ದೊಡ್ಡಬಳ್ಳಾಪುರದ ಸೀರೆ ಸಂತೆಗೆ ಉತ್ತಮ ಸ್ಪಂದನೆ

KannadaprabhaNewsNetwork |  
Published : Feb 21, 2026, 01:30 AM IST
ದೊಡ್ಡಬಳ್ಳಾಪುರ ಸೀರೆ ಸಂತೆಯಲ್ಲಿ ಸೀರೆ ಖರೀದಿಯಲ್ಲಿ ತೊಡಗಿರುವ ಮಹಿಳೆಯರು. | Kannada Prabha

ಸಾರಾಂಶ

ದೊಡ್ಡಬಳ್ಳಾಪುರ: ಇಲ್ಲಿನ ಶಾಸಕ ಧೀರಜ್‌ ಮುನಿರಾಜ್‌ ನೇತೃತ್ವದಲ್ಲಿ ಭಗತ್‌ಸಿಂಗ್‌ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿರುವ ದೊಡ್ಡಬಳ್ಳಾಪುರ ಸೀರೆ ಸಂತೆ ಶುಕ್ರವಾರ ಆರಂಭಗೊಂಡಿದ್ದು, ಮೊದಲ ದಿನ ಉತ್ತಮ ಸ್ಪಂದನೆ ವ್ಯಕ್ತವಾಗಿದೆ

ದೊಡ್ಡಬಳ್ಳಾಪುರ: ಇಲ್ಲಿನ ಶಾಸಕ ಧೀರಜ್‌ ಮುನಿರಾಜ್‌ ನೇತೃತ್ವದಲ್ಲಿ ಭಗತ್‌ಸಿಂಗ್‌ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿರುವ ದೊಡ್ಡಬಳ್ಳಾಪುರ ಸೀರೆ ಸಂತೆ ಶುಕ್ರವಾರ ಆರಂಭಗೊಂಡಿದ್ದು, ಮೊದಲ ದಿನ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ಜನ ತಂಡೋಪತಂಡವಾಗಿ ಭಗತ್‌ಸಿಂಗ್‌ ಕ್ರೀಡಾಂಗಣಕ್ಕೆ ಭೇಟಿ ನೀಡುತ್ತಿದ್ದು, ತರಾವರಿ ಸೀರೆಗಳ ವೀಕ್ಷಣೆ ಹಾಗೂ ಖರೀದಿ ಭರಾಟೆ ಜೋರಾಗಿದೆ. ಒಟ್ಟು 54 ಸೀರೆ ಮಳಿಗೆಗಳನ್ನು ವ್ಯವಸ್ಥಿತವಾಗಿ ಸ್ಥಾಪಿಸಲಾಗಿದ್ದು, ವಿವಿಧ ಮಾದರಿಯ ಸೀರೆಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ಇರಿಸಲಾಗಿದೆ.

ದೊಡ್ಡಬಳ್ಳಾಪುರ ಕಾಲಾನುಕಾಲದಿಂದ ನೇಕಾರಿಕೆಗೆ ಪ್ರಸಿದ್ಧಿಯಾಗಿದ್ದು, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಗಮನ ಸೆಳೆದಿದೆ. ಇಲ್ಲಿ ತಯಾರಾಗುವ ಸೀರೆಗಳು, ದೇಶದ ಇತರೆಡೆಗಳಿಗೆ ರಫ್ತಾಗಿ ಇತರ ಬ್ರಾಂಡುಗಳ ಹೆಸರಿನಲ್ಲಿ ಸ್ಥಳೀಯ ಮಾರುಕಟ್ಟೆ ಪ್ರವೇಶಿಸುತ್ತಿತ್ತು. 30 ಸಾವಿರಕ್ಕೂ ಅಧಿಕ ನೇಕಾರರು ನಿತ್ಯ ಈ ಉದ್ದಿಮೆಯಲ್ಲಿ ತೊಡಗಿದ್ದು, ದೊಡ್ಡಬಳ್ಳಾಪುರ ಪ್ರತಿದಿನ 50 ಸಾವಿರಕ್ಕೂ ಹೆಚ್ಚು ಸೀರೆಗಳು ಉತ್ಪಾದನೆಯಾಗುತ್ತವೆ. ಆದರೆ ಸ್ಥಳೀಯ ಬ್ರಾಂಡ್‌ ಮತ್ತು ಮಾರುಕಟ್ಟೆಯ ಕೊರತೆಯಿಂದ ನೇಕಾರರಿಗೆ ಅನಾನುಕೂಲವಾಗಿತ್ತು. ಈ ಹಿನ್ನಲೆಯಲ್ಲಿ ಸ್ಥಳೀಯ ಮಾರುಕಟ್ಟೆ ಹಾಘೂ ಬ್ರಾಂಡ್‌ ಒದಗಿಸುವ ಉದ್ದೇಶದ ಮೊದಲ ಹಂತವಾಗಿ ಸೀರೆ ಸಂತೆ ಆಯೋಜನೆಗೊಂಡಿರುವುದು ನೇಕಾರರಲ್ಲಿ ಸಂತಸ ಮೂಡಿಸಿದೆ.

ಈ ಕುರಿತು ಆಯೋಜಕ, ಸ್ಥಳೀಯ ಶಾಸಕ ಧೀರಜ್‌ ಮುನಿರಾಜ್‌, 3 ದಿನಗಳ ಸೀರೆ ಸಂತೆಯಲ್ಲಿ ತರಾವರಿ ಸೀರೆಗಳು ಮಾರಾಟಕ್ಕೆ ಲಭ್ಯವಿದೆ. ದೊಡ್ಡಬಳ್ಳಾಪುರದ ಕುಶಲಕರ್ಮಿ ನೇಕಾರರು ನೇಯ್ದ ಸೀರೆಗಳನ್ನು ವೀಕ್ಷಿಸಲು ಮತ್ತು ಖರೀದಿಸಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಪ್ರತಿ ನಿತ್ಯ ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಪ್ರಖ್ಯಾತ ಕಲಾವಿದರು ಪಾಲ್ಗೊಳ್ಳುತ್ತಿದ್ದಾರೆ. ಮಕ್ಕಳಿಗೆ ಮನರಂಜನಾ ಆಟಗಳನ್ನೂ ವ್ಯವಸ್ಥೆ ಮಾಡಲಾಗಿದ್ದು, ಆಹಾರ ಮಳಿಗೆಗಳೂ ಇವೆ.ನಗೆ ಹಬ್ಬ, ಮಕ್ಕಳ ಫ್ಯಾಷನ್‌ ಶೋ, ರಸಮಂಜರಿ ಕಾರ್ಯಕ್ರಮಗಳಿದ್ದು, ಗಿಲ್ಲಿನಟ, ರಘು ದೀಕ್ಷಿತ್‌, ಗಂಗಾವತಿ ಪ್ರಾಣೇಶ್, ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋನ ಕಲಾವಿದರು ಪಾಲ್ಗೊಳ್ಳಲಿದ್ದಾರೆ. ದೊಡ್ಡಬಳ್ಳಾಪುರ ನೇಕಾರರ ಕೌಶಲ್ಯಾಧಾರಿತ ನೇಕಾರಿಕೆಗೆ ಸಮಕಾಲೀನ ಅಗತ್ಯಗಳಿಗೆ ಪೂರಕವಾಗುವಂತೆ ಮನ್ನಣೆ ನೀಡಿ, ರಾಜ್ಯ ಮಟ್ಟದಲ್ಲಿ ಹೊಸ ಬ್ರಾಂಡ್‌ ಸೃಷ್ಠಿಸುವ ಗುರಿಯನ್ನು ಹೊಂದಲಾಗಿದೆ ಎಂದು ತಿಳಿಸಿದರು.

20ಕೆಡಿಬಿಪಿ2-

ದೊಡ್ಡಬಳ್ಳಾಪುರ ಸೀರೆ ಸಂತೆಯಲ್ಲಿ ಸೀರೆ ಖರೀದಿಯಲ್ಲಿ ತೊಡಗಿರುವ ಮಹಿಳೆಯರು.

--

20ಕೆಡಿಬಿಪಿ3-

ದೊಡ್ಡಬಳ್ಳಾಪುರ ಸ್ಯಾರಿ ಸಂತೆಯಲ್ಲಿ ಮಳಿಗೆಗಳ ಮುಂದೆ ಜನಜಾತ್ರೆ.

--

20ಕೆಡಿಬಿಪಿ4-

ದೊಡ್ಡಬಳ್ಳಾಪುರದ ಭಗತ್‌ಸಿಂಗ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸ್ಯಾರಿ ಸಂತೆ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಾಂಗ್ಲಾ ಮಾತ್ರವಲ್ಲ, ಭಾರತದಲ್ಲೂ ಹಿಂದೂಗಳ ಸ್ಥಿತಿ ಹೀನಾಯ
ಕರ್ಣಾಟಕ ಬ್ಯಾಂಕ್ 102ನೇ ಸಂಸ್ಥಾಪಕರ ದಿನಾಚರಣೆ