಿಪೂರ್ವ ಕಾಲೇಜು ಹಾಗೂ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಸಹಯೋಗದಲ್ಲಿ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟವು ಪಟ್ಟಣದ ಶ್ರೀ ಮಹದೇಶ್ವರ ಕ್ರೀಡಾಂಗಣದಲ್ಲಿ ಜರುಗಿತು.

ಕ್ರೀಡಾಕೂಟವನ್ನು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಎಚ್.ಎನ್.ಪುಟ್ಟಗೌರಮ್ಮ ಉದ್ಘಾಟಿಸಿ ಮಾತನಾಡಿ, ಕ್ರೀಡೆ ಎನ್ನುವುದು ಶಿಕ್ಷಣದ ಒಂದು ಅವಿಭಾಜ್ಯ ಅಂಗ. ಪ್ರಾಥಮಿಕ ಹಂತದಿಂದ ಮಕ್ಕಳು ಕ್ರೀಡೆಯಲ್ಲಿ ತೊಡಗಿಸಿಕೊಂಡು ಬಂದು ಅವರಲ್ಲಿರುವ ಸೂಕ್ತ ಪ್ರತಿಭೆಯನ್ನು ಹೊರತೆಗೆದು ತರಬೇತಿಗೊಳಿಸಿ ಗ್ರಾಮೀಣ ಹಂತದಿಂದ ರಾಜ್ಯ ಹಾಗೂ ರಾಷ್ಟ್ರ ಮಟ್ಟದವರೆಗೆ ಪ್ರತಿಭಾವಂತರನ್ನು ಆಯ್ಕೆ ಮಾಡಿ ಕಳುಹಿಸಿಕೊಟ್ಟು ದೇಶದ ಸಂಪತ್ತು ಆಗಿ ಮಾಡಲು ನಮ್ಮ ಶಿಕ್ಷಕರು ಶ್ರಮಿಸಿದ್ದಾರೆ. ವಿದ್ಯಾರ್ಥಿಗಳು ಕ್ರೀಡಾ ಮನೋಭಾವನೆಯಿಂದ ಸ್ಪಧಿ೯ಸುವಂತಾಗಬೇಕು. ಕ್ರೀಡೆಯಿಂದ ದೈಹಿಕ ಆರೋಗ್ಯ ಸದೃಢವಾಗುತ್ತದೆ, ಮನಸ್ಸಿಗೆ ಉಲ್ಲಾಸವಾಗಲಿದೆ ಎಂದರು.

ನಮ್ಮ ದೇಶದ ಪ್ರಧಾನಿಯವರು ಹೇಳಿರುವ ಮಾದಕ ವಸ್ತು ವ್ಯಸನಮುಕ್ತ ಭಾರತವನ್ನು ಮಾಡಬೇಕಿದೆ ಎಂಬ ಘೋಷವಾಕ್ಯ ನಿಟ್ಟಿನಲ್ಲಿ ನಮ್ಮ ಯುವಜನ ಕ್ರೀಡೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳುವುದ್ದರಿಂದ ಇಂತಹ ದುಶ್ಟಟದಿಂದ ಹೊರಬರಲು ಸಾಧ್ಯವಾಗಲಿದೆ. ಆದರಲ್ಲೂ ನಮ್ಮ ವಿದ್ಯಾರ್ಥಿಗಳು ಮೊಬೈಲ್ ವ್ಯಸನದಿಂದ ಹೊರಬರಬೇಕಾದರೇ ಕ್ರೀಡೆ ಬಹಳ ಸಹಕಾರಿಯಾಗಲಿದೆ. ಎಲ್ಲಾ ವಿದ್ಯಾರ್ಥಿಗಳು ನಿಮ್ಮ ವಚನಲ್ಲಿರುವ ಕ್ರೀಡಾ ಅವಶ್ಯವನ್ನು ಜೀವನದ ಒಂದು ಅಂಗವಾಗಿ ಉತ್ತಮ ಜೀವನವನ್ನು ಕಟ್ಟಿಕೊಳ್ಳಬೇಕು ಎಂದರು.

ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ರಾಜೇಂದ್ರ, ಬಿಇಒ ಮಂಜುಳಾ, ಸರ್ಕಾರಿ ಸಂಘದ ಅಧ್ಯಕ್ಷ ಎ.ಜೋಸೆಫ್ ಅಲೆಕ್ಸಾಂಡರ್, ಜಿಲ್ಲಾ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಪ್ರಿಯಾಶಂಕರ್, ಲಯನ್ಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಿ.ಎಂ.ಪುಟ್ಟಮಾದಪ್ಪ, ಕಾರ್ಯದರ್ಶಿ ಕೆ.ವಿ.ವೆಂಕಟೇಶ್, ಖಜಾಂಚಿ ಎಸ್.ನಾಗರಾಜು, ಓ.ವಿ.ಸತೀಶ್, ಲಯನ್ಸ್ ಕಾಲೇಜು ಪ್ರಾಂಶುಪಾಲ ವಿನುತ ಎನ್., ಎಸ್.ವಿ.ಕೆ ಕಾಲೇಜು ಪ್ರಾಂಶುಪಾಲರು ಡಾ.ಮಂಗಳಮೂರ್ತಿ, ವಾಸವಿ ಕಾಲೇಜು ಪ್ರಾಂಶುಪಾಲರು ವಾಸವಾಂಬ, ನಿವೃತ್ತ ದೈಹಿಕ ಶಿಕ್ಷಣ ಪರಿವೀಕ್ಷಕ ಪ್ರಕಾಶ್, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಸುರೇಶ್, ಸುಂದರರಾಜು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೆರೆಗೆ ನೀರು ತುಂಬಿಸಲು ಆಗ್ರಹಿಸಿ ರೈತರ ಪ್ರತಿಭಟನೆ
ಅಧ್ಯಾಪಕರು ಕೌಶಲ್ಯಗಳನ್ನು ರೂಪಿಸಿಕೊಳ್ಳಬೇಕು: ಪ್ರೊ.ಡಿ.ಎಸ್.ಪ್ರತಿಮಾ