ಕನ್ನಡಪ್ರಭ ವಾರ್ತೆ ಬೇಲೂರು ಸರ್ಕಾರದ ಮುಂದಿರುವ ರಾಜ್ಯ ಸರ್ಕಾರಿ ನೌಕರರ 3 ನ್ಯಾಯಯುತ ಬೇಡಿಕೆಗಳನ್ನು ಸರ್ಕಾರಿ ಆದೇಶ ಹೊರಡಿಸಿ ಶೀಘ್ರ ಜಾರಿಗೊಳಿಸಲು, ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಜಿಲ್ಲಾ, ತಾಲೂಕಿನ ನೌಕರರರು ಶಾಸಕ ಎಚ್ ಕೆ ಸುರೇಶ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ರಾಜ್ಯ 7ನೇ ವೇತನ ಆಯೋಗವು ಸರ್ಕಾರಕ್ಕೆ ತನ್ನ ಪೂರ್ಣ ಪ್ರಮಾಣದ ವರದಿಯನ್ನು ಸಲ್ಲಿಸಿ ನಾಲ್ಕು ತಿಂಗಳು ಪೂರ್ಣಗೊಂಡರೂ ಮುಖ್ಯಮಂತ್ರಿಗಳು ಸರ್ಕಾರಿ ನೌಕರರ ಸಮ್ಮೇಳನದಲ್ಲಿ ನೀಡಿದ್ದ ಭರವಸೆಯಂತೆ ವೇತನ ಆಯೋಗದ ವರದಿಯನ್ನು ಅನುಷ್ಠಾನಗೊಳಿಸದೇ ಇರುವುದರಿಂದ ರಾಜ್ಯ ಸರ್ಕಾರದ ಅಧಿಕಾರಿ-ನೌಕರರು ಸಹಜವಾಗಿಯೇ ವೇತನ ಪರಿಷ್ಕರಣೆ ವಿಳಂಬವಾಗುವುದೆಂಬ ಆತಂಕಕ್ಕೆ ಒಳಗಾಗಿ ಸಾಮಾಜಿಕ ಜಾಲತಾಣಗಳ ಮೂಲಕ ಸರ್ಕಾರ ಹಾಗೂ ಸಂಘಟನೆಯ ವಿರುದ್ಧ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದಾರೆ. ಸರ್ಕಾರದ ಮುಂದಿರುವ ರಾಜ್ಯ ಸರ್ಕಾರಿ ನೌಕರರ 3 ನ್ಯಾಯಯುತ ಬೇಡಿಕೆಗಳನ್ನು ಸರ್ಕಾರಿ ಆದೇಶ ಹೊರಡಿಸಿ ಶೀಘ್ರ ಜಾರಿಗೊಳಿಸಲು, ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಜಿಲ್ಲಾ, ತಾಲೂಕಿನ ನೌಕರರರು ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಮುಳ್ಳಯ್ಯನವರು, ಜಿಲ್ಲಾಧ್ಯಕ್ಷರು ಕೃಷ್ಣೆಗೌಡ ತಾಲೂಕು ಅಧ್ಯಕ್ಷರು ಮಂಜುನಾಥ್ ಆರ್, ಕಾರ್ಯದರ್ಶಿ ಕೇಶವ ಕಿರಣ್, ಉಪಾಧ್ಯಕ್ಷ ಪೂರ್ಣೇಶ್ ಭಾನುಪ್ರಕಾಶ್, ಸಂಘಟನಾ ಕಾರ್ಯದರ್ಶಿ ಶುಭಾಷ್, ವೆಂಕಟರಾಮ ಖಜಾಂಚಿ ಸಂತೋಷ್, ರಮೇಶ್, ಮೋಕ್ಷ, ಧನಂಜಯ್, ಶಿಕ್ಷಕರಾದ ಮಂಜಯ್ಯ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಹೇಮಂತ್, ರವಿ ನಾಯಕ್, ಮೋಹನ್, ಶಿಕ್ಷಕರ ಸಂಘದ ಭದ್ರೇಗೌಡ, ಕುಮಾರಸ್ವಾಮಿ, ರೂಪ, ಮೋಸಂ ತಾಜ್, ಸುಧಾಮಣಿ ಇತರೆ ಎಲ್ಲಾ ಸಂಘದ ನಿರ್ದೇಶಕರು, ಎಲ್ಲ ಇಲಾಖೆಯ ನೌಕರರು ಹಾಜರಿದ್ದರು.