ಉತ್ತಮ ಬರವಣಿಗೆ ಪತ್ರಕರ್ತರ ಶಕ್ತಿ

KannadaprabhaNewsNetwork |  
Published : May 27, 2024, 01:07 AM IST
ದೊಡ್ಡಬಳ್ಳಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರು, ಪದಾಧಿಕಾರಿಗಳ ಆಯ್ಕೆ ನಡೆಯಿತು. | Kannada Prabha

ಸಾರಾಂಶ

ದೊಡ್ಡಬಳ್ಳಾಪುರ: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಚಂದ್ರಶೇಖರ್‌ ಡಿ.ಉಪ್ಪಾರ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸ್‌ ತಿಳಿಸಿದರು.

ದೊಡ್ಡಬಳ್ಳಾಪುರ: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಚಂದ್ರಶೇಖರ್‌ ಡಿ.ಉಪ್ಪಾರ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸ್‌ ತಿಳಿಸಿದರು.

ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಮಾತನಾಡಿದ ಅವರು, ಪತ್ರಿಕೋದ್ಯಮ ಸಮಾಜದ ಅಂಕು - ಡೊಂಕುಗಳನ್ನು ಸರಿಪಡಿಸುವ ಹೊಣೆಗಾರಿಕೆಯನ್ನು ನಿಭಾಯಿಸುವುದು ಅಗತ್ಯ. ಉತ್ತಮ ಬರವಣಿಗೆ ನಮ್ಮೆಲ್ಲರ ಶಕ್ತಿಯಾಗಬೇಕಿದೆ. ಸಂಘದ ಕಾರ್ಯಚಟುವಟಿಕೆ ಪತ್ರಕರ್ತರ ಹಿತಕಾಯುವ ಸಂಕಲ್ಪಕ್ಕೆ ಪೂರಕವಾಗಿರಬೇಕು ಎಂದರು.ನೂತನ ಅಧ್ಯಕ್ಷ ಚಂದ್ರಶೇಖರ ಡಿ ಉಪ್ಪಾರ ಮಾತನಾಡಿ, ಸಂಘದ ಸೇವೆಗೆ ಅವಕಾಶ ಮಾಡಿಕೊಟ್ಟಿರುವ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವ ಜೊತೆಗೆ ಸಂಘದ ಉನ್ನತೀಕರಣ ಆಶಯದ ಸಾಕಾರಕ್ಕೆ ಶ್ರಮಿಸುವುದಾಗಿ ತಿಳಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್ ರಮೇಶ್, ಜಿಲ್ಲಾ ಸಮಿತಿಯ ನಿರ್ದೇಶಕರಾದ ರಫಿ ಉಲ್ಲಾ, ಮುರಳಿ ಮೋಹನ್, ಸುಗ್ಗರಾಜು, ಆನಂದ್, ರಾಘವೇಂದ್ರ ಆಚಾರ್, ದಿನ್ನೂರು ಮಂಜುನಾಥ್, ದೇವರಾಜು, ಬೀದಿ ಮನೆ ರಮೇಶ್, ಶರದೃತು ಸತೀಶ್, ನಿರ್ಗಮಿತ ತಾಲೂಕು ಅಧ್ಯಕ್ಷ ಗಂಗರಾಜು ಶಿರವಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ನೂತನ ಪದಾಧಿಕಾರಿಗಳು:

ನೂತನ ಪದಾಧಿಕಾರಿಗಳಾಗಿ ಕೆ.ಸಿ.ರುದ್ರೇಶ್(ಗೌರವಾಧ್ಯಕ್ಷ), ಚಂದ್ರಶೇಖರ ಡಿ.ಉಪ್ಪಾರ(ಅಧ್ಯಕ್ಷ), ಕೊತ್ತೂರಪ್ಪ, ಜೆ.ಮುನಿರಾಜು, ಎಂ.ಮುನಿಸ್ವಾಮಿ(ಉಪಾಧ್ಯಕ್ಷರು), ನೆಲ್ಲುಗುದಿಗೆ ಚಂದ್ರಪ್ಪ(ಪ್ರಧಾನ ಕಾರ್ಯದರ್ಶಿ), ಪುರುಷೋತ್ತಮ ಗೌಡ, ಪುರುಷೋತ್ತಮ ಟಿ.ವಿ, ಸೈಯದ್ ಅಬ್ದುಲ್ ರೆಹಮಾನ್(ಕಾರ್ಯದರ್ಶಿಗಳು), ಖಜಾಂಚಿಯಾಗಿ ಕೃಷ್ಣಮೂರ್ತಿ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮುಕ್ತಾರ್ ಅಹಮದ್ ಸಿದ್ದಿಕ್ಕಿ, ಎಂ ಮುನಿಯಪ್ಪ, ಭೀಮೇಶ್, ಶ್ರೀನಿವಾಸ್ ತೆರಿದಾಳ್, ಗಂಗರಾಜು ಶಿರವಾರ, ಲಿಂಗರಾಜ್, ವೀರೇಂದ್ರನಾಥ ಆಯ್ಕೆಯಾಗಿದ್ದಾರೆ.

25ಕೆಡಿಬಿಪಿ1-

ದೊಡ್ಡಬಳ್ಳಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರು, ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್ ರಮೇಶ್, ಜಿಲ್ಲಾ ಸಮಿತಿಯ ನಿರ್ದೇಶಕರಾದ ರಫಿ ಉಲ್ಲಾ, ಮುರಳಿ ಮೋಹನ್, ಸುಗ್ಗರಾಜು, ಆನಂದ್ ಇತರರಿದ್ದರು.

PREV

Recommended Stories

ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ
ವೀರಶೈವ ಲಿಂಗಾಯತರಲ್ಲಿ ಸಮಾಜ ಒಗ್ಗಟ್ಟು ಮುಖ್ಯ