ಕಾರಟಗಿಯಲ್ಲಿ ಖಾಸಗಿ ಶಾಲೆ ಮಕ್ಕಳ ಉತ್ತಮ ಸಾಧನೆ

KannadaprabhaNewsNetwork | Published : May 10, 2024 1:37 AM

ಸಾರಾಂಶ

ಕಳೆದ ಮಾರ್ಚ್‌ನಲ್ಲಿ ನಡೆದಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪಟ್ಟಣದ ಖಾಸಗಿ ಶಾಲೆ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಕಾರಟಗಿ

ಕಳೆದ ಮಾರ್ಚ್‌ನಲ್ಲಿ ನಡೆದಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪಟ್ಟಣದ ಖಾಸಗಿ ಶಾಲೆ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.

ಇಲ್ಲಿನ ಶರಣಬಸವೇಶ್ವರ ಶಿಕ್ಷಣ ಸಂಸ್ಥೆಯ ಆಂಗ್ಲ ಮತ್ತು ಕನ್ನಡ ಮಾಧ್ಯಮ ಶಾಲೆ ಮಕ್ಕಳು ಉತ್ತಮ ಸಾಧನೆ ತೋರಿದ್ದಾರೆ. ಆಂಗ್ಲ ವಿಭಾಗದಲ್ಲಿ ಒಟ್ಟು ೬೧ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಆ ಪೈಕಿ ೫೩ ಜನರು ಉತ್ತೀರ್ಣರಾಗಿದ್ದಾರೆ. ಚಂದ್ರಶೇಖರ್ ಮಂಜುನಾಥ್ ಸ್ವಾಮಿ ೫೯೫ (ಶೇ.೯೫.೨೦), ರೂಪಶ್ರೀ ಶಿವಕುಮಾರ್ ೫೯೨(ಶೇ.೯೪.೭೨), ಬಿ. ಸಾಕ್ಷಿ ದೇವರೆಡ್ಡಿ ೫೮೦ (ಶೇ೯೨.೮೦) ಅಭಿಷೇಕ್ ಸಣ್ಣ ಹುಚ್ಚಪ ೫೭೬(ಶೇ.೯೨.೧೬), ಯಶೋಧ ಚನ್ನನಗೌಡ ೫೭೧ (ಶೇ.೯೧.೩೬), ಶರಣ್ಯ ಬಸವರಾಜ್ ೫೭೦ (ಶೇ.೯೧.೨೦) ಉತ್ತಮ ಸಾಧನೆ ಮಾಡಿದ್ದಾರೆ.

ಕನ್ನಡ ವಿಭಾಗ: ಒಟ್ಟು ೧೫೯ ವಿದ್ಯಾರ್ಥಿಗಳ ಪೈಕಿ ೧೨೭ ಜನರು ತೇರ್ಗಡೆಯಾಗಿದ್ದಾರೆ. ತೇಜಸ್ವಿನಿ ಬಸವರಾಜ್ ದೊಡ್ಮನಿ ೫೭೫ (ಶೇ.೯೨), ಮೌನೇಶ್ ಬಸವರಾಜ್ ೫೪೬ (ಶೇ.೮೭.೩೬)ಈ. ವಿಜಯ ರಾಘವೇಂದ್ರ ೫೩೩ (ಶೇ.೮೫.೨೮) ಮಾಡಿದ್ದಾರೆ ಎಂದು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಎಸ್.ಬಿ. ಶೆಟ್ಟರ್ ತಿಳಿಸಿದ್ದಾರೆ.

ಪ್ರತಿಭಾ ಶಾಲೆ: ಪಟ್ಟಣದ ಪ್ರತಿಭಾ ಕನ್ನಡ ಮಾಧ್ಯಮ ಪ್ರೌಢಶಾಲೆ ಈ ಬಾರಿ ಶೇ. ೯೯ರಷ್ಟು ಫಲಿತಾಂಶ ಪಡೆದಿದೆ. ೧೭ ವಿದ್ಯಾರ್ಥಿಗಳ ಪೈಕಿ ೧೬ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ೩ ಉನ್ನತ ಶ್ರೇಣಿ, ೯ ಪ್ರಥಮ ಮತ್ತು ೪ ಜನರು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣಿರಾಗಿದ್ದಾರೆ. ಶಾಲೆಯ ವಿದ್ಯಾರ್ಥಿನಿ ವಿಜಯಲಕ್ಷ್ಮೀ ಪ್ರಭಾಕರ್ ಗೋಡೆ(೫೫೦) ಗಳಿಸುವ ಮೂಲಕ ಶಾಲೆಗೆ ಪ್ರಥಮ ಸ್ಥಾನ, ಪ್ರದೀಪ್ ಮಲ್ಲಿಕಾರ್ಜುನ(೫೩೯) ದ್ವಿತೀಯ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆಂದು ಎಂದು ಶಾಲೆಯ ಪ್ರಕಟಣೆ ತಿಳಿಸಿದೆ.

ಸಿಎಂಎನ್ ವಿದ್ಯಾಲಯ: ಇಲ್ಲಿನ ಸಿ. ಮಲ್ಲಿಕಾರ್ಜುನ ನಾಗಪ್ಪ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದಿರುವುದಾಗಿ ಪ್ರಾಚಾರ್ಯ ನಾರಾಯಣ ವೈದ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಒಟ್ಟು ೪೪ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಆ ಪೈಕಿ ೩೭ ಜನರು ತೇರ್ಗಡೆಯಾಗಿದ್ದಾರೆ. ಒಬ್ಬರು ಉನ್ನತ ಶ್ರೇಣಿ, ೧೪ ಪ್ರಥಮ, ೧೨ ದ್ವಿತೀಯ ಮತ್ತು ೧೦ ಜನರು ತೃತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಸಲ್ಮಾ ಹರತ್‌ಅಲಿ ೫೪೬ ಅಂಕ ಪಡೆಯುವ ಮೂಲಕ ವಿದ್ಯಾಲಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ.

Share this article