ಜಿಲ್ಲೆಯ ಸರ್ಕಾರಿ ಪಿಯು ಕಾಲೇಜುಗಳಿಂದ ಉತ್ತಮ ಫಲಿತಾಂಶ

KannadaprabhaNewsNetwork |  
Published : May 10, 2026, 01:15 AM IST
ದ | Kannada Prabha

ಸಾರಾಂಶ

ಚಿಕ್ಕಮಗಳೂರುಕಾಫಿನಾಡು ಚಿಕ್ಕಮಗಳೂರಿನಲ್ಲಿ ಲಕ್ಷ ಲಕ್ಷ ರು. ಪಡೆವ ಖಾಸಗಿ ಪದವಿ ಪೂರ್ವ ಕಾಲೇಜುಗಳಿಗೆ ಪೈಪೋರ್ಟಿ ನೀಡುವ ನಿಟ್ಟಿನಲ್ಲಿ ಜಿಲ್ಲೆಯ ಸರ್ಕಾರಿ ಪದವಿ ಪೂರ್ವ ಕಾಲೇಜುಗಳು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯೊಂದಿಗೆ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಿ ದ್ವಿತೀಯ ಪಿಯು ಫಲಿತಾಂಶದಲ್ಲಿ ರಾಜ್ಯದಲ್ಲಿ ಟಾಪ್‌ 5 ರ್‍ಯಾಂಕ್‌ ಗಳಿಸಿದೆ.

ರಾಜ್ಯದಲ್ಲಿ ಟಾಪ್‌ 5 ರ್‍ಯಾಂಕ್‌ । ಈ ಪೈಕಿ 3,278 ವಿದ್ಯಾರ್ಥಿಗಳು ಪಾಸ್‌ ಆಗುವ ಮೂಲಕ ಶೇ.88.38 ರಷ್ಟು ಫಲಿತಾಂಶ

ವಿಶ್ವನಾಥ ಮಲೇಬೆನ್ನೂರು

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಕಾಫಿನಾಡು ಚಿಕ್ಕಮಗಳೂರಿನಲ್ಲಿ ಲಕ್ಷ ಲಕ್ಷ ರು. ಪಡೆವ ಖಾಸಗಿ ಪದವಿ ಪೂರ್ವ ಕಾಲೇಜುಗಳಿಗೆ ಪೈಪೋರ್ಟಿ ನೀಡುವ ನಿಟ್ಟಿನಲ್ಲಿ ಜಿಲ್ಲೆಯ ಸರ್ಕಾರಿ ಪದವಿ ಪೂರ್ವ ಕಾಲೇಜುಗಳು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯೊಂದಿಗೆ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಿ ದ್ವಿತೀಯ ಪಿಯು ಫಲಿತಾಂಶದಲ್ಲಿ ರಾಜ್ಯದಲ್ಲಿ ಟಾಪ್‌ 5 ರ್‍ಯಾಂಕ್‌ ಗಳಿಸಿದೆ.

ಇತ್ತೀಚಿನ ದಿನಗಳಲ್ಲಿ ಖಾಸಗಿ ಕಾಲೇಜುಗಳಿಗೆ ಯಾವುದರಲ್ಲಿಯೂ ಕಡಿಮೆ ಇಲ್ಲದಂತೆ ಸ್ಪರ್ಧೆ ನೀಡುತ್ತಿರುವ ಚಿಕ್ಕಮಗಳೂರಿನ ಸರ್ಕಾರಿ ಪದವಿ ಕಾಲೇಜುಗಳು, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಕೊಡುತ್ತಿವೆ.ಅಷ್ಟೇ ಅಲ್ಲದೇ ವಿದ್ಯಾರ್ಥಿಗಳ ವೈಯಕ್ತಿಕ ಅಂಕ ಗಳಿಕೆಯಲ್ಲೂ ಅತ್ಯುತ್ತಮ ಸಾಧನೆ ಕಾಣುತ್ತಿದ್ದೇವೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಒಟ್ಟು 38 ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳ ಬೇಡಿಕೆಗೆ ತಕ್ಕಂತೆ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ವಿಭಾಗಗಳನ್ನು ಆರಂಭಿಸಿ, ಅಗತ್ಯ ಮೂಲಸೌಕರ್ಯ ಒದಗಿಸಲಾಗುತ್ತಿದೆ. ಹೀಗಾಗಿ, ಶೈಕ್ಷಣಿಕ ಸಾಧನೆ ಯಲ್ಲಿ ಖಾಸಗಿ ಕಾಲೇಜುಗಳಿಗೆ ಪೈಪೋಟಿ ನೀಡುತ್ತಿವೆ.

ದ್ವಿತೀಯ ಪಿಯುಸಿಯಲ್ಲಿ ಜಿಲ್ಲೆ ಟಾಪ್‌ 5

ಕಳೆದ 2025-26ನೇ ಸಾಲಿನ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆ-1ರಲ್ಲಿ ಒಟ್ಟು 8,692 ವಿದ್ಯಾರ್ಥಿ ಪರೀಕ್ಷೆ ಬರೆದಿದ್ದು, ಈ ಪೈಕಿ 7,616 ಉತ್ತೀರ್ಣರಾಗಿದ್ದಾರೆ. ಈ ಮೂಲಕ ಶೇ 87.63 ರಷ್ಟು ಫಲಿತಾಂಶ ಪಡೆದು 7ನೇ ಸ್ಥಾನ ಗಳಿಸಿದೆ. ಕಳೆದ 2024-25ನೇ ಸಾಲಿನಲ್ಲಿ ಶೇ.76.83 ರಷ್ಟು ಮಾತ್ರ ಫಲಿತಾಂಶ ಪಡೆಯಲಾಗಿತ್ತು.

ಈ ಬಾರಿ ಸರ್ಕಾರಿ ಪಿಯು ಕಾಲೇಜಿನ 3,709 ವಿದ್ಯಾರ್ಥಿಗಳು ಪರೀಕ್ಷೆ ಬರೆದು, ಈ ಪೈಕಿ 3,278 ವಿದ್ಯಾರ್ಥಿಗಳು ಪಾಸ್‌ ಆಗುವ ಮೂಲಕ ಶೇ.88.38 ರಷ್ಟು ಫಲಿತಾಂಶ ಪಡೆದು ಚಿಕ್ಕಮಗಳೂರು ಜಿಲ್ಲೆ ಸರ್ಕಾರಿ ಪದವಿ ಪೂರ್ವ ಕಾಲೇಜು ವಿಭಾಗದಲ್ಲಿ ರಾಜ್ಯದಲ್ಲಿಯೇ ಟಾಪ್‌ ಐದನೇ ಸ್ಥಾನ ಅಲಂಕರಿಸಿದೆ.

5 ಕಾಲೇಜು ಶೇ.100 ರಷ್ಟು ಫಲಿತಾಂಶ

ಬಣಕಲ್‌ನ ಸರ್ಕಾರಿ ಪದವಿ ಪೂರ್ವ ಕಾಲೇಜು, ಮೈಲಿಮನೆ ಸರ್ಕಾರಿ ಪದವಿ ಪೂರ್ವ ಕಾಲೇಜು, ಜೋಡಿ ಹೋಚಿಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜು, ರಂಗೇನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಕುಂಟಿನಮೊಡು ಸರ್ಕಾರಿ ಪದವಿ ಪೂರ್ವ ಕಾಲೇಜುಗಳು ಶೇ.100 ರಷ್ಟು ಫಲಿತಾಂಶ ಪಡೆದು ಮಹತ್ವದ ಸಾಧನೆ ಮಾಡಿವೆ.

---ಬಾಕ್ಸ್‌---

22 ಕಾಲೇಜುಗಳಲ್ಲಿ ಶೇ.90ಕ್ಕಿಂತ ಹೆಚ್ಚಿನ ಫಲಿತಾಂಶ

ಚಿಕ್ಕಮಗಳೂರು ಜಿಲ್ಲೆಯಲ್ಲಿರುವ 38 ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಪೈಕಿ 22ರಲ್ಲಿ ದ್ವಿತೀಯ ಪಿಯುಸಿಯಲ್ಲಿ ಶೇ.90ಕ್ಕಿಂತ ಹೆಚ್ಚಿನ ಫಲಿತಾಂಶ ಪಡೆದುಕೊಂಡಿವೆ.

ಬಣಕಲ್‌, ಮೈಲಿಮನೆ, ಜೋಡಿ ಹೋಚಿಹಳ್ಳಿ, ರಂಗೇನಹಳ್ಳಿ ಹಾಗೂ ಕುಂಟಿನ ಮೋಡು ಸರ್ಕಾರಿ ಕಾಲೇಜುಗಳು ಶೇ.100 ರಷ್ಟು ಫಲಿತಾಂಶ ಪಡೆದರೆ, ಸಖರಾಯಪಟ್ಟಣ ಶೇ.97.67 ರಷ್ಟು ಫಲಿತಾಂಶ, ಅದೇ ರೀತಿ ಆಲ್ದೂರಿ ಸರ್ಕಾರಿ ಪದವಿ ಪೂರ್ವ ಕಾಲೇಜು ಶೇ.96, ಕಳಸ ಶೇ.99 , ಮೂಡಿಗೆರೆಯ ಬಾಲಕಿಯರ ಪಿಯು ಕಾಲೇಜು ಶೇ.96.92, ಕೊಪ್ಪದ ಸರ್ಕಾರಿ ಪಿಯು ಕಾಲೇಜು ಶೇ.96.15, ಶೃಂಗೇರಿ ಸರ್ಕಾರಿ ಪಿಯು ಕಾಲೇಜು ಶೇ. 97.83, ಬೀರೂರಿನ ಸರ್ಕಾರಿ ಕೆಎಲ್‌ಕೆ ಪಿಯು ಕಾಲೇಜು ಶೇ.97, ಬಸವನಹಳ್ಳಿಯ ಸರ್ಕಾರಿ ಬಾಲಕಿಯರ ಪಿಯು ಕಾಲೇಜು ಶೇ. 96.64, ಕಳಸಾಪುರದ ಪಿಯು ಕಾಲೇಜು ಶೇ.96.64, ಕಡೂರಿನ ಬಾಲಕಿರ ಪಿಯು ಶೇ.96.26, ಕೊಪ್ಪದ ಎಸ್‌ಎಂಎಸ್‌ಡಿ ಪಿಯು ಶೇ. 94.10 ರಷ್ಟು, ಎನ್‌,ಆರ್‌.ಪುರದ ಪಿಯು ಕಾಲೇಜು ಶೇ.90.59, ಚೌಳಹಿರಿಯೂರು ಪಿಯು ಕಾಲೇಜು ಶೇ. 90.38, ಕಮ್ಮರಡಿಯ ಪಿಯು ಶೇ.92.85 ರಷ್ಟು, ಬೇಗಾರಿನ ಪಿಯು ಕಾಲೇಜು ಶೇ. 90.09 ರಷ್ಟು ಚೌಳಹಿರಿಯೂರಿನ ಶೇ. 94.75 ರಷ್ಟು ಹಾಗೂ ಹೋಚಿಹಳ್ಳಿಯ ಶೇ.91.3 ರಷ್ಟು ಫಲಿತಾಂಶ ಪಡೆದಿರುವುದು ಈ ಸಾಧನೆಗೆ ಕಾರಣವಾಗಿದೆ.

---ಬಾಕ್ಸ್‌---ಬಾಕ್ಸ್‌ಸರ್ಕಾರಿ ಪಿಯು ಕಾಲೇಜುಗಳಲ್ಲಿ ಹಲವು ಸೌಲಭ್ಯ

* 2026-27ನೇ ಸಾಲಿನಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಪಠ್ಯ ಪುಸ್ತಕ ವಿತರಣೆ

* ಸ್ಮಾರ್ಟ್‌ ಕ್ಲಾಸ್‌ ವ್ಯವಸ್ಥೆ

* ವಿಜ್ಞಾನ ವಿಷಯ ಇರುವ ಕಾಲೇಜುಗಳಲ್ಲಿ ಪ್ರಯೋಗಾಲಯ

* ಜೆಇಇ, ಸಿಇಟಿ, ನೀಟ್‌ ಸೇರಿದಂತೆ ವೃತ್ತಿ ಶಿಕ್ಷಣ ಪ್ರವೇಶ ಪರೀಕ್ಷೆಗೆ ತರಬೇತಿ

* ಹಾಸ್ಟಲ್‌ ವ್ಯವಸ್ಥೆ, ಪ್ರವಾಸ

* ಕನ್ನಡ ಮತ್ತು ಇಂಗ್ಲಿಷ್‌ ಮಾಧ್ಯಮದಲ್ಲಿ ಬೋಧನೆ

* ಕಂಪ್ಯೂಟರ್‌ ಸೌಲಭ್ಯ

* ಗ್ರಂಥಾಲಯ ವ್ಯವಸ್ಥೆ

---ಬಾಕ್ಸ್‌---

ಶಿಕ್ಷಣ ಗುಣಮಟ್ಟ ಸುಧಾರಣೆಗೆ ಹಲವು ಕ್ರಮ * ಪದವಿ ಪೂರ್ವ ಶಿಕ್ಷಣ ಇಲಾಖೆ ಜಿಲ್ಲಾ ಉಪ ನಿರ್ದೇಶಕರಿಂದ ಕಾಲೇಜುಗಳಿಗೆ ಭೇಟಿ ಪರಿಶೀಲನೆ

* ಸೂಕ್ತ ಕೊಠಡಿ ಮತ್ತು ಶೌಚಾಲಯ ವ್ಯವಸ್ಥೆ

* ಉಪನ್ಯಾಸಕರ ಕೊರತೆ ಕಂಡು ಬಂದರೆ ಅತಿಥಿ ಅಥವಾ ಹೆಚ್ಚುವರಿ ಉಪನ್ಯಾಸಕರ ನಿಯೋಜನೆ

* ಅಗತ್ಯವಿರುವ ಮಕ್ಕಳಿಗೆ ಉಪನ್ಯಾಸಕರಿಂದ ಬೆಳಗ್ಗೆ- ಸಂಜೆ ವಿಶೇಷ ತರಗತಿ

* ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಹಿರಿಯ ಪ್ರಾಚಾರ್ಯರ ತ್ರಿಸದಸ್ಯರ ಸಮಿತಿ ರಚನೆ, ತಿಂಗಳಿಗೊಮ್ಮೆ ಸಭೆ

*ಉಪನ್ಯಾಸಕರಿಂದ ವಿದ್ಯಾರ್ಥಿ ದತ್ತು ಸ್ವೀಕಾರ

* ಗುಂಪು ಅಧ್ಯಯನ ಒತ್

* ವರ್ಷಕ್ಕೆ ಮೂರು ಬಾರಿ ಪೋಷಕರ ಸಭೆ

* 2 ರಿಂದ 3 ಪೂರ್ವ ಸಿದ್ದತಾ ಪರೀಕ್ಷೆ,

* ಕನಿಷ್ಠ ಐದು ವರ್ಷದ ಪ್ರಶ್ನೆ ಪತ್ರಿಕೆ ಉತ್ತರ ಬಿಡುಸುವುದು

* ವಿದ್ಯಾರ್ಥಿಗಳಿಗೆ ಗುಡ್‌ ಮಾರ್ನಿಂಗ್‌ ಫೋನ್‌ ಕಾಲ್‌-- ಕೋಟ್‌ --- ಚಿಕ್ಕಮಗಳೂರಿನ ಬೇಲೂರು ರಸ್ತೆಯ ಸರ್ಕಾರಿ ಪಿಯು ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ದ್ವಿತೀಯ ಪಿಯುಸಿಯಲ್ಲಿ 600ಕ್ಕೆ 590 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ 9ನೇ ರ್‍ಯಾಂಕ್‌ ಪಡೆದುಕೊಂಡಿದ್ದೇನೆ. ಉಪನ್ಯಾಸಕರು ಘಟಕ ಪರೀಕ್ಷೆ ತುಂಬಾ ಸಹಕಾರವಾಯಿತು. ಪ್ರತಿ ದಿನ ಪುನರ್ ಅಭ್ಯಾಸ ಮಾಡುವುದರಿಂದ ಹೆಚ್ಚಿನ ಅಂಕ ಪಡೆಯಲು ಅನುಕೂಲವಾಯಿತು. ಡಿಜಿಟಲ್‌ ಬೋರ್ಡ್‌ ಬಳಕೆ ತುಂಬಾ ಚನ್ನಾಗಿತ್ತು.

- ಅಭಿಷೇಕ್‌, ದ್ವಿತೀಯ ಪಿಯುಸಿಯಲ್ಲಿ ರಾಜ್ಯಕ್ಕೆ 9ನೇ ರ್‍ಯಾಂಕ್‌

---ಕೋಟ್‌ ---

ಈ ಬಾರಿ ದ್ವಿತೀಯ ಪಿಯುಸಿಯಲ್ಲಿ ಜಿಲ್ಲೆಯ ಸರ್ಕಾರಿ ಪಿಯು ಕಾಲೇಜುಗಳಿಗೆ ಉತ್ತಮ ಫಲಿತಾಂಶ ಬಂದಿದೆ. ಹೀಗಾಗಿ, ಸರ್ಕಾರಿ ಪಿಯು ಕಾಲೇಜುಗಳಲ್ಲಿ ಮುಂದಿನ ಶೈಕ್ಷಣಿಕ ವರ್ಷಕ್ಕೆ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ದಾಖಲಾತಿ ಆಗುತ್ತಿದೆ. ಮೊದಲು ಬಂದವರಿಗೆ ಆದ್ಯತೆ ನೀಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವುದಕ್ಕೆ ಬೇಕಾದ ವ್ಯವಸ್ಥೆ ಸರ್ಕಾರ ಮಾಡುತ್ತಿದೆ.

- ಮಂಜುಳಾ, ಉಪ ನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆ ಚಿಕ್ಕಮಗಳೂರು

-

ಫೋಟೋ ಚಿಕ್ಕಮಗಳೂರಿನ ಮೂಡಿಗೆರೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗ ಪ್ರಯೋಗಾಲಯ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ವಪ್ರತಿಷ್ಠೆ ಬಿಟ್ಟು ಪಕ್ಷ ಸಂಘಟಿಸಿ: ನಿಖಿಲ್‌ ಕುಮಾರಸ್ವಾಮಿ
ನಂದಿನಿ ಉತ್ಪನ್ನಗಳು ಬಳಸಿದರೆ ರೈತರಿಗೆ ಅನುಕೂಲ