ಕನ್ನಡಪ್ರಭ ವಾರ್ತೆ ಬೈಂದೂರು
ಈ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ, ನೇಹಾಳ ಕೊಲೆ ಲವ್ ಜಿಹಾದ್ ನ ಒಂದು ಭಾಗ. ಕಾಂಗ್ರೆಸ್ ಸರ್ಕಾರ ನೇಹಾಳ ಕುಟುಂಬಕ್ಕೆ ರಕ್ಷಣೆ ನೀಡುವುದನ್ನು ಬಿಟ್ಟು ಕೊಲೆಗಾರ ಫಯಾಜ್ ನ ಮನೆಗೆ ರಕ್ಷಣೆ ನೀಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಮನವಮಿ ಪಾನಕ ಹಂಚಿದರೆ ಕೇಸ್, ಮೋದಿ ಬಗ್ಗೆ ಹಾಡು ಬರೆದರೆ ಹಲ್ಲೆ, ಮಡಿಕೇರಿ ಕುಟ್ಟಪ್ಪ, ಶಿವಮೊಗ್ಗ ಹರ್ಷ, ಭಟ್ಕಳದ ಪರೇಶ್ ಮೆಸ್ತಾ ಸಾವಿಗೆ ಹಿಂದೂ ಸಮಾಜ ಉತ್ತರ ನೀಡಲೇಬೇಕಾಗಿದೆ. ಹಿಂದೂಗಳ ಒಳ್ಳೆತನ ದೌರ್ಬಲ್ಯ ಅಲ್ಲ. ಈ ಘಟನೆಗೆ ಹಿಂದೂ ಸಮಾಜ ಸರಿಯಾದ ಉತ್ತರ ನೀಡಲಿದೆ. ಈ ಚುನಾವಣೆಯಲ್ಲಿ ಮತದಾರರು ಚೊಂಬು ಕೊಟ್ಟು ಮನೆಗೆ ಕಳುಹಿಸಲಿದ್ದಾರೆ ಎಂದು ಎಚ್ಚರಿಸಿದರು.ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಮಾತನಾಡಿ, ಪ್ರೀತಿ ಒಪ್ಪಿಕೊಂಡಿಲ್ಲ ಎಂದರೆ ಚಾಕು ಹಾಕುತ್ತಾರೆ, ಪ್ರೀತಿ ಒಪ್ಪಿಕೊಂಡರೆ ಸೂಟ್ ಕೇಸಿಗೆ ಹಾಕುತ್ತಾರೆ. ಇದೆಲ್ಲಕ್ಕಿಂತ ದುರಂತವೆಂದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗಲೇ ಇವೆಲ್ಲಾ ನಡೆಯುತ್ತವೆ. ಇದೇ ಕೃತ್ಯ ಉತ್ತರ ಪ್ರದೇಶದಲ್ಲಿ ಆಗಿದ್ದರೆ ಬುಲ್ಡೋಜರ್ 24 ಗಂಟೆಯ ಒಳಗೆ ಮನೆ ಕೆಡುವುತ್ತಿತ್ತು. ನಮ್ಮಲ್ಲಿ ಸರ್ಕಾರ ಬುಲ್ಡೊಜರನ್ನು ಫಯಾಜ್ ನ ಮನೆ ಕಾಯಲು ನಿಲ್ಲಿಸಿದೆ. ಹಿಂದೂ ಸಮಾಜ ಎಚ್ಚೆತ್ತುಕೊಂಡಿದೆ ಉತ್ತರ ಕೊಡುತ್ತದೆ ಎಂದರು.