ತಾಲೂಕಿನಾದ್ಯಂತ ಉತ್ತಮ ಮಳೆ

KannadaprabhaNewsNetwork |  
Published : Jun 08, 2024, 12:31 AM IST
೭ಬಿಎಸ್ವಿ೦೧- ಬಸವನಬಾಗೇವಾಡಿ ಪಟ್ಟಣದಲ್ಲಿ ಗುರುವಾರ ರಾತ್ರಿ ಆರಂಭವಾದ ಮಳೆ ನಿರಂತರವಾಗಿ ಕೆಲ ಗಂಟೆಗಳ ಕಾಲ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಜಮೀನುಗಳ ಬದುಗಳಲ್ಲಿ ಸ್ವಲ್ಪಮಟ್ಟಿಗೆ ನೀರು ನಿಂತಿರುವುದು. | Kannada Prabha

ಸಾರಾಂಶ

ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಗುರುವಾರ ರಾತ್ರಿ ಉತ್ತಮ ಮಳೆಯಾಗಿದೆ. ಹೀಗಾಗಿ ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಪಟ್ಟಣದ ಹಿರಿಯರಾದ ಬಸವರಾಜ ಹಾರಿವಾಳ ಅವರನ್ನು ಮಾತನಾಡಿಸಿದಾಗ, ನಿನ್ನೆ ರಾತ್ರಿ ಸುರಿದ ರೋಹಿಣಿ ಮಳೆಯು ಉತ್ತಮವಾಗಿದೆ. ಇದು ಬಿತ್ತನೆ ಮಾಡಲು ಬೇಕಾದ ಮಳೆ ನೀಡಿದೆ. ಇಂದು ಜೂ.೭ ರಂದು ಮೃಗಾ ಮಳೆ ಕೂಡುತ್ತದೆ. ಗುರುವಾರ ಮಧ್ಯಾಹ್ನವೂ ಪಟ್ಟಣ ಹೊರವಲಯದ ಸುತ್ತಮುತ್ತ ಮೃಗಾ ಮಳೆಯು ಆಗಿದೆ. ಇದರಿಂದಾಗಿ ಬಿತ್ತನೆ ಮಾಡಲು ಅಗತ್ಯ ತಯಾರಿ ಮಾಡಿಕೊಳ್ಳಲಾಗುವುದು ಎಂದರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಗುರುವಾರ ರಾತ್ರಿ ಉತ್ತಮ ಮಳೆಯಾಗಿದೆ. ಹೀಗಾಗಿ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.

ಪಟ್ಟಣದ ಹಿರಿಯರಾದ ಬಸವರಾಜ ಹಾರಿವಾಳ ಅವರನ್ನು ಮಾತನಾಡಿಸಿದಾಗ, ನಿನ್ನೆ ರಾತ್ರಿ ಸುರಿದ ರೋಹಿಣಿ ಮಳೆಯು ಉತ್ತಮವಾಗಿದೆ. ಇದು ಬಿತ್ತನೆ ಮಾಡಲು ಬೇಕಾದ ಮಳೆ ನೀಡಿದೆ. ಇಂದು ಜೂ.೭ ರಂದು ಮೃಗಾ ಮಳೆ ಕೂಡುತ್ತದೆ. ಗುರುವಾರ ಮಧ್ಯಾಹ್ನವೂ ಪಟ್ಟಣ ಹೊರವಲಯದ ಸುತ್ತಮುತ್ತ ಮೃಗಾ ಮಳೆಯು ಆಗಿದೆ. ಇದರಿಂದಾಗಿ ಬಿತ್ತನೆ ಮಾಡಲು ಅಗತ್ಯ ತಯಾರಿ ಮಾಡಿಕೊಳ್ಳಲಾಗುವುದು ಎಂದರು.

ನಿನ್ನೆ ರಾತ್ರಿ ಸುರಿದ ಮಳೆಯಿಂದ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ಎರಡು ಮನೆ ಭಾಗಶಃ, ಯರನಾಳ ಗ್ರಾಮದಲ್ಲಿ ಒಂದು ಕಚ್ಚಾ ಮನೆ ಭಾಗಶಃ ಹಾನಿಯಾಗಿದೆ. ಮಳೆಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ಮಾಹಿತಿ ನೀಡಿದರು.ಬಸವನಬಾಗೇವಾಡಿ ಮಳೆ ಮಾಪನ ಕೇಂದ್ರದಲ್ಲಿ ೫೩.೨ ಎಂಎಂ, ಹೂವಿನಹಿಪ್ಪರಗಿ ಮಳೆ ಮಾಪನ ಕೇಂದ್ರದಲ್ಲಿ ೧೬.೨ ಎಂಎಂ., ಮನಗೂಳಿ ಮಳೆ ಮಾಪನ ಕೇಂದ್ರದಲ್ಲಿ ೧೭ ಎಂಎಂ. ಮಳೆ ದಾಖಲಾಗಿದೆ ಎಂದು ತಹಸೀಲ್ದಾರ ಕಾರ್ಯಾಲಯದ ಮೂಲಗಳು ತಿಳಿಸಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!