ವೈಕುಂಠ ಏಕಾದಶಿ ಪ್ರಯುಕ್ತ ಭಕ್ತರಿಂದ ಗೋಪಾಲ ದರ್ಶನ

KannadaprabhaNewsNetwork |  
Published : Jan 11, 2025, 12:46 AM IST
ವೈಕುಂಠ ಏಕಾದಶಿ ವಿಶೇಷ ಪೂಜೆ,ಗೋಪಾಲನ ದರ್ಶನ ಪಡೆದ ಭಕ್ತರು | Kannada Prabha

ಸಾರಾಂಶ

ನಾಡಿನ ಪ್ರಸಿದ್ಧ ಗೋಪಾಲಸ್ವಾಮಿ ಬೆಟ್ಟ, ಪಟ್ಟಣದ ವಿಜಯನಾರಾಯಣಸ್ವಾಮಿ, ಕಬ್ಬಹಳ್ಳಿ ಹಾಗೂ ಕೊಡಸೋಗೆ ಚಲುವನಾರಾಯಣಸ್ವಾಮಿ, ಚಿಕ್ಕಾಟಿ ವೇಣು ಗೋಪಾಲಸ್ವಾಮಿ, ಕಮರಹಳ್ಳಿ ವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ವೈಕುಂಠ‌ ಏಕಾದಶಿಯ ಹಿನ್ನೆಲೆಯಲ್ಲಿ ಶುಕ್ರವಾರ ವಿಶೇಷ ಪೂಜೆ ನೆರವೇರಿತು.

ಗುಂಡ್ಲುಪೇಟೆ: ನಾಡಿನ ಪ್ರಸಿದ್ಧ ಗೋಪಾಲಸ್ವಾಮಿ ಬೆಟ್ಟ, ಪಟ್ಟಣದ ವಿಜಯನಾರಾಯಣಸ್ವಾಮಿ, ಕಬ್ಬಹಳ್ಳಿ ಹಾಗೂ ಕೊಡಸೋಗೆ ಚಲುವನಾರಾಯಣಸ್ವಾಮಿ, ಚಿಕ್ಕಾಟಿ ವೇಣು ಗೋಪಾಲಸ್ವಾಮಿ, ಕಮರಹಳ್ಳಿ ವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ವೈಕುಂಠ‌ ಏಕಾದಶಿಯ ಹಿನ್ನೆಲೆಯಲ್ಲಿ ಶುಕ್ರವಾರ ವಿಶೇಷ ಪೂಜೆ ನೆರವೇರಿತು.

ಶುಕ್ರವಾರ ಮುಂಜಾನೆ ಗೋಪಾಲನಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ನಂತರ ಭಕ್ತರು ಪೂಜೆ ಸಲ್ಲಿಸಿದರು. ವೈಕುಂಠ ಏಕಾದಶಿ ಅಂಗವಾಗಿ ಗೋಪಾಲಸ್ವಾಮಿ ಬೆಟ್ಟಕ್ಕೆ ನೂರಾರು ಭಕ್ತರು ಆಗಮಿಸಿ ಗೋಪಾಲನ ದರ್ಶನ ಪಡೆದರು. ವೈಕುಂಠ ಏಕಾದಶಿಯ ಶುಕ್ರವಾರದಂದು ದೇವರ ದರ್ಶನ ಪಡೆದರೆ ಸ್ವರ್ಗಕ್ಕೆ ತೆರಳುತ್ತಾರೆಂಬ ನಂಬಿಕೆ ಹಿನ್ನೆಲೆ ಭಕ್ತರ ದಂಡು ಹೆಚ್ಚಿತ್ತು.

ವಿಷ್ಣು ಸಹಸ್ರನಾಮದ ಜೊತೆಗೆ ವಿಶೇಷ ಪೂಜೆ

ವಿಜಯ ನಾರಾಯಣ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ವಿಷ್ಣು ಸಹಸ್ರ ನಾಮದ ಜೊತೆಗೆ ವಿಶೇಷ ಪೂಜೆ ನಡೆಯಿತು. ವೈಕುಂಠ ಏಕಾದಶಿ ಅಂಗವಾಗಿ ವಿಜಯ ನಾರಾಯಣಸ್ವಾಮಿ ದೇವಸ್ಥಾನದಲ್ಲಿ ಶುಕ್ರವಾರ ಮುಂಜಾನೆ ೫ ಗಂಟೆಯಲ್ಲಿ ವಿಜಯ ನಾರಾಯಣ ಸ್ವಾಮಿ ಮೂರ್ತಿಗೆ ಹಾಲು, ಮೊಸರು, ಎಳನೀರು, ಅರಿಶಿಣ, ಕುಂಕುಮ ಅಭಿಷೇಕ ಮಾಡಿದ ಬಳಿಕ ವಿವಿಧ ಬಗೆಯ ಹೂವುಗಳಿಂದ ಅಲಂಕಾರ ಮಾಡಲಾಯಿತು. ಶುಕ್ರವಾರ ಬೆಳಗ್ಗೆ ೭ ಗಂಟೆಗೆ ವಿಜಯ ನಾರಾಯಣ ಸ್ವಾಮಿ ಉತ್ಸವ ದೇವಸ್ಥಾನದ ಸುತ್ತಲೂ ಮೆರವಣಿಗೆ ನಡೆಸಿ ದೇವಸ್ಥಾನದ ಒಳಭಾಗದಲ್ಲಿ ರಚನೆ ಮಾಡಲಾಗಿದ್ದ ಸ್ವರ್ಗದ ಬಾಗಿಲು ಮೇಲೆ ಉತ್ಸವ ಮೂರ್ತಿ ಕೂರಿಸಿ ಕೆಳ ಭಾಗದಲ್ಲಿ ಭಕ್ತರು ನಡೆದು ದೇವರ ದರ್ಶನ ಪಡೆದರು. ಪಟ್ಟಣದ ವಿಜಯ ನಾರಾಯಣಸ್ವಾಮಿ ಭಕ್ತರು ನೂರಾರು ಸಂಖ್ಯೆಯಲ್ಲಿ ಆಗಮಿಸಿ ಸ್ವರ್ಗದ ಬಾಗಿಲು ಮೂಲಕ ದೇವರ ದರ್ಶನ ಮಾಡಿದರು. ದೇವಸ್ಥಾನಕ್ಕೆ ಭೇಟಿ ನೀಡಿದ ಭಕ್ತರಿಗೆ ದೇವಸ್ಥಾನದ ಲಾಡು ಪ್ರಸಾದ ಹಾಗೂ ಗುಗ್ಗರಿ ಪ್ರಸಾದ ರೂಪದಲ್ಲಿ ವಿತರಣೆ ಮಾಡಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚೈತ್ರ ‌ನವರಾತ್ರಿ ನಿಮಿತ್ತ ಕನ್ನಡ ಗೀತೆ ಜತೆ ಮೋದಿ ಶುಭಾಶಯ -ದಿನಕ್ಕೊಂದು ಭಾಷೆಯ ಗೀತೆ ಪೋಸ್ಟ್‌
ಸೌದೆ ಒಲೆಗೆ ಖಾನಾವಳಿ ಮೊರೆ-ಒಂದು ಕ್ವಿಂಟಲ್ ಕಟ್ಟಿಗೆಗೆ 900 ರು. ವೆಚ್ಚ