ಹಿರೀಸಾವೆ ಚೌಡೇಶ್ವರಿ ದಸರಾ ಉತ್ಸವಕ್ಕೆ ಎಂ.ಎ. ಗೋಪಾಲಸ್ವಾಮಿ ಚಾಲನೆ

KannadaprabhaNewsNetwork |  
Published : Oct 04, 2024, 01:01 AM IST
3ಎಚ್ಎಸ್ಎನ್14 : ಚೌಡೇಶ್ವರಿ ಅಮ್ಮನವರ ನವರಾತ್ರಿ ಆಚರಣೆ ಮತ್ತು ದಸರಾ ಉತ್ಸವಕ್ಕೆ ವಿಧಾನಪರಿಷತ್ ಮಾಜಿ ಸದಸ್ಯ ಎಂ.ಎ. ಗೋಪಾಲಸ್ವಾಮಿ ಅವರು ಉಯ್ಯಾಲೆ ಕಂಬದ ಬಳಿ ಗುರುವಾರ ಚಾಲನೆ ನೀಡಿದರು. | Kannada Prabha

ಸಾರಾಂಶ

ಚನ್ನರಾಯಪಟ್ಟಣದ ಹಿರೀಸಾವೆಯ ಚೌಡೇಶ್ವರಿ ಅಮ್ಮನವರ ನವರಾತ್ರಿ ಆಚರಣೆ ಮತ್ತು ದಸರಾ ಉತ್ಸವಕ್ಕೆ ವಿಧಾನಪರಿಷತ್ ಮಾಜಿ ಸದಸ್ಯ ಎಂ.ಎ. ಗೋಪಾಲಸ್ವಾಮಿ ಅವರು ಉಯ್ಯಾಲೆ ಕಂಬದ ಬಳಿ ಗುರುವಾರ ಚಾಲನೆ ನೀಡಿದರು.

ಅ.೬ರಂದು ಏರ್ಪಡಿಸಿರುವ ಆರೋಗ್ಯ ಮೇಳದಲ್ಲಿ ಪಾಲ್ಗೊಳ್ಳಲು ಸಲಹೆ

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಹಿರೀಸಾವೆಯ ಚೌಡೇಶ್ವರಿ ಅಮ್ಮನವರ ನವರಾತ್ರಿ ಆಚರಣೆ ಮತ್ತು ದಸರಾ ಉತ್ಸವಕ್ಕೆ ವಿಧಾನಪರಿಷತ್ ಮಾಜಿ ಸದಸ್ಯ ಎಂ.ಎ. ಗೋಪಾಲಸ್ವಾಮಿ ಅವರು ಉಯ್ಯಾಲೆ ಕಂಬದ ಬಳಿ ಗುರುವಾರ ಚಾಲನೆ ನೀಡಿದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಗೋಪಾಲಸ್ವಾಮಿ ಅವರು, ದಸರಾ ಉತ್ಸವವು ನಮ್ಮ ದೇಶದ ಹಿಂದು ಧಾರ್ಮಿಕ ಆಚರಣೆ ಮತ್ತು ಸಾಂಸ್ಕೃತಿಕದ ಸಂಕೇತವಾಗಿದೆ. ಭಕ್ತಿ ಭಾವದಿಂದ ಸಪ್ತಮಾತೃಕೆಯ ದೇವಿಯರ ಪೂಜೆ ಮಾಡಬೇಕು. ಹಿರೀಸಾವೆಯಲ್ಲಿ ಎಲ್ಲಾ ಹಬ್ಬಗಳ ಆಚರಣೆಗಳಲ್ಲಿ ಪಕ್ಷಬೇಧ ಮರೆತು ಎಲ್ಲ ವರ್ಗದವರು ಭಾಗವಹಿಸುವುದರ ಮೂಲಕ ತಾಲೂಕಿಗೆ ಮಾದರಿ ಗ್ರಾಮವಾಗಿದೆ. ಚನ್ನರಾಯಪಟ್ಟಣದಲ್ಲಿ ಇದೇ ಶುಕ್ರವಾರ, ಶನಿವಾರ ನಡೆಯುವ ವಾಲಿಬಾಲ್ ಪಂದ್ಯಾವಳಿ ಮತ್ತು ೬ರಂದು ಏರ್ಪಡಿಸಿರುವ ಆರೋಗ್ಯ ಮೇಳದಲ್ಲಿ ಎಲ್ಲರೂ ಭಾಗವಹಿಸುವಂತೆ ತಿಳಿಸಿದರು. ಪ್ರತಿ ವರ್ಷದಂತೆ ಈ ವರ್ಷವು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನವರಾತ್ರಿ ಆಚರಣೆ ನಡೆಯಲಿದೆ. ಅದ್ಧೂರಿ ದಸರಾ ಯಶಸ್ವಿಗೆ ಗ್ರಾಮದ ಎಲ್ಲರೂ ಸಹಕಾರ ನೀಡಬೇಕು ಎಂದು ಹೇಳಿದರು.ಗ್ರಾಮ ಪಂಚಾಯಿತಿ ಅಧ್ಯಕ್ಷ ಬೋರಣ್ಣ, ಎಚ್.ವಿ. ಫಣೀಶ್, ಸದಸ್ಯರಾದ ಮಹೇಶ್, ಪಿಎಸಿಸಿಬಿ ಸದಸ್ಯ ವೆಂಕಟೇಶ್, ಗ್ರಾಮದ ಮುಖಂಡರಾದ ಅರಳಿಮರದ ಕುಮಾರ್‌, ಎಚ್.ಎಸ್. ರವಿಕುಮಾರ್‌, ಎಚ್.ಎಂ. ರಘು, ಎಚ್.ಎಸ್. ಶ್ರೀಧರ್‌, ಎಚ್.ಜಿ. ಮಂಜುನಾಥ್, ಶಿವಕುಮಾರ್‌, ಬೋರೇಗೌಡ ಮತ್ತಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ