ದಾಬಸ್‌ಪೇಟೆ: ಪ್ರತಿ ಮನೆಗೂ ನಲ್ಲಿ ನೀರೊದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಜಲ ಜೀವನ್ ಮಿಷನ್ ಯೋಜನೆ ಗ್ರಾಮೀಣ ಭಾಗದ ರಸ್ತೆಗಳಿಗೆ ಕಂಟಕ ತಂದೊಡ್ಡುತ್ತಿದೆ.
ನೆಲಮಂಗಲ ತಾಲೂಕಿನಲ್ಲಿ ಶುದ್ಧ ಕುಡಿಯುವ ನೀರು ಒದಸಗಿಸುವ ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆಯಡಿ 179 ಕೋಟಿ ವೆಚ್ಚದಲ್ಲಿ 311 ಕಾಮಗಾರಿಗಳನ್ನು ಮಾಡಲಿದ್ದು, 211 ಕಾಮಗಾರಿಗಳ ಕಾರ್ಯ ನಡೆಯುತ್ತಿದ್ದು, ಒಟ್ಟು 48,138 ಮನೆಗಳಿಗೆ ನೀರು ಒದಗಿಸುವ ಯೋಜನೆ ಇದಾಗಿದೆ. ಪ್ರಥಮ ಹಂತದಲ್ಲಿ 111 ಕೋಟಿ ಅನುದಾನ ಬಿಡುಗಡೆಯಾಗಿದೆ. 100 ಗ್ರಾಮಗಳಲ್ಲಿ ಕಾಮಗಾರಿ ಪೂರ್ಣಗೊಂಡಿದೆ.
ನೆಲಮಂಗಲ ತಾಲೂಕಿನ 21 ಗ್ರಾಪಂ ವ್ಯಾಪ್ತಿಯಲ್ಲಿ 5667 ಲಕ್ಷ ರು. ಮಂಜೂರಾಗಿದೆ. ಒಟ್ಟು 289 ಓವರ್‌ಹೆಡ್ ಟ್ಯಾಂಕ್‌ಗಳು, 269 ಕೊಳವೆಬಾವಿ ಮಂಜೂರಾಗಿದೆ. 232 ಕೊಳವೆಬಾವಿ ಕೊರೆದಿದೆ. ಮನೆಗಳಿಗೆ ನೀರಿನ ಸಂಪರ್ಕ ಕೊಡುವ ಗುರಿ ಹೊಂದಲಾಗಿದೆ.ಅರೆಬರೆ ಕಾಮಗಾರಿಗೆ ಆಕ್ರೋಶ:ಗುತ್ತಿಗೆದಾರರು ಒಂದು ಭಾಗದ ಕೆಲಸ ಪೂರ್ತಿಗೊಳಿಸುವ ಬದಲು ಅರೆಬರೆ ಕೆಲಸ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇಲ್ಲೊಂದಿಷ್ಟು ಕೆಲಸ ಮಾಡಿ, ಅಲ್ಲೊಂದಿಷ್ಟು ಮಾಡುತ್ತಾರೆ. ಎರಡೂ ಕಡೆ ಪೂರ್ತಿ ಮಾಡದೆ ಮಗದೊಂದು ಕಡೆ ಕೆಲಸ ಆರಂಭಿಸುತ್ತಾರೆ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳು.
ಅಧಿಕಾರಿಗಳ ಜಾಣ ಕುರುಡು:
ಗುತ್ತಿಗೆದಾರರ ನಿರ್ಲಕ್ಷ್ಯದಿಂದ ರಸ್ತೆ , ಚರಂಡಿಗಳು ಹಾಳಾಗಿವೆ. ಎಲ್ಲೆಂದರಲ್ಲೆ ಕಾಂಕ್ರೀಟ್ ತ್ಯಾಜ್ಯ ಗುಡ್ಡೆ ಹಾಕಲಾಗಿದೆ. ಕಳೆದ ನಾಲ್ಕೈದು ತಿಂಗಳ ಹಿಂದೆ ರಸ್ತೆಗಳನ್ನು ಅಗೆದು ಹಾಗೆ ಬಿಟ್ಟಿದ್ದು ಓಡಾಡಲು ಕಷ್ಟವಾಗಿದೆ. ಮನೆಗಳ ಬಳಿ ಮೊಣಕಾಲುದ್ದ ಗುಂಡಿಗಳನ್ನು ಅಗೆದು ಹಾಗೆ ಬಿಡಲಾಗಿದೆ. ವಯೋವೃದ್ಧರು, ಮಕ್ಕಳು ಓಡಾಡುವುದು ಕಷ್ಟವಾಗಿದೆ.
ನೆಲಮಂಗಲ ತಾಲೂಕಿನಲ್ಲಿ ಜಲಜೀವನ್ ಮಿಷನ್ ಯೋಜನೆಯ ಕೆಲಸ ನಡೆಯುತ್ತಿದ್ದು, ಕಾರ್ಮಿಕರ ಕೊರತೆಯಿಂದ ಸ್ವಲ್ಪ ತಡವಾಗಿದೆ. ಶೀಘ್ರದಲ್ಲೇ ಯೋಜನೆಯನ್ನು ಪೂರ್ಣಗೊಳಿಸುತ್ತೇವೆ.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ನೆಲಮಂಗಲ
ಕೆ.ಜಿ.ಶ್ರೀನಿವಾಸಪುರದಲ್ಲಿ ಓವರ್ ಟ್ಯಾಂಕ್ ನಿರ್ಮಾಣ ಮಾಡಿ ಅರ್ಧಕ್ಕೆ ಬಿಟ್ಟಿರುವುದು.ಪೋಟೋ 6 :