ಲಕ್ಷ್ಮೇಶ್ವರ: ಸಮೀಪದ ಗುಲಗಂಜಿಕೊಪ್ಪದ ದುಂಡಿ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ಮಂಗಳವಾರ ಪಟ್ಟಣದ ತಾಯಿ ಪಾರ್ವತಿ ಮಕ್ಕಳ ಬಳಗದ ಕಲಾ ಹಾಗೂ ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಿಂದ ರಾಷ್ಟ್ರೀಯ ಸೇವಾ ಯೋಜನೆಯ(ಎನ್‌ಎಸ್‌ಎಸ್)ವಾರ್ಷಿಕ ಶಿಬಿರದಲ್ಲಿ ವಿಶ್ವ ಆರೋಗ್ಯ ದಿನಾಚರಣೆ ಪ್ರಯುಕ್ತ ಮಹಿಳಾ ಆರೋಗ್ಯದ ಜಾಗೃತಿ ಕುರಿತು ಕಾರ್ಯಕ್ರಮ ಆಯೋಜಿಸಲಾಗಿತ್ತು.ಕಾರ್ಯಕ್ರಮದಲ್ಲಿ ಮಹಿಳಾ ಆರೋಗ್ಯ ಕುರಿತು ಉಪನ್ಯಾಸ ನೀಡಿದ ಸಮುದಾಯ ಆರೋಗ್ಯ ಕೇಂದ್ರದ ಪ್ರಕಾಶ ಕರ್ಜಗಿ ಅವರು, ಮಹಿಳೆಯರು ಆರೋಗ್ಯವನ್ನು ಚೆನ್ನಾಗಿ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ವಿಶೇಷ ಆದ್ಯತೆ ನೀಡಬೇಕು. ಮಹಿಳೆ ಮನೆಯಲ್ಲಿ ಹಾಗೂ ಮನೆಯ ಹೊರಗೂ ಆಂತರಿಕ ಮತ್ತು ಬಾಹ್ಯವಾಗಿಯೂ ಸಂಪೂರ್ಣವಾಗಿ ಸುರಕ್ಷತೆಯಿಂದಿರಲು ಅಗತ್ಯವಿರುವ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಈಶ್ವರಪ್ಪ ಸೊರಟೂರ ವಹಿಸಿದ್ದರು. ಪತ್ರಕರ್ತ ದಿಗಂಬರ ಪೂಜಾರ, ನೀಲಪ್ಪಗೌಡ ದುರಗಣ್ಣವರ, ನಿಂಗಪ್ಪ ಶಿವಬಸಣ್ಣವರ, ಚನ್ನಬಸಯ್ಯ ಗಡ್ಡದೇವರಮಠ, ಪ್ರಾಚಾರ್ಯ ವಿಜಯಕುಮಾರ ಬಿಳಿಎಲೆ, ಎಸ್‌ಎಸ್‌ಎಸ್ ಘಟಕ ಅಧಿಕಾರಿ ಪರಮೇಶ ತಡಹಾಳ, ರೇವಂತ ಕ್ಷತ್ರಿಯ, ಪ್ರಕಾಶ ಹರ್ಲಾಪುರ, ಉಪನ್ಯಾಸಕ ಎಸ್.ಬಿ. ಅಣ್ಣಿಗೇರಿ, ರವಿಕುಮಾರ ನೀರಲಗಿ, ಸಂಗೀತಾ ಲಕ್ಕಣ್ಣವರ, ಮಮತಾ ನಡುವಿನಮನಿ, ಮಾಲಾಶ್ರೀ ಹುರಳಿಕುಪ್ಪಿ, ಶಭಾನಾ ಕಲಕುಟ್ರಿ ಇದ್ದರು. ವಿದ್ಯಾರ್ಥಿನಿ ಪವಿತ್ರಾ ಲುಲ್ಲಿ, ಗಾಯತ್ರಿ ನಾಗನಗೌಡ್ರ, ದಿವ್ಯ ಮಣ್ಣವಡ್ಡರ ಕಾರ್ಯಕ್ರಮ ನಿರ್ವಹಿಸಿದರು.ಪದ್ಮಪ್ರಿಯಾ ಶೆಟ್ಟರಗೆ ಶೇ. 98.03 ಅಂಕ