ಡಾ.ಪ್ರಭಾ ಗೆಲುವಿಗೆ ಪ್ರಾರ್ಥಿಸಿ 101 ಕಾಯಿ ಹರಕೆ

KannadaprabhaNewsNetwork |  
Published : May 27, 2024, 01:07 AM IST
25ಕೆಡಿವಿಜಿ9-ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಗೆಲುವಿಗಾಗಿ ಕೊಟ್ಟೂರಿನ ಶ್ರೀ ಕೊಟ್ಟುರೇಶ್ವರ ಸನ್ನಿಧಿಯಲ್ಲಿ ಸ್ವಾಮಿ ದರ್ಶನ ಪಡೆದ ಮುಖಂಡರು, ಕಾರ್ಯಕರ್ತರು. ..................25ಕೆಡಿವಿಜಿ10, 11-ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಗೆಲುವಿಗಾಗಿ ಕೊಟ್ಟೂರಿನ ಶ್ರೀ ಕೊಟ್ಟುರೇಶ್ವರ ಸನ್ನಿಧಿಯಲ್ಲಿ ಸ್ವಾಮಿ ದರ್ಶನ ಪಡೆದು, 101 ತೆಂಗಿನ ಕಾಯಿ ಒಡೆದು, ಹರಕೆ ಸಲ್ಲಿಸಿದ ಕಾರ್ಯಕರ್ತರು. | Kannada Prabha

ಸಾರಾಂಶ

ಲೋಕಸಭೆ ಚುನಾವಣೆಯಲ್ಲಿ ದಾವಣಗೆರೆ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಗೆಲುವು ಸಾಧಿಸುವರೆಂಬ ಸಮೀಕ್ಷೆಗಳು, ಸಂದೇಶ ಜನರಿಂದ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆ ಕೊಟ್ಟೂರು ಸುಕ್ಷೇತ್ರದಲ್ಲಿ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ, 101 ತೆಂಗಿನ ಕಾಯಿ ಒಡೆಯುವ ಮೂಲಕ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹರಕೆ ಮಾಡಿಕೊಂಡರು.

- ಕೊಟ್ಟೂರೇಶ್ವರ ಸನ್ನಿಧಿಯಲ್ಲಿ ಎಸ್‌ಎಸ್‌ಎಂ, ಎಚ್‌ಎಸ್‌ಎನ್‌ ಅಭಿಮಾನಿಗಳ ಪ್ರಾರ್ಥನೆ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಲೋಕಸಭೆ ಚುನಾವಣೆಯಲ್ಲಿ ದಾವಣಗೆರೆ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಗೆಲುವು ಸಾಧಿಸುವರೆಂಬ ಸಮೀಕ್ಷೆಗಳು, ಸಂದೇಶ ಜನರಿಂದ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆ ಕೊಟ್ಟೂರು ಸುಕ್ಷೇತ್ರದಲ್ಲಿ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ, 101 ತೆಂಗಿನ ಕಾಯಿ ಒಡೆಯುವ ಮೂಲಕ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹರಕೆ ಮಾಡಿಕೊಂಡರು.

ನೆರೆ ಜಿಲ್ಲೆಯ ಕೊಟ್ಟೂರು ಸುಕ್ಷೇತ್ರಕ್ಕೆ ಕಾಂಗ್ರೆಸ್ ಮುಖಂಡರು, ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಹಾಗೂ ಎಚ್.ಎಸ್. ನಾಗರಾಜ ಅಭಿಮಾನಿಗಳ ಬಳಗ ಮುಖಂಡರು, ಕಾರ್ಯಕರ್ತರು ತೆರಳಿದ್ದರು. ಶ್ರೀ ಗುರು ಕೊಟ್ಟೂರೇಶ್ವರನ ದರ್ಶನ ಮಾಡಿ, ಡಾ.ಪ್ರಭಾ ಮಲ್ಲಿಕಾರ್ಜುನರ ಗೆಲುವಿಗಾಗಿ ಹರಕೆ ಮಾಡಿಕೊಂಡರು. ಅಲ್ಲದೇ, ದೇವಸ್ಥಾನ ಅಂಗಳದಲ್ಲಿ 101 ತೆಂಗಿನ ಕಾಯಿ ಒಡೆದು ಡಾ.ಪ್ರಭಾರ ಗೆಲುವಿಗಾಗಿ ಪ್ರಾರ್ಥಿಸಿದರು.

ಹಿರಿಯ ಮುಖಂಡ ಕಕ್ಕರಗೊಳ್ಳ ಕೆ.ಪಿ.ಕಲ್ಲಿಂಗಪ್ಪ ಮಾತನಾಡಿ, ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ, ನಮ್ಮ ಊರಿನ ಮಗಳಾದ ಡಾ.ಪ್ರಭಾ ಮಲ್ಲಿಕಾರ್ಜುನ ಅಭೂತಪೂರ್ವ ಗೆಲುವು ಸಾಧಿಸುತ್ತಾರೆಂಬ ಮಾಹಿತಿ ಲಭ್ಯವಾಗುತ್ತಿದೆ. ಕ್ಷೇತ್ರಾದ್ಯಂತ ಜನರಿಂದಲೂ ಡಾ.ಪ್ರಭಾ ಗೆಲ್ಲುವ ಬಗ್ಗೆ ಪಕ್ಷಾತೀತ ಮಾತುಗಳು ಕೇಳಿಬರುತ್ತಿವೆ. ಡಾ.ಪ್ರಭಾ ಮಲ್ಲಿಕಾರ್ಜುನ ಜಯ ಸಾಧಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸುತ್ತಾರೆಂಬ ವಿಶ್ವಾಸವಿದೆ ಎಂದರು.

ಶ್ರೀ ಕ್ಷೇತ್ರ ಕೊಟ್ಟೂರೇಶ್ವರ ಸ್ವಾಮಿ ದರ್ಶನ ಮಾಡಿ, ಡಾ.ಪ್ರಭಾ ಗೆಲುವಿಗಾಗಿ ಹರಕೆ ಮಾಡಿಕೊಂಡಿದ್ದೇವೆ. 101 ತೆಂಗಿನ ಕಾಯಿಗಳನ್ನು ಮುಖಂಡರು, ಕಾರ್ಯಕರ್ತರು ಒಡೆದು ಹರಕೆ ಸಲ್ಲಿಸಿದ್ದೇವೆ. ನಮ್ಮೆಲ್ಲರ ಉದ್ದೇಶ, ಗುರಿಯೂ ಒಂದೇ ಆಗಿದೆ. ಡಾ.ಪ್ರಭಾ ದಾವಣಗೆರೆ ಕ್ಷೇತ್ರದಲ್ಲಿ ದಾಖಲೆಯ ಮತಗಳ ಅಂತರದಲ್ಲಿ ಗೆಲ್ಲಬೇಕೆಂಬುದಾಗಿದೆ ಎಂದರು.

ಮುಖಂಡರಾದ ಮಟ್ಟಿಕಲ್ಲು ವೀರಭದ್ರಸ್ವಾಮಿ, ಕಾಯಿಪೇಟೆ ಹಾಲೇಶ, ಅಣಜಿ ಬಸವರಾಜ, ಹಿರಿಯ ಪತ್ರಕರ್ತ ರಾಜಶೇಖರ ರಾಜೇಶ, ಕೆ.ಬಿ. ಬಡಾವಣೆ ಶಶಿ, ರಾಜಶೇಖರ, ರಾಜ ನಾಯ್ಕ ಇತರರು ಇದ್ದರು.

- - - -25ಕೆಡಿವಿಜಿ10, 11:

ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಗೆಲುವಿಗಾಗಿ ಪ್ರಾರ್ಥಿಸಿ ಕೊಟ್ಟೂರಿನ ಶ್ರೀ ಕೊಟ್ಟೂರೇಶ್ವರ ಸನ್ನಿಧಿಯಲ್ಲಿ ಸ್ವಾಮಿ ದರ್ಶನ ಬಳಿಕ ಕಾರ್ಯಕರ್ತರು, ಮುಖಂಡರು 101 ತೆಂಗಿನಕಾಯಿ ಒಡೆದು, ಹರಕೆ ಸಲ್ಲಿಸಿದರು.

PREV

Recommended Stories

.ಜಮಖಂಡಿಯಲ್ಲಿ ವಿನಾಕನಿಗೆ ಅದ್ಧೂರಿ ವಿದಾಯ
ರೈತರ ಹಿತ ಕಾಪಾಡುವುದು ಮುಖ್ಯ: ಹನಮಂತ ನಿರಾಣಿ