ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ ಸರ್ಕಾರ ಪತನ

KannadaprabhaNewsNetwork |  
Published : Jun 22, 2025, 01:19 AM IST
ಗುಬ್ಬಿತಾಲ್ಲೂಕಿನ ಸಿಎಸ್ ಪುರ ಗ್ರಾಮದಲ್ಲಿ 350 ಲಕ್ಷದ ಮೊತ್ತದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನೂತನ ಕಟ್ಟಡವನ್ನು ಉದ್ಘಾಟಿಸಿದ ತುರುವೇಕೆರೆ ಶಾಸಕ ಎಂ. ಟಿ ಕೃಷ್ಣಪ್ಪ | Kannada Prabha

ಸಾರಾಂಶ

ನವೆಂಬರ್ ಡಿಸೆಂಬರ್ ತಿಂಗಳಲ್ಲಿ ಒಳಗೆ ಕಾಂಗ್ರೆಸ್ ಸರ್ಕಾರ ಪತನವಾಗುತ್ತದೆ ಮುಂದಿನ ದಿನದಲ್ಲಿ ಒಳ್ಳೆಯ ಸರ್ಕಾರ ಆಡಳಿತಕ್ಕೆ ಬರುತ್ತದೆ ಎಂದು ತುರುವೇಕೆರೆ ಶಾಸಕ ಎಂ. ಟಿ ಕೃಷ್ಣಪ್ಪ ತಿಳಿಸಿದರು.

ಕನ್ನಡಪ್ರಭ ವಾರ್ತೆ ಗುಬ್ಬಿ

ನವಂಬರ್ ಡಿಸೆಂಬರ್ ತಿಂಗಳಲ್ಲಿ ಒಳಗೆ ಕಾಂಗ್ರೆಸ್ ಸರ್ಕಾರ ಪತನವಾಗುತ್ತದೆ ಮುಂದಿನ ದಿನದಲ್ಲಿ ಒಳ್ಳೆಯ ಸರ್ಕಾರ ಆಡಳಿತಕ್ಕೆ ಬರುತ್ತದೆ ಎಂದು ತುರುವೇಕೆರೆ ಶಾಸಕ ಎಂ. ಟಿ ಕೃಷ್ಣಪ್ಪ ತಿಳಿಸಿದರು.

ತಾಲೂಕಿನ ಸಿಎಸ್ ಪುರ ಗ್ರಾಮದಲ್ಲಿ 350 ಲಕ್ಷದ ಮೊತ್ತದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ ಅವರು, ಸಿದ್ದರಾಮಯ್ಯನವರು ಜೆಡಿಎಸ್ ಬಿಟ್ಟು ಕಾಂಗ್ರೆಸ್ ಗೆ ಬಾ ಎಂದು ನನ್ನನ್ನು ಕರೆದರು. ರೊಟ್ಟಿ ತಿಂದು ಪಾರ್ಟಿ ಕಟ್ಟಿರುವ ಪಕ್ಷವನ್ನು ಬಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಏಕೆ ಹೋಗಲಿ. ನಮ್ಮ ಪಕ್ಷ ರೈತರಿಗಾಗಿಯೇ ಇರುವ ಪಕ್ಷ. ಕಾಂಗ್ರೆಸ್‌ಗೆ ಹೋಗುವ ಪ್ರಶ್ನೆಯೇ ಇಲ್ಲ ಮುಂದಿನ ಬಾರಿಯೂ ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ ಎಂದರು.

ಸಿ ಎಸ್ ಪುರ ಡಿಗ್ರಿ ಕಾಲೇಜುಗಳಿಗೆ ಶಾಸಕರ ಅನುದಾನದಲ್ಲಿ 5 ಲಕ್ಷ ರು. ಮಂಜೂರು ಮಾಡಿಸುತ್ತೇನೆ. ಸಿ ಎಸ್ ಪುರ ಹೋಬಳಿಗೆ ಪಾಲಿಟೆಕ್ನಿಕಲ್ ಕಾಲೇಜು ಬೇಕಾಗಿದೆ, ತುರುವೇಕೆರೆಗೆ ಕಾನೂನು ಕಾಲೇಜು ಬೇಕಾಗಿರುವುದರಿಂದ ಮುಂದಿನ ದಿನದಲ್ಲಿ ಸರ್ಕಾರದಲ್ಲಿ ಚರ್ಚಿಸಿಸುತ್ತೇನೆ ಎಂದರು.

ಸಿಎಸ್ ಪುರ ಡಿಗ್ರಿ ಕಾಲೇಜಿಗೆ ವಿದ್ಯಾರ್ಥಿಗಳು ಓಡಾಡಲು ಅನುಕೂಲವಾಗುವ ನಿಟ್ಟಿನಲ್ಲಿ ಕೆಎಸ್ ಆರ್ ಟಿಸಿ ಬಸ್ ಡಿಪೋ ವ್ಯವಸ್ಥಾಪಕರ ಜೊತೆ ಚರ್ಚಿಸಿ ಬಸ್ ಬಿಡಿಸುವುದಾಗಿ ಭರವಸೆ ನೀಡಿದರು. ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಡಾ. ರಾಮಕೃಷ್ಣ ರೆಡ್ಡಿ ಮಾತನಾಡಿ, ಹಲವು ಸೌಲಭ್ಯ ಇರುವ ಕಾಲೇಜು ಕಟ್ಟಡ ಇಂದು ಲೋಕಾರ್ಪಣೆ ಗೊಂಡಿದ್ದು, ಈ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲ ವಾಗಲಿದೆ. ವಿದ್ಯಾರ್ಥಿಗಳು ಹೆಚ್ಚಿನ ರೀತಿಯಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ದೂರದ ತಾಲೂಕು ಕೇಂದ್ರಕ್ಕೆ ಹೋಗಿ ಬರಲು ಅನಾನುಕೂಲ ವಾಗುವ ಹಿನ್ನೆಲೆಯಲ್ಲಿ ಸ್ಥಳೀಯ ವಿದ್ಯಾರ್ಥಿಗಳು ಕಾಲೇಜಿನ ಅನುಕೂಲ ಪಡೆದುಕೊಂಡು ವಿದ್ಯಾಭ್ಯಾಸದ ಕಡೆ ಗಮನಹರಿಸುವ ಮೂಲಕ ಉನ್ನತ ಮಟ್ಟದ ಸ್ಥಾನ ಪಡೆಯಲು ಅನುಕೂಲ ವಾಗುತ್ತದೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಈ ಕಾಲೇಜಿಗೆ ನೂತನವಾಗಿ ಬಿಬಿಎ ಕೋರ್ಸ್ ನೀಡುವುದಾಗಿ ಹೇಳಿದರು.ಕಾಲೇಜು ಅಭಿವೃದ್ಧಿ ಸದಸ್ಯ ನಂಜೇಗೌಡ ಮಾತನಾಡಿ, ಸಿಎಸ್ ಪುರಕ್ಕೆ ಪ್ರಥಮ ದರ್ಜೆ ಕಾಲೇಜಿನ ಅವಶ್ಯಕತೆ ಇರುವ ಬಗ್ಗೆ ಶಾಸಕರಿಗೆ ಮನವರಿಕೆ ಮಾಡಿಕೊಟ್ಟ ನಂತರದಲ್ಲಿ ಕಾಲೇಜು ಮಂಜೂರಾತಿಯನ್ನು ಶಾಸಕರು ಮಾಡಿಸಿದರು. ನಂತರ ಕಾಲೇಜು ನಿರ್ಮಾಣಕ್ಕೆ ಜಾಗದ ಕೊರತೆ ಇದ್ದಕಾರಣ ಕಾಲೇಜಿಗೆ ಸೂಕ್ತ ಜಾಗವನ್ನು ಗುರುತಿಸಿಕೊಟ್ಟರು. ಇದಕ್ಕೆ ಗೃಹ ಮಂಡಳಿ ಮೂಲಕ 350 ಲಕ್ಷ ವೆಚ್ಚದಲ್ಲಿ ಉತ್ತಮ ಕಾಲೇಜು ಕಟ್ಟಡ ನಿರ್ಮಾಣವಾಗಿದೆ ಎಂದರು. ಈ ಭಾಗದ ಪೋಷಕರು ಮತ್ತು ಸ್ಥಳೀಯರು ಪಿಯುಸಿ ಮುಗಿದ ವಿದ್ಯಾರ್ಥಿಗಳು ಪ್ರಥಮ ದರ್ಜೆ ಕಾಲೇಜಿಗೆ ಪ್ರವೇಶ ಪಡೆಯಲು ಮುಂದಾಗಬೇಕು ಎಂದರು.ಮುಖಂಡ ಚೆನ್ನೇನಹಳ್ಳಿ ನರಸಿಂಹಮೂರ್ತಿ ಮಾತನಾಡಿ, ಕಾಲೇಜಿನ ಅಭಿವೃದ್ಧಿ ಗೆ ಹಾಗೂ ಮಕ್ಕಳ ಪ್ರವೇಶಕ್ಕೆ ಎಲ್ಲಾ ರೀತಿಯ ಸಹಕಾರ ಹಾಗೂ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಕಾಲೇಜು ಪ್ರವೇಶ ಶುಲ್ಕವನ್ನು ಸಿಡಿಸಿ ಸದಸ್ಯರು ಭರಿಸಲು ಮುಂದಾಗಿದ್ದು ಅದರಂತೆ ನಾನು ವೖಯಕ್ತಿಕವಾಗಿ ಹತ್ತು ವಿದ್ಯಾರ್ಥಿಗಳ ಕಾಲೇಜು ಶುಲ್ಕ ಭರಿಸುವುದಾಗಿ ತಿಳಿಸಿದರು.ಪ್ರಾಂಶುಪಾಲ ಡಾ.ಆರ್.ಪುಟ್ಟರಾಜು ಪ್ರಾಸ್ತಾವಿಕವಾಗಿ ಮಾತನಾಡಿ, ಉತ್ತಮ ವಾತಾವರಣ ಇರುವ ಸ್ಥಳವನ್ನು ತುರುವೇಕೆರೆ ಶಾಸಕರ ಒದಗಿಸಿಕೊಟ್ಟಿದ್ದಾರೆ ಎಂದು ಅವರಿಗೆ ಧನ್ಯವಾದ ಅರ್ಪಿಸಿದರು. ಈ ಸ್ಥಳಕ್ಕೆ ಸರ್ಕಾರಿ ಬಸ್ ಸೌಲಭ್ಯ ಒದಗಿಸುವಂತೆ ಮಾನವಿ ಮಾಡಿದರು.ಸಮಾರಂಭದಲ್ಲಿ ಉಪನ್ಯಾಸಕರಾದ ರಮ್ಯ ಕೆ.ಆರ್. ಅಶೊಕ್ ಕೆ.ಎ. ನಾಗರಾಜು, ಗಂಗಣ್ಣ, ಕೆಸಿ ಬಸವರಾಜು, ಲೋಹಿತ್, ಗ್ರಾಮ ಪಂಚಾಯತಿ ಅಧ್ಯಕ್ಷೆ ದುರ್ಗಮ್ಮ, ಅಪ್ಪಣ್ಣ ಗೌಡ, ಭೀರಮಾನಹಳ್ಳಿ ನರಸೇಗೌಡ,ಈಶ್ವರ್ ಗೌಡ, ನವೀನ್, ವಕೀಲ ಜಗದೀಶ್, ಗಿರೀಶ್, ಅನುಸೂಯಮ್ಮ, ಮಹಾ ಲಕ್ಷ್ಮಮ್ಮ, ವಿ.ಎನ್.ಸೌಮ್ಯ, ಕೆ.ಎಸ್.ಆಶಾ, ಎಸ್ಒ ಕಾಂತರಾಜು, ಅಂಬರೀಶ್, ರಾಜೇಶ್, ವೆಂಕಟಚಾಲಯ್ಯ, ಗೋವಿಂದರಾಜು ಇತರರಿದ್ದರು.

PREV

Recommended Stories

ಬಾಗಲಕೋಟೆ ತೋಟಗಾರಿಕಾ ವಿಜ್ಞಾನ ವಿವಿಗೆ ಅನುದಾನ: ಸಚಿವ
ಸಂಭ್ರಮದ ಮೌನೇಶ್ವರ ಜಾತ್ರಾ ಮಹೋತ್ಸವ