ಶಿಸ್ತುಬದ್ಧ ಅಧ್ಯಯನದಿಂದ ಉತ್ತಮ ಫಲಿತಾಂಶ

KannadaprabhaNewsNetwork |  
Published : Oct 11, 2025, 12:02 AM IST
ಮಧುಗಿರಿಯ ಸರ್ಕಾರಿ  ಪ್ರಥಮ  ದರ್ಜೆ ಕಾಲೇಜಿನಲ್ಲಿ ವಾಣಿಜ್ಯ ಶಾಸ್ತ್ರ ವಿಭಾಗದಿಂದ ಪ್ರಥಮ ವರ್ಷದ ಬಿಕಾಂ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಸ್ವಾಗತ ಕಾರ್ಯಕ್ರಮದಲ್ಲಿ ರೇಖಾ ಶಂಕರಪ್ಪ ಭಾಗವಹಿಸಿ ಮಾತನಾಡಿದರು. | Kannada Prabha

ಸಾರಾಂಶ

ವಿದ್ಯಾರ್ಥಿಗಳು ಓದುವ ವಯಸ್ಸಿನಲ್ಲಿ ಶಿಸ್ತು ಬದ್ಧ ಅಧ್ಯಯನ ನಡಿಸಿದರೆ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹಳೆಯ ವಿದ್ಯಾರ್ಥಿನಿ ಅಮೇರಿಕಾ ಮೂಲದ ಅಮೆಂಟ್ ಮೆಂಟ್ ಸಂಸ್ಥೆಯ ಹಣಕಾಸು ತಜ್ಞೆ , ಚಾರ್ಟೆಡ್‌ ಅಂಕೌಂಟೆಂಟ್ ರೇಖಾ ಶಂಕರಪ್ಪ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಮಧುಗಿರಿ

ವಿದ್ಯಾರ್ಥಿಗಳು ಓದುವ ವಯಸ್ಸಿನಲ್ಲಿ ಶಿಸ್ತು ಬದ್ಧ ಅಧ್ಯಯನ ನಡಿಸಿದರೆ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹಳೆಯ ವಿದ್ಯಾರ್ಥಿನಿ ಅಮೇರಿಕಾ ಮೂಲದ ಅಮೆಂಟ್ ಮೆಂಟ್ ಸಂಸ್ಥೆಯ ಹಣಕಾಸು ತಜ್ಞೆ , ಚಾರ್ಟೆಡ್‌ ಅಂಕೌಂಟೆಂಟ್ ರೇಖಾ ಶಂಕರಪ್ಪ ಅಭಿಪ್ರಾಯಪಟ್ಟರು.

ಶುಕ್ರವಾರ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗದಿಂದ ಮೊದಲ ವರ್ಷದ ಬಿಕಾಂ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಸ್ವಾಗತ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಹಳ್ಳಿಯಿಂದ ಪಟ್ಟಣಕ್ಕೆ ವ್ಯಾಸಂಗ ಮಾಡಲು ಬರುವ ವಿದ್ಯಾರ್ಥಿಗಳು ಕೀಳರಿಮೆಯಿಂದ ನರಳದೆ ಆತ್ಮವಿಶ್ವಾಸದಿಂದ ಅಧ್ಯಯನ ಮಾಡಿದರೆ ಯಾವುದೇ ವಿಷಯವು ಕಠಿಣವೆನಿಸದು. ಸ್ಪರ್ಧಾತ್ಮಕ ಜಗತ್ತಿನಲ್ಲಿ ಸ್ಪರ್ಧಿಸಬೇಕಾಗಿರುವುದರಿಂದ ಎಚ್ಚರ ವಹಿಸಿ ಪರೀಕ್ಷೆಗಳಲ್ಲಿ ಉತ್ತರಿಸಬೇಕಿದೆ. ವೃತ್ತಿಪರ ಕೋರ್ಸ್ಗಳಾದ ಸಿಎ, ಸಿಎಸ್, ಐಸಿಡಬ್ಲಯೂಎ.ಸಿಎಫ್‌ಎ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದಲ್ಲಿ ಬೇಡಿಕೆಯಿದ್ದು, ಅತ್ಯುತ್ತಮ ವೇತನ ಪ್ಯಾಕೇಜ್ ನ್ನು ನೀಡುತ್ತಿವೆ. ಪದವಿ ಶಿಕ್ಷಣ ವ್ಯಾಸಂಗ ಮಾಡುವಾಗಲೇ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವತ್ತ ಗಮನ ಹರಿಸಬೇಕು. ಕಾಲೇಜಿನಲ್ಲಿರುವ ಗುರುಗಳ ಮಾರ್ಗದರ್ಶನ ,ಗ್ರಂಥಾಲಯಗಳ ಸದ್ಭಳಕೆ , ನ್ಯೂಸ್‌ ಪೇಪರ್‌, ಕೃತಕ ಬುದ್ಧಿಮತ್ತೆ ಯೂಟ್ಯೂಬ್‌ ನಲ್ಲಿರುವ ಅತ್ಯುನ್ನತವಾದ ಶೈಕ್ಷಣಿಕ ಸಂಪನ್ಮೂಲಗಳಿದ್ದು,,ಇವುಗಳನ್ನು ದಕ್ಷತೆಯಿಂದ ಮತ್ತು ಪರಿಣಾಮಕಾರಿಯಾಗಿ ಉಪಯೋಗಿಸಿಕೊಂಡು ಅಸಾಧ್ಯವಾದುದನ್ನು ಸಾಧ್ಯವಾಗಿಸಬಹುದು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಪುರಸಭೆ ಅಧ್ಯಕ್ಷ ಲಾಲಪೇಟೆ ಮಂಜುನಾಥ್‌ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂದು ಅಧಿಕ ಬೇಡಿಕೆಯುಳ್ಳ ವಿಜ್ಞಾನ -ತಂತ್ರಜ್ಞಾನದಂತಹ ವಿಷಯಗಳನ್ನು ಆಯ್ಕೆ ಮಾಡಿಕೊಂಡು ವ್ಯಾಸಂಗ ಮಾಡಬೇಕಿದೆ. ಶಿಕ್ಷಣವು ಬದುಕಿನ ಮಹತ್ವದ ಘಟ್ಟವಾಗಿದ್ದು,ಯಾವುದೇ ಬಾಹ್ಯ ಆಕರ್ಷಣೆಗಳಿಗೆ ಮರುಳಾಗದೆ ತಮ್ಮ ತನವನ್ನು ಉಳಿಸಿಕೊಂಡು ಜ್ಞಾನ ಸಂಪಾದಿಸಿ ಕೊಂಡಲ್ಲಿ ಜಗತ್ತಿನೊಂದಿಗೆ ಹೆಜ್ಜೆ ಇಡಲು ಅವಕಾಶವಿದೆ. ಉನ್ನತ ಗುರಿಗಳನ್ನು ಸಾಧಿಸುವತ್ತ ಗಮನ ಕೇಂದ್ರಕರಿಸಬೇಕು ಎಂದರು.

ವಾಣಿಜ್ಯಸಾಶ್ತ್ರ ವಿಭಾಗದ ಮುಖ್ಯಸ್ಥೆ ಬಿ.ಆರ್‌.ರಂಜಿತಾ ಪ್ರಾಸ್ತಾವಿಕವಾಗಿ ಮಾತನಾಡಿ, ವಾಣಿಜ್ಯ ಕ್ಷೇತ್ರವೂ ಅತಿ ವೇಗವಾಗಿ ಬೆಳೆಯುತ್ತಿದ್ದು, ಲಕ್ಷಾಂತರ ಉದ್ಯೋಗವಕಾಶಗಳು ಲಭ್ಯವಿದ್ದು, ಉದ್ಯೋಗ ಮಾರುಕಟ್ಟೆ ಕೈಗಾರಿಕೆಗಳು ನಿರೀಕ್ಷಿಸುವ ಕೌಶಲ್ಯಾಧಾರಿತ ಶಿಕ್ಷಣ ಪಡೆಯುವತ್ತ ಹೆಚ್ಚು ಗಮನ ನೀಡಿ ಉತ್ತಮ ಅವಕಾಶಗಳನ್ನು ಬಳಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದರು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಪ್ರೊ.ಕೆ.ಎಸ್‌.ಕುಮಾರ್, ಪ್ರಾಧ್ಯಾಪಕರಾದ ಸಿ.ಜಿ.ಸುರೇಶ್‌, ವೇದಲಕ್ಷ್ಮೀ, ಡಾ.ಶ್ರೀನಿವಾಸಪ್ಪ, ಚಂದ್ರಕಲಾ, ಬಿ.ಮಂಜುನಾಥ್‌, ಎಚ್‌.ಮುರುಳೀಧರ, ರಾಮಮೂರ್ತಿ, ಡಾ.ಲೀಲಾವತಿ, ನಟರಾಜ್‌, ಡಾ.ನಂದಿನಿ, ಭಾರ್ಗವಿ, ಸಂಜೀವಮೂರ್ತಿ ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬ್ಯಾಲೆಟ್‌ನಲ್ಲಿ ಮತದಾನ ನಡೆಸಿದರೆ ತಪ್ಪೇನು? ರಾಜ್ಯ ಚುನಾವಣಾ ಆಯುಕ್ತ
ಜಾಗತಿಕ ಸವಾಲಿಗೆ ನವೋದ್ಯಮ ಉತ್ತರ : ರಾಧಾಕೃಷ್ಣನ್‌