ಸಮಗ್ರ ಕೃಷಿ ಪದ್ಧತಿಯಿಂದ ಉತ್ತಮ ಆದಾಯ: ಚಂದ್ರಶೇಖರ ನರಸಮ್ಮನವರ

KannadaprabhaNewsNetwork |  
Published : Oct 15, 2025, 02:07 AM IST
ಉಂಡೇನಹಳ್ಳಿ ಗ್ರಾಮದಲ್ಲಿ ಭಾರತೀಯ ಕಿಸಾನ್ ಸಂಘದ ಪ್ರಶಿಕ್ಷಣ ವರ್ಗ ಕಾರ್ಯಕ್ರಮ ನಡೆಯಿತು. | Kannada Prabha

ಸಾರಾಂಶ

ಪಟ್ಟಣದಲ್ಲಿನ ಕೃಷಿ ಇಲಾಖೆಯು ರೈತರಿಗೆ ಅನೇಕ ಸೌಲಭ್ಯ ನೀಡುತ್ತಿವೆ. ಗುಣಮಟ್ಟದ ಬಿತ್ತನ ಬೀಜ, ಕ್ರಿಮಿನಾಶಕ, ಕೃಷಿ ಸಲಕರಣೆಗಳು ದೊರೆಯುತ್ತವೆ. ರೈತರು ಇವುಗಳನ್ನು ಉಪಯೋಗಿಸಿಕೊಂಡು ಹೆಚ್ಚಿನ ಇಳುವರಿ ಪಡೆದುಕೊಂಡು ಲಾಭದಾಯಕ ಕೃಷಿ ಮಾಡಬೇಕು.

ಲಕ್ಷ್ಮೇಶ್ವರ: ರೈತರು ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಂಡು ಹೆಚ್ಚಿನ ಲಾಭ ಗಳಿಸಬೇಕು ಹಾಗೂ ಸಾವಯವ ಕೃಷಿ ಪದ್ಧತಿಯು ರೈತರಿಗೆ ವರದಾನವಾಗಿದೆ ಎಂದು ರೈತ ಸಂಪರ್ಕ ಕೇಂದ್ರದ ಸಹಾಯಕ ನಿರ್ದೇಶಕ ಚಂದ್ರಶೇಖರ ನರಸಮ್ಮನವರ ತಿಳಿಸಿದರು.

ಸೋಮವಾರ ಸಮೀಪದ ಉಂಡೇನಹಳ್ಳಿ ಗ್ರಾಮದ ಶೈಲಜಾ ಬಸವರಾಜ ಗುಡ್ಡಳ್ಳಿ ಅವರ ತೋಟದಲ್ಲಿ ಭಾರತೀಯ ಕಿಸಾನ್ ಸಂಘದ ತಾಲೂಕು ಘಟಕದ ಪದಾಧಿಕಾರಿಗಳ ಪ್ರಶಿಕ್ಷಣ ವರ್ಗ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪಟ್ಟಣದಲ್ಲಿನ ಕೃಷಿ ಇಲಾಖೆಯು ರೈತರಿಗೆ ಅನೇಕ ಸೌಲಭ್ಯ ನೀಡುತ್ತಿವೆ. ಗುಣಮಟ್ಟದ ಬಿತ್ತನ ಬೀಜ, ಕ್ರಿಮಿನಾಶಕ, ಕೃಷಿ ಸಲಕರಣಗಳು ದೊರೆಯುತ್ತವೆ. ರೈತರು ಇವುಗಳನ್ನು ಉಪಯೋಗಿಸಿಕೊಂಡು ಹೆಚ್ಚಿನ ಇಳುವರಿ ಪಡೆದುಕೊಂಡು ಲಾಭದಾಯಕ ಕೃಷಿ ಮಾಡಬೇಕು. ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡು ಗುಣಮಟ್ಟದ ಬೆಳೆಗಳನ್ನು ಬೆಳೆಯಲು ರೈತರಿಗೆ ತಿಳಿಸಿದರು.ಜಿಲ್ಲಾ ಅಧ್ಯಕ್ಷ ಎಸ್.ಎಸ್. ಪಾಟೀಲ ಸಂಘದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಭಾರತೀಯ ಕಿಸಾನ್ ಸಂಘ ಉತ್ತರ ಪ್ರಾಂತ ಕರ್ನಾಟಕ ಪ್ರದೇಶ ಅಧ್ಯಕ್ಷ ವಿವೇಕ ಮೊರೆ, ಉತ್ತರ ಪ್ರಾಂತ ಕರ್ನಾಟಕ ಪ್ರದೇಶ ಪ್ರಧಾನ ಕಾರ್ಯದರ್ಶಿ ಪುಟ್ಟಸ್ವಾಮಿ, ನಿವೃತ್ತ ಸೈನಿಕ ಬಸವರಾಜ ಗುಡ್ಡಳ್ಳಿ, ಧಾರವಾಡ ಜಿಲ್ಲಾ ಅಧ್ಯಕ್ಷ ಗುರುನಾಥ ಗೌಡ್ರು, ಕೃಷಿ ಇಲಾಖೆ ಅಧಿಕಾರಿಗಳು ಚಂದ್ರಶೇಖರ ನರಸಮ್ಮನವರ, ತೋಟಗಾರಿಕೆ ಇಲಾಖೆ ಲಕ್ಷ್ಮೇಶ್ವರ ಶಾಖೆಯ ಶಂಭುಲಿಂಗ ನೆಗಳೂರು ಇವರು ತೋಟಗಾರಿಕೆ ಇಲಾಖೆಯ ಸಹಾಯದಿಂದ ಪ್ರತಿ ತೋಟಗಾರಿಕೆ ರೈತರು ಜೇನು ಸಾಕಣೆ ಮಾಡಲು ಇಲಾಖೆ ಸಹಾಯ ಮಾಡುತ್ತದೆ.

ರೈತ ಸಾಕಾಣಿಕೆ ಮಾಡುವುದರಿಂದ ಬೆಳೆಗಳಲ್ಲಿ ಹೆಚ್ಚಿನ ಇಳುವರಿ ಪಡೆಯಬಹುದು. ಜತೆಗೆ ಜೇನುತುಪ್ಪವನ್ನು ಕೂಡ ತಾಜಾ ಆಗಿ ಸಾಕಷ್ಟು ಪ್ರಮಾಣದಲ್ಲಿ ಪಡೆಯಬಹುದು. ಕೃಷಿ ಇಲಾಖೆಯು ಶೇ. 90ರಷ್ಟು ಸಹಾಯಧನದಲ್ಲಿ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಿ ಎಂದರು.

ಪ್ರಾಂತ ಅಧ್ಯಕ್ಷ ವಿವೇಕ ಮೊರೆ ಜೀ ಮಾತನಾಡಿ, ಭಾರತೀಯ ಕಿಸಾನ್ ಸಂಘ ಭಾರತದಾದ್ಯಂತ 70 ಲಕ್ಷ ಸದಸ್ಯರನ್ನು ಹೊಂದಿದೆ ಎಂದರು.

ಸಂಘಟನೆಯಲ್ಲಿ ಬಲವಿದೆ. ಸಂಘವನ್ನು ಬಲಪಡಿಸುವ ನಿಟ್ಟಿನಲ್ಲಿ ರೈತರಿಗೆ ಬಹಳಷ್ಟು ಅನುಕೂಲವಾಗುತ್ತದೆ. ಸಂಘಟನೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಎಂದು ರೈತರಿಗೆ ತಿಳಿಸಿದರು.

ಈ ವೇಳೆ ನಿವೃತ್ತ ಸೈನಿಕ ಬಸವರಾಜ ಗುಡ್ಡಳ್ಳಿ ಅವರನ್ನು ಭಾರತೀಯ ಕಿಸಾನ್ ಸಂಘದ ಪದಾಧಿಕಾರಿಗಳು ಸನ್ಮಾನಿಸಿದರು. ಸಮಾರಂಭದಲ್ಲಿ ಜಗದೀಶ ಸಂಕನಗೌಡ್ರು, ರಮೇಶ ಕೋಳಿವಾಡ, ರಾಮನಗೌಡ್ರು ಮಾಗಡಿ, ಚನ್ನಪ್ಪ ಷಣ್ಮುಖಿ, ಗೊಜನೂರ, ಅತಿಥಿಗಳಾಗಿ ಭಾಗವಹಿಸಿದ್ದರು. ಮಧುಮಾಲತಿ ಈಳಗೇರ, ಚಂದ್ರಗೌಡ್ರು ವಸಂತ ಗೌಡ್ರು, ಸುರೇಶ ಬಾಗಲದ, ಗಂಗಾಧರ ಬಂಕಾಪುರ, ಷಣ್ಮುಖ ಬಾಗಲದ, ಪ್ರಶಾಂತ ಹಡಪದ, ಬಸವರಾಜ ದೊಡ್ಡಣ್ಣನವರ, ಬಸವರಾಜ ಮೂಲಿಮನಿ, ಹೇಮಣ್ಣ ಬೆಟಗೇರಿ, ಉಡಚಪ್ಪ ಗಗ್ಗರಿ, ಬಸವರಾಜ ಬಳ್ಳಾರಿ, ನಂದೀಶ ಕಗ್ಗಲಗೌಡರು, ಬಸವರಾಜ ಬಳ್ಳಾರಿ, ಬಸವರಾಜ ಅಂಗಡಿ, ಗಂಗಪ್ಪ ಛಬ್ಬಿ, ಫಕ್ಕಿರಪ್ಪ ಈಳಗೇರ ಇದ್ದರು.

ಅಜಯ್ ಕರಿಗೌಡರ ಸ್ವಾಗತಿಸಿದರು. ಆದೇಶ ಹುಲಗೂರ ಹಾಗೂ ಎನ್.ಎಚ್. ಹಡಪದ ನಿರೂಪಿಸಿದರು. ಲಕ್ಷ್ಮಣ ಲಮಾಣಿ ವಂದಿಸಿದರು.

PREV

Recommended Stories

ನಿರೀಕ್ಷೆಯಂತೆ ನಡೆಯದ ಸಮೀಕ್ಷೆ: ಬೆಂಗಳೂರು ಮುಖ್ಯ ಆಯುಕ್ತರಿಗೆ ಸಿಎಸ್‌ ಪತ್ರ
ಬೆಂಗಳೂರಲ್ಲಿನ್ನು ವೈದ್ಯಕೀಯ ಪರಿಕರಗಳ ಡ್ರೋನ್‌ ಡೆಲಿವರಿ