ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಿಸುವಲ್ಲಿ ಸರ್ಕಾರಿ ಕಾಲೇಜು ಯಶಸ್ವಿ

KannadaprabhaNewsNetwork |  
Published : Jun 18, 2025, 02:14 AM ISTUpdated : Jun 18, 2025, 02:15 AM IST
ಸುದ್ದಿಗೋಷ್ಠಿಯಲ್ಲಿ   ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಎ. ಗೀತಾ ಮಾತನಾಡಿದರು | Kannada Prabha

ಸಾರಾಂಶ

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತನ್ನ 18 ವರ್ಷಗಳ ಸಾರ್ಥಕ ಸೇವೆಯೊಂದಿಗೆ ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯತೆ, ನೈತಿಕತೆ, ಕಲೆ, ಸಾಹಿತ್ಯ ವಿಜ್ಞಾನ ಕ್ರೀಡೆ ಹಾಗೂ ಕಂಪ್ಯೂಟರ್‌ ಜ್ಞಾನ ಸೇರಿದಂತೆ ಸರ್ವಾಂಗೀಣ ಪ್ರಗತಿಗೆ ಪೂರಕವಾಗಿ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಿ ರೂಪಿಸುವಲ್ಲಿ ಯಶಸ್ವಿಯಾಗಿದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಎ. ಗೀತಾ ತಿಳಿಸಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ನಗರದ ಹೊರ ವಲಯದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತನ್ನ 18 ವರ್ಷಗಳ ಸಾರ್ಥಕ ಸೇವೆಯೊಂದಿಗೆ ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯತೆ, ನೈತಿಕತೆ, ಕಲೆ, ಸಾಹಿತ್ಯ ವಿಜ್ಞಾನ ಕ್ರೀಡೆ ಹಾಗೂ ಕಂಪ್ಯೂಟರ್‌ ಜ್ಞಾನ ಸೇರಿದಂತೆ ಸರ್ವಾಂಗೀಣ ಪ್ರಗತಿಗೆ ಪೂರಕವಾಗಿ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಿ ರೂಪಿಸುವಲ್ಲಿ ಯಶಸ್ವಿಯಾಗಿದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಎ. ಗೀತಾ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಕಾಲೇಜು ವಿಶಾಲವಾದ ಪ್ರಕೃತಿ ಸೌಂದರ್ಯದ ನಡುವೆ ಸುಸಜ್ಜಿತ ಕಟ್ಟಡ ಹೊಂದಿ, ಪ್ರತಿಭಾನ್ವಿತ ಅಧ್ಯಾಪಕರ ಬೋಧನೆಯ ಮೂಲಕ ಪ್ರತಿವರ್ಷ ಅತ್ಯುತ್ತಮ ಫಲಿತಾಂಶ ಪಡೆಯುತ್ತಿದೆ. ಪ್ರತಿಷ್ಠಿತ ಕಂಪನಿ ಸರ್ಕಾರಿ ಕ್ಷೇತ್ರಗಳಲ್ಲಿ ವಿವಿಧ ಉದ್ಯೆಗಳನ್ನು ನಮ್ಮ ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ ಎಂದರು.

ನಮ್ಮ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಶಿಕ್ಷಣದಿಂದ ಸಂಸ್ಕಾರ ಸಂಸ್ಕಾರದಿಂದ ಸಮೃದ್ಧ ಜೀವನ ಎನ್ನುವ ನೈತಿಕ ಮೌಲ್ಯ ಸಮಗ್ರ ವ್ಯಕ್ತಿತ್ವ ವಿಕಾಸನಕ್ಕೆ ಒತ್ತು ನೀಡುವ ಶೈಕ್ಷಣಿಕ ಕೇಂದ್ರವಾಗಿದೆ. ಸರ್ಕಾರದ ಅನುಗುಣವಾಗಿ ಅನುಗುಣವಾಗಿ ಜ್ಞಾನಾರ್ಜನೆಗೆ ಪೂರಕವಾಗಿದೆ. ವಿದ್ಯಾರ್ಥಿಗಳಿಗೆ ವಿಭಾಗ ವಾಣಿಜ್ಯ ವಿಭಾಗ ಜೊತೆಗೆ ಪ್ರತಿ ಪ್ರಸಿದ್ಧ ವರ್ಷ ಗಣಕ ವಿಜ್ಞಾನ ವಿಭಾಗ, ಇಂಗ್ಲಿಷ್ ಮೇಜರ್ ಪ್ರಾರಂಭಿಸುತ್ತಿದ್ದೇವೆ ಎಂದು ತಿಳಿಸಿದರು.

18000 ಗ್ರಂಥಗಳುಳ್ಳ ಸುಸಜ್ಜಿತ ಗ್ರಂಥಾಲಯ, ಆಧುನಿಕ ಪ್ರಯೋಗಶಾಲೆ, ಡಿಜಿಟಲ್ ಸಂಪನ್ಮೂಲ ಕಲಿಕೆಗೆ ಬೆಂಬಲ ನೀಡುತ್ತದೆ. ಶೈಕ್ಷಣಿಕ ವಿಷಯಗಳ ಜೊತೆಗೆ ಈಗ ಕ್ರೀಡೆ ಸಾಂಸ್ಕೃತಿಕ ಚಟುವಟಿಕೆ ಮತ್ತು ರೆಡ್ ಕ್ರಾಸ್ ಗಳಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳುವ ಮೂಲಕ ಉತ್ತಮ ವ್ಯಕ್ತಿತ್ವ ಜೊತೆಗೆ ನಾಯಕತ್ವದ ಗುಣಗಳನ್ನು ಬೆಳೆಸಲು ಪ್ರಾಧ್ಯಾಪಕ ವರ್ಗ ಪ್ರೋತ್ಸಾಹ ನೀಡುತ್ತದೆ ಎಂದರು.

ವಿದ್ಯಾರ್ಜನೆಗೆ ಉತ್ತಮ ವಾತಾವರಣ ಆಧುನಿಕ ಕಟ್ಟಡ , ಕ್ರೀಡೆ, ಎನ್.ಎಸ್.ಎಸ್ , ಸ್ಕೌಡ್ಸ್ ಅಂಡ್ ಗೈಡ್ಸ್ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಅವಕಾಶ ಹಾಗೂ ಪ್ರೋತ್ಸಾಹ ಭೋದನಾ ಸಲಕರಣೆ ಮತ್ತು ಪ್ರಯೋಗಾಲಯವನ್ನು ಹೊಂದಿರುವ ಈ ಕಾಲೇಜಿಗೆ ಕಳೆದ 18 ವರ್ಷಗಳಿಂದ ಅತ್ಯುತ್ತಮ ಫಲಿತಾಂಶ ಬಂದಿದ್ದು 2025-26ನೇ ಸಾಲಿಗೆ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುವ ಮೂಲಕ ಸರ್ಕಾರದ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಬಳಸಿಕೊಂಡು ತಮ್ಮ ಜನಾರ್ಜನೆಯನ್ನು ವೃಽಗೊಳಿಸಿಕೊಳ್ಳಬೇಕೇದು ಅವರು ಸಲಹೆ ಇತ್ತ ಅವರು, ಸ್ಮಾರ್ಟ್ ಕ್ಲಾಸ್ ಸೌಲಭ್ಯವಿದೆ. ಉದ್ಯೋಗವಕಾಶಗಳ ಕೋಶದಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸೂಕ್ತ ಮಾರ್ಗದರ್ಶನ ನೀಡಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಶಿವಕುಮಾರ್ ಡಾ. ರಾಜ್ ಕುಮಾರ್ ಡಾ. ನಾರಾಯಣ್, ರಾಘವೇಂದ್ರ ಹಾಗೂ ಹರೀಶ್ ಇನ್ನಿತರರು ಇದ್ದರು

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ