ಸಾಹಿತ್ಯ ಸಿರಿ ಪ್ರಶಸ್ತಿಗೆ ಗೋಪಾಲ್ ಎಸ್. ಯಡಗೆರೆ ಆಯ್ಕೆ

KannadaprabhaNewsNetwork |  
Published : Feb 08, 2026, 01:30 AM IST
ಗೋಪಾಲ್ ಎಸ್ ಯಡಗೆರೆ | Kannada Prabha

ಸಾರಾಂಶ

ನರಸಿಂಹರಾಜಪುರ: ಫೆ. 21 ಹಾಗೂ 22 ರಂದು ಬೆಳ್ಳೂರಿನಲ್ಲಿ ನಡೆಯುವ 10 ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ದಲ್ಲಿ ನೀಡುವ ಪ್ರತಿಷ್ಠಿತ ಸಾಹಿತ್ಯ ಸಿರಿ ಪ್ರಶಸ್ತಿಗೆ ಹಿರಿಯ ಪತ್ರಕರ್ತ ಹಾಗೂ ಸಾಹಿತಿ ಗೋಪಾಲ್ ಎಸ್. ಯಡಗೆರೆ ಆಯ್ಕೆಯಾಗಿದ್ದಾರೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪೂರ್ಣೇಶ್ ತಿಳಿಸಿದ್ದಾರೆ.

ನರಸಿಂಹರಾಜಪುರ: ಫೆ. 21 ಹಾಗೂ 22 ರಂದು ಬೆಳ್ಳೂರಿನಲ್ಲಿ ನಡೆಯುವ 10 ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ದಲ್ಲಿ ನೀಡುವ ಪ್ರತಿಷ್ಠಿತ ಸಾಹಿತ್ಯ ಸಿರಿ ಪ್ರಶಸ್ತಿಗೆ ಹಿರಿಯ ಪತ್ರಕರ್ತ ಹಾಗೂ ಸಾಹಿತಿ ಗೋಪಾಲ್ ಎಸ್. ಯಡಗೆರೆ ಆಯ್ಕೆಯಾಗಿದ್ದಾರೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪೂರ್ಣೇಶ್ ತಿಳಿಸಿದ್ದಾರೆ.

ಪರಿಚಯ: ಗೋಪಾಲ್ ಎಸ್. ಯಡಗೆರೆ ಅವರು ನರಸಿಂಹರಾಜಪುರ ತಾಲೂಕಿನ ಯಡಗೆರೆಯಲ್ಲಿ ಜನಿಸಿದ್ದು ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿದ್ದಾರೆ. ಪ್ರಸ್ತುತ ಗೋಪಾಲ್ ಅವರು ಶಿವಮೊಗ್ಗದ ಕನ್ನಡ ಪ್ರಭ ವಿಶೇಷ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಅವರ ಬರೆದ 3 ಪುಸ್ತಕಗಳಾದ ನಾನಾಗದ ನಾನು ಎಂಬ ಕವನ ಸಂಕಲನ, ಸೋಲನ್ನು ಸೋಲಿಸು ಹಾಗೂ ಮಿಸ್ಡ್ ಕಾಲ ಎಂಬ ಪುಸ್ತಕ ಬಿಡುಗಡೆಯಾಗಿದೆ. ಸೋಲನ್ನು ಸೋಲಿಸು ಕೃತಿಗೆ ರಾಜ್ಯ ಮಟ್ಟದ ಸಾಹಿತ್ಯ ಪ್ರಶಸ್ತಿ ಲಭಿಸಿದೆ. ಗೋಪಾಲ್ ಎಸ್. ಯಡಗೆರೆ 1988 ರಿಂದ ಪತ್ರಿಕೋದ್ಯಮ ಆರಂಭಿಸಿ ಉದಯವಾಣಿ ದಿನ ಪತ್ರಿಕೆಯಲ್ಲಿ ಶಿವಮೊಗ್ಗ ಜಿಲ್ಲಾ ಹಿರಿಯ ವರದಿಗಾರರಾಗಿ ಕಾರ್ಯ ನಿರ್ವಹಿಸಿದ್ದರು. ನಂತರ ಕನ್ನಡಪ್ರಭ ಪತ್ರಿಕೆಯಲ್ಲಿ ಶಿವಮೊಗ್ಗ ಪ್ರಧಾನ ವರದಿಗಾರರಾಗಿ ಕಾರ್ಯಾರಂಭ ಮಾಡಿದ್ದ ಅವರು ಪದೋನ್ನತಿ ಹೊಂದಿ ವಿಶೇಷ ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಉದಯ ವಾಣಿ, ಕನ್ನಡ ಪ್ರಭ ಪತ್ರಿಕೆ ಜೊತೆಗೆ ತರಂಗ, ತುಷಾರ ಪತ್ರಿಕೆಗಳಲ್ಲಿ ಹಲವಾರು ಲೇಖನ, ಮುಖಪುಟ ಲೇಖನ ಪ್ರಕಟಗೊಂಡಿವೆ. ಆಕಾಶವಾಣಿಯಲ್ಲಿ ಕವನ ವಾಚನ ಮಾಡಿದ್ದಾರೆ. 2021 ರಲ್ಲಿ ಕರ್ನಾಟಕ ಸರ್ಕಾರ ಕರ್ನಾಟಕ ಮಾದ್ಯಮ ಅಕಾಡೆಮಿ ಸದಸ್ಯನನ್ನಾಗಿ ನೇಮಕ ಮಾಡಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

5 ಪಾಲಿಕೆಗಳಲ್ಲಿ ಜಯಭೇರಿ ಬಾರಿಸಲು ಬಿಜೆಪಿಗೆ ಒಳ್ಳೆ ಅವಕಾಶ
ಸಿಎಂ ಗಾದಿ ಸಂಚಲನ : ನಾನು ಸಿಎಂ ಆಗಲಿ ಎಂಬುದು ಜನರ ಬಯಕೆ ಎಂದರು ಡಿಕೆಶಿ