ಶಿವಮೊಗ್ಗ : ಗೋವಿನ ಪೂಜೆ ಮಾಡುವುದರಿಂದ ಕೋಟ್ಯಾಂತರ ದೇವರ ಪೂಜಿಸಿದ ಪುಣ್ಯ ಪ್ರಾಪ್ತಿ ಆಗುವ ಜತೆಯಲ್ಲಿ ಮನಸ್ಸಿಗೆ ಶಾಂತಿ ನೆಮ್ಮದಿ ಲಭಿಸುತ್ತದೆ. ಆರೋಗ್ಯ ಯುವ ಜೀವನಶೈಲಿ ನಮ್ಮದಾಗುತ್ತದೆ ಎಂದು ಜ್ಞಾನೇಶ್ವರಿ ಗೋಶಾಲೆಯ ಅಧ್ಯಕ್ಷ ಚಂದ್ರಹಾಸ ಪಿ ರಾಯ್ಕರ್ ತಿಳಿಸಿದರು.
ಶಿವಮೊಗ್ಗ : ಗೋವಿನ ಪೂಜೆ ಮಾಡುವುದರಿಂದ ಕೋಟ್ಯಾಂತರ ದೇವರ ಪೂಜಿಸಿದ ಪುಣ್ಯ ಪ್ರಾಪ್ತಿ ಆಗುವ ಜತೆಯಲ್ಲಿ ಮನಸ್ಸಿಗೆ ಶಾಂತಿ ನೆಮ್ಮದಿ ಲಭಿಸುತ್ತದೆ. ಆರೋಗ್ಯ ಯುವ ಜೀವನಶೈಲಿ ನಮ್ಮದಾಗುತ್ತದೆ ಎಂದು ಜ್ಞಾನೇಶ್ವರಿ ಗೋಶಾಲೆಯ ಅಧ್ಯಕ್ಷ ಚಂದ್ರಹಾಸ ಪಿ ರಾಯ್ಕರ್ ತಿಳಿಸಿದರು.
ದೀಪಾವಳಿ ಬಲಿಪಾಡ್ಯಮಿ ಪ್ರಯುಕ್ತ ಹುಣಸೋಡು ಗ್ರಾಮದಲ್ಲಿ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಸ್ವಾಮೀಜಿ ಸಂಕಲ್ಪದಂತೆ ಜ್ಞಾನೇಶ್ವರಿ ಗೋಶಾಲೆಯಲ್ಲಿ ಗೋಪೂಜೆ ನೆರವೇರಿಸಿ ಮಾತನಾಡಿದ ಅವರು, ಗೋವುಗಳು ಕಾಮಧೇನು ಇದ್ದಂತೆ, ಪ್ರತಿ ದಿನ ಹಾಲು ಕರುಣಿಸುವ ಗೋಮಾತೆಯನ್ನು ಪ್ರತಿಯೊಬ್ಬರೂ ಪೂಜಿಸುವುದರಿಂದ ಸಕಲವು ಒಳಿತಾಗುತ್ತದೆ ಎಂದರು.ಬಿಡಾಡಿ ಗೋವುಗಳು ಹಾಗೂ ಅಪಘಾತದಲ್ಲಿ ಗಾಯಗೊಂಡ ಜಾನುವಾರುಗಳನ್ನು ಜ್ಞಾನೇಶ್ವರಿ ಗೋಶಾಲೆಯಲ್ಲಿ ಚಿಕಿತ್ಸೆ ನೀಡಿ ಗುಣಪಡಿಸಲಾಗುತ್ತದೆ. ಎಲ್ಲ ಟ್ರಸ್ಟಿಗಳ ಸಹಕಾರದಿಂದ ಉತ್ತಮವಾಗಿ ಗೋಶಾಲೆಯು ನಡೆಯುತ್ತಿದೆ ಎಂದು ಹೇಳಿದರು.ಜನ್ಮದಿನ, ವಿವಾಹ ವಾರ್ಷಿಕೋತ್ಸವ ಸೇರಿದಂತೆ ವಿಶೇಷ ಸಂದರ್ಭದಲ್ಲಿ ಸಾರ್ವಜನಿಕರು ಗೋಶಾಲೆಗೆ ಹುಲ್ಲು, ಹಿಂಡಿ, ಮೇವು, ಬಾಳೆಹಣ್ಣು, ಬೆಲ್ಲ, ಅಕ್ಕಿ ಸೇರಿದಂತೆ ನೆರವು ನೀಡಬಹುದಾಗಿದೆ ಎಂದರು.ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯ್‌ಕುಮಾರ್ ಮಾತನಾಡಿ, ಗೋವುಗಳ ಸಂರಕ್ಷಣೆ ನಮ್ಮ ನಿಮ್ಮೆಲ್ಲರ ಜವಾಬ್ದಾರಿ ಕರ್ತವ್ಯ. ಸಮಾಜಮುಖಿ ಹಾಗೂ ಪವಿತ್ರವಾದ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.ಗೋಪೂಜೆ ಪ್ರಯುಕ್ತ 170 ಗೋವುಗಳಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಲಾಯಿತು. ಉಪಾಧ್ಯಕ್ಷ ಪ್ರಶಾಂತ್ ರಾಯ್ಕರ್, ಕಾರ್ಯದರ್ಶಿ ಗುರುರಾಜ್.ಎಂ ಶೇಟ್, ಖಜಾಂಚಿ ಆರ್.ಗಣೇಶ್, ಸತೀಶ್, ಕಮಲಾಕ್ಷ, ದೇವಿದಾಸ್ ಶೇಟ್, ಸಂತೋಷ್, ವಿಜಯ ರಾಯ್ಕರ್, ಶೇಷಾದ್ರಿ, ಕೆ.ರಾಘವೇಂದ್ರ , ಕೃಷ್ಣಮೂರ್ತಿ, ಬಿಂದು ವಿಜಯ್‌ಕುಮಾರ್, ಗೌರಿ ಗುರುರಾಜ್, ಶ್ರೀಪಾದ ರೇವಣಕರ್, ಚಿತ್ರಕೂಟ ಶ್ರೀನಿವಾಸ್ ಮತ್ತಿತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.