ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷರಾಗಿ ಗೌರಿಶಂಕರ್ ಅವಿರೋಧವಾಗಿ ಆಯ್ಕೆ

KannadaprabhaNewsNetwork | Published : Jul 11, 2024 1:34 AM

ಸಾರಾಂಶ

ಮದ್ದೂರು ಪಟ್ಟಣದಲ್ಲಿ ಜು.8ರಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸಿ.ಜಿ.ಗೌರಿಶಂಕರ ಅವರನ್ನು ಹೊರತುಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಚಂದ್ರಶೇಖರಪ್ಪ ಅವಿರೋಧ ಆಯ್ಕೆ ಘೋಷಣೆ ಮಾಡಿದರು.

ಕನ್ನಡಪ್ರಭ ವಾರ್ತೆ ಮದ್ದೂರು

ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಘಟಕದ ಅಧ್ಯಕ್ಷರಾಗಿ ಕೆಸ್ತೂರು ಗ್ರಾಮದ ಸಿ.ಜಿ.ಗೌರಿಶಂಕರ್ ಅವಿರೋಧವಾಗಿ ಆಯ್ಕೆಯಾದರು.

ಪಟ್ಟಣದಲ್ಲಿ ಜು.8ರಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸಿ.ಜಿ.ಗೌರಿಶಂಕರ ಅವರನ್ನು ಹೊರತುಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಚಂದ್ರಶೇಖರಪ್ಪ ಅವಿರೋಧ ಆಯ್ಕೆ ಘೋಷಣೆ ಮಾಡಿದರು.

ಸಂಘದ ನಿರ್ದೇಶಕರಾಗಿ ಮದ್ದೂರಿನ ಪಿ.ರಾಜಶೇಖರ್, ಎಂ.ವೀರಭದ್ರಸ್ವಾಮಿ, ಎಚ್.ಬಿ.ಸ್ವಾಮಿ, ಕೆ.ಶಿವಕುಮಾರ್, ಬೂದಗುಪ್ಪೆ ಗ್ರಾಮದ ಬಿ.ಎಸ್.ಬಸವಲಿಂಗಶಾಸ್ತ್ರಿ, ಎಸ್.ಮರಿಲಿಂಗಪ್ಪ, ಬೆಸಗರಹಳ್ಳಿ ಬಿ.ಎಸ್.ನಾಗರಾಜು, ದೊಡ್ಡ ಅರಸಿನಕೆರೆ ಡಿ.ಎಂ.ರವಿಕುಮಾರ್, ಅಣ್ಣೂರು ಆರ್.ಸಿದ್ದಪ್ಪ, ಭಾರತೀನಗರ ಕೆ.ಎಸ್.ಸಿದ್ದೇಶ್ವರ್, ಕಾಡುಕೊತ್ತನಹಳ್ಳಿ ದಯಾನಂದ್, ಎಸ್.ಐ.ಹೊನ್ನಲಗೆರೆ ಎಚ್.ಆರ್.ರೇವಣ್ಣಸ್ವಾಮಿ, ಬಿದರಕೋಟೆ ಯೋಗೇಶ್, ಮಹಿಳಾ ನಿರ್ದೇಶಕರಾಗಿ ಶಿವಪುರ ಶಿಲ್ಪಶ್ರೀ, ಭಾರತೀನಗರ ಜೆ.ಕವಿತಾ, ಮಡೇನಹಳ್ಳಿ ಎಂ.ಎಸ್.ನೇತ್ರಾವತಿ, ಕೆ.ಹೊನ್ನಲಗೆರೆ ಎಂ.ಎಸ್.ಮಂಜುಳಾ, ಭೀಮನಕೆರೆ ಶಶಿಕಲಾ, ಎಸ್.ಐ.ಹೊನ್ನಲಗೆರೆ ನಿಲಾಂಬಿಕ ಹಾಗೂ ತಗ್ಗಹಳ್ಳಿ ಗ್ರಾಮದ ಶಿವಕುಮಾರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸಿ.ಜಿ.ಗೌರಿಶಂಕರ್ ಮಾತನಾಡಿ, ಚುನಾವಣೆಯಲ್ಲಿ ನನ್ನನ್ನು ಅವಿರೋಧವಾಗಿ ಆಯ್ಕೆ ಮಾಡಿದ ತಾಲೂಕಿನ ಎಲ್ಲಾ ವೀರಶೈವ ಲಿಂಗಾಯತ ಮುಖಂಡರಿಗೆ ಹಾಗೂ ಸಂಘದ ಎಲ್ಲಾ ಸದಸ್ಯರಿಗೆ ಅಭಿನಂದನೆ ಸಲ್ಲಿಸುತ್ತೇನೆ ಹಾಗೂ ನಾನು ಮತ್ತು ನನ್ನ ತಂಡ ಸಮಾಜದ ಒಳಿತಿಗಾಗಿ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಭರವಸೆ ನೀಡಿದರು.ವಿಜೃಂಭಣೆಯಿಂದ ಜರುಗಿದ ದೇಗುಲದ ವಾರ್ಷಿಕೋತ್ಸವ

ಕನ್ನಡಪ್ರಭ ವಾರ್ತೆ ಮದ್ದೂರುತಾಲೂಕಿನ ಚಿಕ್ಕಹೊಸಗಾವಿ ಗ್ರಾಮದ ಶ್ರೀಕೆಂಪಮ್ಮದೇವಿ ದೇವಾಲಯದ ೧೬ನೇ ವರ್ಷದ ವಾರ್ಷಿಕೋತ್ಸವ ವಿಜೃಂಭಣೆಯಿಂದ ನಡೆಯಿತು. ಶ್ರೀಕೆಂಪಮ್ಮದೇವಿಯ ವಾರ್ಷಿಕೋತ್ಸವದ ಪ್ರಯುಕ್ತ ಮಂಗಳವಾರ ರಾತ್ರಿ ಬಹಳ ವಿಜೃಂಭಣೆಯಿಂದ ದೇವರ ಉತ್ಸವ ನಡೆಯಿತು. ಗ್ರಾಮದ ಬೀದಿಗಳಲ್ಲಿ ಝಗಮಗಿಸುವ ವಿದ್ಯುತ್ ದೀಪಗಳ ಅಲಂಕಾರದೊಂದಿಗೆ ಗ್ರಾಮದ ಕೃಷ್ಣದೇವರು, ಮುತ್ಸಂದ್ರ ಮುದ್ದಪ್ಪ ದೇವರು, ಹೊಸಗಾವಿ ಚನ್ನಪ್ಪ ದೇವರುಗಳ ಉತ್ಸವದೊಂದಿಗೆ ವೀರಗಾಸೆ ಮಕ್ಕಳು ಹಾಗೂ ತಮಟೆ ಮತ್ತು ವಾದ್ಯಗಳ ಜೊತೆಯಲ್ಲಿ ಗ್ರಾಮದ ಕೃಷ್ಣ ದೇವರ ಅರ್ಚಕರು, ಮಾರಮ್ಮ ಹಾಗೂ ಹಳೇ ಊರಮ್ಮನ ಗುಡ್ಡಪ್ಪಂದಿರು ಮತ್ತು ಮಂಡ್ಯದ ಪೂಜೆ ಕುಣಿತ ತಂಡಗಳ ಸಮೇತ ಶ್ರೀಕೆಂಪಮ್ಮ ದೇವರ ಮೆರವಣಿಗೆ ನಡೆಯಿತು. ಬಳಿಕ ಸುತ್ತಮುತ್ತಲ ಗ್ರಾಮಸ್ಥರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

Share this article