ರಟ್ಟೀಹಳ್ಳಿ: ಕನ್ನಡ ನಾಡು-ನುಡಿ, ಭಾಷೆ, ನೆಲ, ಜಲ, ಕನ್ನಡಿಗರ ಸ್ವಾಭಿಮಾನ ಕಾಪಾಡುವಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ನೇತೃತ್ವದ ಸರ್ಕಾರ ಸದಾ ಬದ್ಧ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.
ನನ್ನ ಆಡಳಿತ ವ್ಯವಸ್ಥೆಯಲ್ಲಿ ಪ್ರಾಥಮಿಕ ಹಂತದ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದ್ದು, ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತ ನಾಣ್ಣುಡಿಯಂತೆ ಪ್ರಾಥಮಿಕ ಹಂತದಲ್ಲಿ ಗುಣ ಮಟ್ಟದ ಶಿಕ್ಷಣ ಹಾಗೂ ಮೂಲಭೂತ ಸೌಕರ್ಯಗಳನ್ನು ನೀಡಿದರೆ ಮುಂಬರುವ ಎಲ್ಲ ಹಂತಗಳಲ್ಲಿ ಮಕ್ಕಳ ಜ್ಞಾನ ವೃದ್ಧಿಯಾಗಿ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುವುದು ಕಾರಣ ಆ ನಿಟ್ಟಿನಲ್ಲಿ ಸರಕಾರ ಪ್ರಸ್ತುತ 17 ಕೆಪಿಎಸ್ ಶಾಲೆಗಳನ್ನು ನೀಡಿದೆ ಎಂದರು.
ತಹಸೀಲ್ದಾರ ಜಿ. ಜಯರಾಮ್ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಈ ಹಿಂದೆ ಮೈಸೂರು ರಾಜ್ಯವೆಂದು ಹೆಸರು ಮಾಡಿ ತದ ನಂತರ 1973ರಲ್ಲಿ ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ನಾಮಕರಣ ಮಾಡಿದ ನ.1 ಅನ್ನು ಕರ್ನಾಟಕ ರಾಜ್ಯೋತ್ಸವ ಆಚರಿಸಲಾಗುತ್ತಿದೆ, ಕನ್ನಡವನ್ನು ಕೇವಲ ಒಂದು ತಿಂಗಳು ಆಚರಿಸದರೆ ಸಾಲದು, ಕನ್ನಡ ಭಾಷೆ ನಮ್ಮ ಹಾಸುಹೊಕ್ಕಾಗಬೇಕು ಎಂದರು.ಕನ್ನಡ ನಾಡಿನಲ್ಲಿ ಅನೇಕ ಭಾಷಿಕರು, ನೆರೆ ರಾಜ್ಯದ ಜನರಿಗೆ ಅನ್ನ ನೀಡುವ ನಾಡಾಗಿದ್ದು ಇಲ್ಲಿ ನೆಲೆಸಿರುವ ಅನ್ಯ ಭಾಷಿಕರು ಕನ್ನಡವನ್ನು ಹೆಚ್ಚು ಪ್ರೀತಿಸುತ್ತಾರೆ. ಆದರೆ ನಮ್ಮ ಕನ್ನಡ ನಾಡಿನಲ್ಲಿ ಹುಟ್ಟಿದ ಜನರು ಕನ್ನಡ ಮಾತನಾಡಲು ಹಿಂಜರಿಯುತ್ತಿರುವುದು ಇದೊಂದು ಕೆಟ್ಟ ಬೆಳವಣಿಗೆಯಾಗಿದ್ದು ಇದಕ್ಕೆ ಕಡಿವಾಣ ಹಾಕಿ ತಮ್ಮ ತಮ್ಮ ಮನೆಯಲ್ಲಿ ಯಾವ ಭಾಷೆಯನ್ನಾದರೂ ಮಾತನಾಡಲಿ. ಮನೆಯಿಂದ ಹೊರ ಬಂದ ತಕ್ಷಣ ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕು ಆಗ ಮಾತ್ರ ನಮ್ಮ ಮಾತೃ ಭಾಷೆಯನ್ನು ಉಳಿಸಿಕೊಂಡು ಬೆಳೆಸುವಲ್ಲಿ ಸಾಧ್ಯವಾಗುವುದು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ಸುರೇಶಕುಮಾರ, ಸಿಪಿಐ ಮಂಜುನಾಥ ಪಂಡಿತ, ಪಿಎಸ್‌ಐ ಚಂದ್ರಶೇಖರ ವಿಭೂತಿಮಠ, ಪಟ್ಟಣ ಪಂಚಾಯತ್ ಸದಸ್ಯೆ ಲಲಿತಾ ಚನ್ನಗೌಡ್ರ, ಅಕ್ಷರ ದಾಸೋಹ ಅಧಿಕಾರಿ ಎಚ್.ಎಚ್. ಜಾಡರ, ಎಸ್‌ಡಿಎಂಸಿ ಅಧ್ಯಕ್ಷ ರಮೇಶ ತಳವಾರ, ಮಂಜು ಅಸ್ವಾಲಿ, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸಂತೋಷ ಚಂದ್ರಕೇರ, ಸಾಹಿತ್ಯ ಪರಿಷತ್ ತಾಲೂಕಪ ಅಧ್ಯಕ್ಷ ಎಂ.ಸಿ. ತುಮ್ಮಿನಕಟ್ಟಿ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಕರಿಯಪ್ಪ ಕೊರವರ, ವಿಜಯ ಅಂಗಡಿ, ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ ಶೆಟ್ಟಿ ಬಣದ ತಾಲೂಕಾಧ್ಯಕ್ಷ ಇರಫಾನ್ ಜಡದಿ, ವಿಠಲ್ ನಾಮದೇವ, ಹನಮಂತಪ್ಪ ಪರೀಟ, ಪ್ರವೀಣ ಉಜ್ಜಕ್ಕಳವರ ಮುಂತಾದವರು ಇದ್ದರು.
ನಂತರ ಮಾತನಾಡಿದ ಅವರು, ಕನ್ನಡ ನಾಡು, ನುಡಿ, ಜಲ ಭಾಷೆಗೆ ಧಕ್ಕೆಯಾದ ಸಂದರ್ಭದಲ್ಲಿ ಮೊದಲು ಹೋರಾಟಕ್ಕೆ ಇಳಿಯುವುದು ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಎಂದು ಹೇಳಿಕೋಳ್ಳಲು ಹೆಮ್ಮೆ ಎನಿಸುತ್ತದೆ. ಆ ನಿಟ್ಟಿನಲ್ಲಿ ರಾಜ್ಯಾಧ್ಯಕ್ಷ ನಾರಾಯಣಗೌಡ ಅವರ ನೇತೃತ್ವದಲ್ಲಿ ಯಾವುದೇ ಹೋರಾಟಕ್ಕೂ ಸಿದ್ಧ ಎಂದರು.
ಪಟ್ಟಣ ಪಂಚಾಯತ್: ಪಟ್ಟಣ ಪಂಚಾಯತ್ ಆವರಣದಲ್ಲಿ 71ನೇ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಅಧ್ಯಕ್ಷ ರವೀಂದ್ರ ಮುದಿಯಪ್ಪನವರ ಧ್ವಜಾರೋಹಣ ನೆರವೇರಿಸಿದರು.