ಅಮೃತೇಶ್ವರ ಪ್ರೌಢಶಾಲೆಯಲ್ಲಿ ಯೋಗ ದಿನ । ಸಾಧಕರಿಗೆ ಸನ್ಮಾನ
ಯೋಗದ ಅಳವಡಕೆಯಿಂದ ಉತ್ತಮ ಆಯುರಾರೋಗ್ಯ ಹೊಂದಬಹುದು ಎಂದು ಕುರುಬರಹಳ್ಳಿ ಯೋಗ ಮತ್ತು ಆಧ್ಯಾತ್ಮಿಕ ಕೇಂದ್ರದ ಮುಖ್ಯಸ್ಥ ಶ್ರೀ ರಾಮು ಗುರೂಜಿ ಹೇಳಿದ್ದಾರೆ.
ಸಮೀಪದ ನೇರಲಕೆರ ಶ್ರೀ ಅಮೃತೇಶ್ವರ ಪ್ರೌಢಶಾಲಾ ಆವರಣದಲ್ಲಿ ಶನಿವಾರ ಏರ್ಪಾಡಾಗಿದ್ದ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡುತ್ತಿದ್ದರು.ಯೋಗದಿಂದ ಉತ್ತಮ ಜೀವನ ಕ್ರಮವನ್ನು ಅನುಸರಿಸಬಹುದು. ದಿನಂಪ್ರತಿ ಉಲ್ಲಾಸದಿಂದ ಜೀವನ ನೆಡೆಸಬಹುದು ಎಂದು ಹೇಳಿದರು.
ಸ್ಥಳೀಯ ಸಲಹಾ ಸಮಿತಿ ಉಪಾಧ್ಯಕ್ಷರಾದ ಷಡಕ್ಷರಪ್ಪ ಮಾತನಾಡಿ, ಯೋಗ ಆಚರಣೆಯ ಮೂಲಕ ಅಸ್ತಮ ಇತ್ಯಾದಿ ಖಾಯಿಲೆಗಳನ್ನು ತಡೆಗಟ್ಟಬಹುದು ಎಂಬುದನ್ನು ತಿಳಿಸಿದರು.
ಶಾಲೆಯ ಮುಖ್ಯೋಪಾಧ್ಯಾಯ ಹಾಲೇಶ್ ಕೆ.ಟಿ. ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಆಚರಣೆಯ ಔಚಿತ್ಯವನ್ನು ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಉಚಿತ ಟಿ ಶರ್ಟ್ಸ್‌ಗಳನ್ನು ಕೊಡುಗೆಯಾಗಿ ನೀಡಿದ ಮಲ್ಲಿಕಾರ್ಜುನ್ ಎನ್ ಬಿ.ಅವರನ್ನು ಸನ್ಮಾನಿಸಲಾಯಿತು.
ಶಾಲೆಗೆ ಉತ್ತಮ ಫಲಿತಾಂಶ ತಂದುಕೊಟ್ಟಿರುವ ಶ್ರೀ ಅಮೃತೇಶ್ವರ ಪ್ರೌಢಶಾಲೆಯ ಎಲ್ಲ ಸಿಬ್ಬಂದಿಯವರನ್ನು ಸ್ಥಳೀಯ ಸಲಹಾ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
ನೇರಲಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಹೇಮಶೇಖರಪ್ಪ, ಸದಸ್ಯರು, ಶ್ರೀ ಅಮೃತೇಶ್ವರ ಪ್ರೌಢಶಾಲೆಯ ಸ್ಥಳೀಯ ಸಲಹಾ ಸಮಿತಿ ಪದಾಧಿಕಾರಿಗಳು, ಗ್ರಾಮಸ್ಥರು, ಸುತ್ತಮುತ್ತಲ ಗ್ರಾಮಸ್ಥರು, ಯೋಗಸಾಧಕರಾದ ಶಾರದಮ್ಮ ಮತ್ತು ನವೀನ್, ದೈಹಿಕ ಶಿಕ್ಷಕರಾದ ಪಂಚಾಕ್ಷರಪ್ಪ, ಸವಿತಮ್ಮ, ಸತೀಶ್ ನಂದಿಹಳ್ಳಿ ಭಾಗವಹಿಸಿದ್ದರು.