ಕುಷ್ಟಗಿ ತಾಲೂಕಿಗೆ ಉತ್ತಮ ಫಲಿತಾಂಶ

KannadaprabhaNewsNetwork | Published : Apr 11, 2024 12:47 AM

ಸಾರಾಂಶ

ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಪದವಿ ಪೂರ್ವ ಕಾಲೇಜಿನ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟವಾಗಿದ್ದು ಉತ್ತಮ ಫಲಿತಾಂಶ ದೊರೆತಿದೆ.

ಕನ್ನಡಪ್ರಭವಾರ್ತೆ ಕುಷ್ಟಗಿ

ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಪದವಿ ಪೂರ್ವ ಕಾಲೇಜಿನ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟವಾಗಿದ್ದು ಉತ್ತಮ ಫಲಿತಾಂಶ ದೊರೆತಿದೆ.

ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಕುಷ್ಟಗಿ:

ಕಲಾ ವಿಭಾಗದಲ್ಲಿ 305 ವಿದ್ಯಾರ್ಥಿಗಳ ಪೈಕಿ 196 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅಶ್ವಿನಿ ಸಂಘಟಿ ಶೇ. 94.5 ಪ್ರಥಮ, ಸವಿತಾ ಗಡಿಗಿ ಶೇ. 94.33 ದ್ವಿತೀಯ, ವಾಣಿಜ್ಯ ವಿಭಾಗದಲ್ಲಿ 77 ವಿದ್ಯಾರ್ಥಿಗಳ ಪೈಕಿ 58 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅದರಲ್ಲಿ ಅಕ್ಷತಾ ಚಿಟಗಿ ಶೇ. 86.33 ಪ್ರಥಮ ಸ್ಥಾನ ಪಡೆದಿದ್ದಾರೆ.

ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಕುಷ್ಟಗಿ:

ಕಲಾ ವಿಭಾಗದಲ್ಲಿ 143 ವಿದ್ಯಾರ್ಥಿಗಳ ಪೈಕಿ 84 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಇದರಲ್ಲಿ ಪ್ರಥಮಸ್ಥಾನ ಬಸವರಾಜ ತಳವಾರ ಶೇ. 89.33, ದ್ವೀತೀಯ ಸ್ಥಾನ ಹನಮಂತರಾಯ ಶೇ. 86, ವಿಜ್ಞಾನ ವಿಭಾಗದಲ್ಲಿ 5 ವಿದ್ಯಾರ್ಥಿಗಳ ಪೈಕಿ ಒಬ್ಬರು ಮಾತ್ರ ಶಿವುಕುಮಾರ ದೇವರಮನಿ ಶೇ. 63.05 ಪಡೆದುಕೊಳ್ಳುವ ಮೂಲಕ ಪಾಸಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 6 ವಿದ್ಯಾರ್ಥಿಗಳ ಪೈಕಿ ಒಬ್ಬರು ಶಿವುಕುಮಾರ ಹಳೇಮನಿ ಶೇ. 57 ಪಡೆದಿದ್ದಾರೆ.

ದೋಟಿಹಾಳ ಸರ್ಕಾರಿ ಪದವಿ ಪೂರ್ವ ಕಾಲೇಜು:

ಕಲಾ ವಿಭಾಗದಲ್ಲಿ 69 ವಿದ್ಯಾರ್ಥಿಗಳ ಪೈಕಿ 38 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಇದರಲ್ಲಿ ಪ್ರಥಮ ಸ್ಥಾನ ಮಾರುತಿ ಮುದುಕಪ್ಪ ಶೇ. 92.66, ದ್ವಿತೀಯ ಸ್ಥಾನ ಈರಮ್ಮ ಹೂಗಾರ ಶೇ. 90.83 ಪಡೆದುಕೊಂಡಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 8 ವಿದ್ಯಾರ್ಥಿಗಳ ಪೈಕಿ 6 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ತಾವರಗೇರಾ ಸರ್ಕಾರಿ ಪದವಿ ಪೂರ್ವ ಕಾಲೇಜು:

ಕಲಾ ವಿಭಾಗದಲ್ಲಿ 89 ವಿದ್ಯಾರ್ಥಿಗಳ ಪೈಕಿ 84 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇದರಲ್ಲಿ ಪ್ರಥಮ ಸ್ಥಾನದಲ್ಲಿ ಸುನೀಲ್ ತುಳಿಜಪ್ಪ ಶೇ. 93, ದ್ವಿತೀಯ ಸ್ಥಾನ ಶರಣಬಸವ ಭಾವಿ ಶೇ. 89 ಪಡೆದುಕೊಂಡಿದ್ದಾರೆ.

ಅನ್ನದಾನೇಶ್ವರ ಕಾಲೇಜು:

ವಿಜ್ಞಾನ ವಿಭಾಗದಲ್ಲಿ 71 ವಿದ್ಯಾರ್ಥಿಗಳ ಪೈಕಿ 41 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 47 ವಿದ್ಯಾರ್ಥಿಗಳ ಪೈಕಿ 42 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ವಿಜಯಲಕ್ಷ್ಮೀ ಮೇಟಿ ಶೇ. 90.83 ಪ್ರಥಮ, ಸವಿತಾ ನರಸಕೊಪ್ಪ ಶೇ. 88.16 ದ್ವಿತೀಯ, ವಾಣಿಜ್ಯ ವಿಭಾಗದಲ್ಲಿ ಸಂಗೀತಾ ಅಂಗಡಿ ಶೇ. 92 ಪ್ರಥಮ, ಚಂದ್ರಶೇಖರ ಎಂ. ಶೇ. 90.50 ದ್ವಿತೀಯ ಸ್ಥಾನ ಗಳಿಸಿದ್ದಾರೆ.

ಮರಿಶಾಂತವೀರ ಮಹಿಳಾ ಪದವಿ ಪೂರ್ವ ಕಾಲೇಜು:

22 ಜನ ವಿದ್ಯಾರ್ಥಿಗಳ ಪೈಕಿ 20 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಜ್ಯೋತಿ ಚೆಳ್ಳೂರು ಶೇ. 84.83 ಪ್ರಥಮ, ರತ್ನಾ ನಿರೆಡ್ಡೆರ ಶೇ. 84 ದ್ವಿತೀಯ ಸ್ಥಾನ ಪಡದುಕೊಂಡಿದ್ದಾರೆ.

ತಾವರಗೇರಾ ಶಶಿಧರಸ್ವಾಮಿ ಕಾಲೇಜು:

ಕಲಾವಿಭಾಗದಲ್ಲಿ 60 ವಿದ್ಯಾರ್ಥಿಗಳ ಪೈಕಿ 57 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಇದರಲ್ಲಿ ದೀಪಾ ಮಹಾಂತೇಶ ಶೇ. 91 ಪ್ರಥಮ, ಗೋವಿಂದರಾಜು ಬಸರಿಹಾಳ ಶೇ. 90.83, ನಂದಿನಿ ದುಮತಿ ಶೇ. 90.83 ದ್ವಿತೀಯ ಸ್ಥಾನ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 20 ವಿದ್ಯಾರ್ಥಿಗಳ ಪೈಕಿ 20 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಸ್ಥಾನದಲ್ಲಿ ಸಂಗೀತಾ ರೆಡ್ಡಿ ಶೇ. 92.33 ಪ್ರಥಮ, ದೇವಮ್ಮ ಪುಂಡಗೌಡರ ಶೇ. 88.33 ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

Share this article