ಕನ್ನಡಪ್ರಭ ವಾರ್ತೆ ಮೈಸೂರುವೈದ್ಯಕೀಯ ಪದವಿ ಪಡೆದವರು ವೈಜ್ಞಾನಿಕವಾಗಿ ಅಧ್ಯಯನ ಮಾಡಿ ದೇಶಕ್ಕೆ ಕೊಡುಗೆ ನೀಡಬೇಕು ಎಂದು ಕರ್ನಾಟಕ ಹೈಕೋರ್ಟ್ ನ್ಯಾಯಾಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಕರೆ ನೀಡಿದರು.ರಾಜ್ಯ ಮುಕ್ತ ವಿವಿ ಘಟಿಕೋತ್ಸವ ಭವನದಲ್ಲಿ ಮಂಗಳವಾರ ನಡೆದ ಸರ್ಕಾರಿ ಆಯರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವಿಶಿಖಾನುಪ್ರವೇಶ- ಪದವಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತ ದೇಶವು ಶಸ್ತ್ರ ನಾಡಲ್ಲ. ಶಾಸ್ತ್ರದ ನಾಡಗಿದ್ದು, ಅಧ್ಯಯನಕ್ಕೆ ಹೆಚ್ಚು ಒತ್ತು ನೀಡುತ್ತದೆ. ಇಲ್ಲಿ ವೈದ್ಯಶಾಸ್ತ್ರವು ಸಂಪೂರ್ಣ ಅಭಿವೃದ್ಧಿಗೊಂಡಿಲ್ಲ. ಪದವಿ ಪಡೆದುಕೊಳ್ಳುತ್ತಿರುವವರು ಕ್ಷೇತ್ರವನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಬೇಕು ಎಂದು ಕಿವಿಮಾತು ಹೇಳಿದರು.ಪದವಿ ಪಡೆದವರು ನಮ್ಮ ಓದು ಅಂತ್ಯವಾಯಿತು ಎಂದು ಅಧ್ಯಯನ ಮಾಡುವುದನ್ನು ಅಂತ್ಯಗೊಳಿಸಬೇಡಿ. ನಮ್ಮದು ಅಧ್ಯಯನಶೀಲಾ ದೇಶವಾಗಿದ್ದು, ಅಧ್ಯಯನಕ್ಕೆ ಹೆಚ್ಚು ಒತ್ತು ನೀಡಿ. ಅಧ್ಯಯನಶೀಲಾರಾಗದಿದ್ದರೆ ನಿಂತ ನೀರಾಗುತ್ತೇವೆ ಎಂದು ಅವರು ಎಚ್ಚರಿಸಿದರು.ದೇಶದ ಕೆಲವೇ ರಾಜ್ಯಗಳಲ್ಲಿ ಅಲ್ಲಿನ ಸರ್ಕಾರಗಳು ವೈದ್ಯರ ಮೇಲೆ ಹಲ್ಲೆ ಮಾಡಬಾರದು. ವೈದ್ಯರಿಗೆ ಹಿಂಸೆ ಮಾಡದಿರೆ ಅವರಿಗೆ ಶಿಕ್ಷೆ ಆಗುವ ಕಾನೂನು ರಚಿಸಲಾಗಿದೆ. ವೈದ್ಯರ ಮೇಲೆ ಯಾವುದೇ ಕಾನೂನು ಕ್ರಮ ಜರುಗಿಸುವ ಹಾಗಿಲ್ಲ. ಆಸ್ಪತ್ರೆಯ ಮುಂದೆ ಪ್ರತಿಭಟನೆ ಮಾಡದೆ ಇರುವ ಕಾನೂನು ಅನ್ನು ರಾಜ್ಯ ಸರ್ಕಾರವು ಜಾರಿಗೆ ತಂದಿದೆ. ಅದರಂತೆ ನಾನು ಕೆಲವು ತೀರ್ಪುಗಳನ್ನು ಬರೆದಿದ್ದೇನೆ. ನೀವುಗಳು ಈ ವಿಷಯದಲ್ಲಿ ರಾಜ್ಯ ಸರ್ಕಾರಕ್ಕೆ ಆಭಾರಿಯಾಗಬೇಕಿದೆ ಎಂದು ಅವರು ತಿಳಿಸಿದರು.ವೈದ್ಯರು ತಮ್ಮ ಸೇವೆಗೆ ಮೀರಿದ ಹಣ ಸಂದಾಯ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಅದನ್ನು ಸುಳ್ಳು ಮಾಡಬೇಕಿರುವ ಜವಾಬ್ದಾರಿ ನಿಮ್ಮ ಮೇಲಿದೆ. ಯಾವುದೇ ವೈರಸ್ ತಾರತಾಮ್ಯವನ್ನು ಮಾಡುವುದಿಲ್ಲ. ದಲಿತ, ಹಿಂದುಳಿದ ಮತ್ತು ನಿರುದ್ಯೋಗಿಗಳಿಗೆ ರೋಗಗಳು ಬೇಗ ಬರುತ್ತದೆ. ಇಂತಹ ಸಂದರ್ಭದಲ್ಲಿ ಅವರಿಗೆ ಸೂಕ್ತ ಚಿಕಿತ್ಸೆ ನೀಡುವ ಮೂಲಕ ನಿಮ್ಮ ಕಾರ್ಯಕ್ಷಮತೆ ಮೆರೆಯಿರಿ ಎಂದು ಅವರು ಸಲಹೆ ನೀಡಿದರು.ಒಟ್ಟು 82 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಪೂಜಾ ಪಾಟೀಲ್ ಪ್ರಥಮ ಮತ್ತು ಪಿ. ಭವನ್ ಕುಮಾರ್ ದ್ವಿತೀಯ ಟಾಪರ್ ಆಗಿ ಹೊರಹೊಮ್ಮಿದರು.ಆಯುಷ್ ಇಲಾಖೆಯ ಆಯುಕ್ತ ಡಾ. ಶ್ರೀನಿವಾಸಲು, ದೂರದರ್ಶನ ನಿರೂಪಕ ಡಾ.ನಾ. ಸೋಮೇಶ್ವರ, ಕಾಲೇಜಿನ ಪ್ರಾಂಶುಪಾಲ ಡಾ. ಗಜಾನನ ಹೆಗಡೆ, ಸ್ಥಾನಿಕ ವೈದ್ಯೆ ಡಾ. ಶಶಿರೇಖಾ, ಪ್ರಾಧ್ಯಾಪಕರಾದ ಡಾ.ಎಂ.ಡಿ. ಸಂಜಯ್ ಕುಮಾರ್ , ಡಾ.ಕೆ. ಶ್ರೀನಿವಾಸ ಯಾದವ್ ಮೊದಲಾದವರು ಇದ್ದರು.