ಕನ್ನಡಪ್ರಭ ವಾರ್ತೆ ಮಡಿಕೇರಿ
ಕಾವೇರಿ ನಾಡಿನ ಪುಣ್ಯ ಭೂಮಿಯಲ್ಲಿ ಹುಟ್ಟಿ ಬೆಳೆದ ನಾವುಗಳು ಕೊಡವ ಭಾಷೆ, ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಎಲ್ಲೆಡೆ ಪಸರಿಸುವಂತಾಗಬೇಕು. ಆ ದಿಸೆಯಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಸಾಹಿತ್ಯ ಮತ್ತು ಸಂಸ್ಕೃತಿ ಚಟುವಟಿಕೆಗೆ ಸರ್ಕಾರದಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ತಿಳಿಸಿದ್ದಾರೆ.ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಅಮ್ಮತ್ತಿ ಕೊಡವ ಸಮಾಜದಲ್ಲಿ ಶನಿವಾರ ಆಯೋಜಿಸಲಾದ ‘ಕೊಡವ ಬಲ್ಯನಮ್ಮೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೊಡವ ಭಾಷೆ, ನಾಡು ನುಡಿ ಬಗ್ಗೆ ವಿಶೇಷ ಪ್ರೀತಿ ಇರಬೇಕು. ಕೊಡವ ಭಾಷೆ ಕೊಡಗಿನ ಪರಿಸರ ಮತ್ತು ಪ್ರಕೃತಿಯನ್ನು ಸಂರಕ್ಷಿಸಬೇಕು. ಕೊಡವ ಭಾಷೆ ಸಂಸ್ಕೃತಿ, ಕಲೆಗಳು ಉಳಿದಾಗ, ಸಮಾಜ ಉಳಿಯಲು ಸಾಧ್ಯ. ಆ ನಿಟ್ಟಿನಲ್ಲಿ ಕೊಡವ ಭಾಷೆ ಸಂಸ್ಕೃತಿ ಕಲೆಗಳನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯಬೇಕು ಎಂದು ಹೇಳಿದರು.ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಮಾತನಾಡಿ, ಕೊಡವ ಭಾಷಿಕರ ಪರಂಪರೆ ಹೆಗ್ಗುರುತುಗಳಾದ ಐನ್‌ಮನೆ, ಮುಂದ್‌ಮನೆ, ಕೈಮಡ, ಅಂಬಲ, ಮಂದ್-ಮಾನಿ, ಕೇಕೊಳ- ತೂಟ್ಂಗಳ, ಆರೋಡಗಳನ್ನು ಉಳಿಸಿಕೊಂಡು ಹೋಗಲು ಸರ್ಕಾರದಿಂದ ಸೌಲಭ್ಯ ಒದಗಿಸುವಂತಾಗಬೇಕು. ಜೊತೆಗೆ ಪ್ರತ್ಯೇಕ ಪರಿಹಾರ ನಿಧಿ ಸ್ಥಾಪಿಸುವಂತಾಗಬೇಕು ಎಂದು ಕೋರಿದರು.
ಅಮ್ಮತ್ತಿ ಕೊಡವ ಸಮಾಜದ ಅಧ್ಯಕ್ಷರಾದ ಐನಂಡ ಪ್ರಕಾಶ್ ಗಣಪತಿ, ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಕೆ.ಸುಬ್ರಮಣಿ, ಕೊಡವ ಸಮಾಜದ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣುಕಾರ್ಯಪ್ಪ, ಕೊಡವ ಭಾಷಾ ಸಮುದಾಯಗಳ ಕೂಟದ ಅಧ್ಯಕ್ಷ ಡಾ.ಮೇಚಿರ ಸುಭಾಷ್ ನಾಣಯ್ಯ, ಸವಿತ ಸಮಾಜದ ಅಧ್ಯಕ್ಷ ತಾಪನೆರ ಎಂ.ಸಾಬು, ಬಣ್ಣ ಸಮಾಜದ ಅಧ್ಯಕ್ಷ ಬೀಕಚಂಡ ಬೆಳ್ಯಪ್ಪ, ಸೋಮವಾರಪೇಟೆ ಕೊಡವ ಸಮಾಜದ ಅಧ್ಯಕ್ಷ ಮಾಳೇಟಿರ ಅಭಿಮನ್ಯು ಕುಮಾರ್, ಅರಮನೆಪಾಲೆ ಸಮಾಜದ ಮುಖ್ಯಸ್ಥ ಅರಮನೆಪಾಲೆರ ದೇವಯ್ಯ ಮಾತನಾಡಿದರು.‘ಪಟ್ಟೋಲೆ ಪಳಮೆ’ಯ ನಡಿಕೇರಿಯಂಡ ಚಿಣ್ಣಪ್ಪ ಅವರ ಜ್ಞಾಪಕಾರ್ಥವಾಗಿ ಮೇ.ಮುಂಡಂಡ ಎಂ.ಮಾಚಯ್ಯ ಬರೆದಿರುವ ‘ಎಳ್ತ್ರ ಜೊಪ್ಪೆ’, ಕ್ಯಾ.ಬಿದ್ದಂಡ ನಾಣಿ ದೇವಯ್ಯ ಬರೆದಿರುವ ‘ಬೊಳ್ಳಿ ಕೊಂಬ್‌ರ ಕೂತ್’, ಸಣ್ಣುವಂಡ ಎಂ. ವಿಶ್ವನಾಥ್ (ಪ್ರಕಾಶ) ಬರೆದಿರುವ ‘ಕೂತ್ಂಗೊರೆ’, ಉಡುವೆರ ರಾಜೇಶ್ ಉತ್ತಪ್ಪ ಬರೆದಿರುವ ‘ಕೂಟ್‌ಕರಿ’, ಅಜ್ಜಿನಿಕಂಡ ಪ್ರಮೀಳಾ ನಾಚಯ್ಯ ಬರೆದಿರುವ ‘ಮರಕೊಟ್ಟ’, ಮುಂಡಂಡ ಎ. ಪೂಣಚ್ಚ ಬರೆದಿರುವ ‘ಎಳ್ತ್ರ ಪತ್ತಾಯ’, (ದಿ.ಬಾಚಮಡ ಡಿ.ಗಣಪತಿ) ಅವರ ‘ಕೊಡವ: ಓರ್ ಚಿತ್ರಕಥೆ’, ಮುಕ್ಕಾಟಿರ ಸರೋಜ ಸುಬ್ಬಯ್ಯ ಬರೆದಿರುವ ‘ಸರೋಜ’, ಬೊಳ್ಳಚೆಟ್ಟಿರ ವಿಜಯ ಚೆಟ್ಟಿಚ ಅವರು ಬರೆದಿರುವ ‘ಚೆಂಬಂದುಡಿ’ ಎಂಬ ಪುಸ್ತಕವನ್ನು ಐಆರ್‌ಎಸ್ ಅಧಿಕಾರಿ ದೇವಣಿರ ಪ್ರೀತ್ ಗಣಪತಿ ಬಿಡುಗಡೆ ಮಾಡಿದರು.
ಮೋರಿರಾಜಪ್ಪ ಜ್ಞಾಪಕಾರ್ಥವಾಗಿ ವಿವಿಧ ಸ್ಫರ್ಧಾ ಕಾರ್ಯಕ್ರಮ ನಡೆದವು. ಉಮ್ಮತ್ತಾಟ್-ಪೊನ್ನಾಜಿರ ಧರಣಿ, ಬೊಳಕಾಟ್-ಕುಕ್ಕೆರ ಜಯ ಚಿಣ್ಣಪ್ಪ, ಕೋಲಾಟ್-ಡಾ.ಅಜ್ಜಿನಿಕಂಡ ಸಿ. ಗಣಪತಿ, ಕತ್ತಿಯಾಟ್-ಮಲ್ಲಪನೆರ ವಿನು ಚಿಣ್ಣಪ್ಪ, ಉರ್‌ಟಿಕೊಟ್ಟ್ ಆಟ್-ಕುಡಿಯರ ಶಾರದ, ಕಪ್ಪೆಯಾಟ್-ಚೊಟ್ಟೆಯಂಡ ಸಮಿತ್ ಸೋಮಣ್ಣ, ಬಾಳೋಪಾಟ್-ಬೊಟ್ಟೋಳಂಡ ಕಾಶಿ ಅಚ್ಚಯ್ಯ, ಕೊಂಬು-ಕೊಟ್ಟ್- ಶ್ರೀನಿವಾಸ್, ವಾಲಗತಾಟ್- ಅಜ್ಜಿಕುಟ್ಟಿರ ಸಿ. ಗಿರೀಶ್, ಸಮ್ಮಂಧ ಕೊಡ್‌ಪ-ಚೇನಂಡ ರಘು ಉತ್ತಪ್ಪ, ಪರಿಯಕಳಿ-ಪಾಲೇಂಗಡ ಅಮಿತ್ ಭೀಮಯ್ಯ, ಮಂಡೆಕ್ ‘ತುಣಿ’ ಕೆಟ್ಟುವ-ಕ್ಯಾಲೇಟಿರ ಪವಿತ್ ಪೂವಯ್ಯ ಚಾಲನೆ ನೀಡಿದರು.ಆಕರ್ಷಕ ಮೆರವಣಿಗೆ:
ಅಮ್ಮತ್ತಿಯ ಹೊಸೂರು ಜಂಕ್ಷನ್‌ನಿಂದ ಕೊಡವ ಸಮಾಜದ ವರೆಗೆ ನಡೆದ ಕೊಡವ ಸಾಂಸ್ಕೃತಿಕ ಜಾನಪದ ಮೆರವಣಿಗೆಗೆ ಅಮ್ಮತ್ತಿ ನಾಡಿನ ಹಿರಿಯರು ಹಾಗೂ ಸಮಾಜ ಸೇವಕರಾದ ನೆಲ್ಲಮಕ್ಕಡ ಶಂಭು ಸೋಮಯ್ಯ ಹಾಗೂ ಅಮ್ಮತ್ತಿ ರೈತ ಸಂಘ ಅಧ್ಯಕ್ಷ ಕಾವಾಡಿಚಂಡ ಯು.ಗಣಪತಿ ಚಾಲನೆ ನೀಡಿದರು.ಕೊಂಬು-ಕೊಟ್ಟ್, ತಳಿಯತಕ್ಕಿ ಬೊಳಕ್, ದುಡಿಕೊಟ್ಟ್ ಪಾಟ್, ಅಜ್ಜಪ್ಪ-ತಾಯವ್ವ ತೆರೆ, ಕೊಡವ ಪೊರಪಾಡ್‌ಲ್, ನಿಪ್ಪುಲ್ ತೋಕಾಯಿ, ಒಡಿಕತ್ತಿ, ಕೈಲಾಯಿ, ಅಂದೋಳತ ಮೆರವಣಿಗೆಯಲ್ಲಿ ಆಕರ್ಷಣೀಯವಾಗಿತ್ತು. ಅಮ್ಮತ್ತಿಯ ಮುಖ್ಯ ವೃತ್ತದಲ್ಲಿ ಶಾಸಕರು ಸೇರಿದಂತೆ ಹಲವರು ಕೊಡವ ನೃತ್ಯ ಪ್ರದರ್ಶಿಸಿ ಗಮನ ಸೆಳೆದರು.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಅಮ್ಮಾಟಂಡ ಪಾರ್ವತಿ ಅಪ್ಪಯ್ಯ, ಬಿದ್ದಾಟಂಡ ಎಸ್.ತಮ್ಮಯ್ಯ, ಐಮುಡಿಯಂಡ ರಾಣಿಮಾಚಯ್ಯ, ಬಾಚರಣಿಯಂಡ ಪಿ.ಅಪ್ಪಣ್ಣ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಪುತ್ತರಿರ ಪಪ್ಪು ತಿಮ್ಮಯ್ಯ, ಕಂಬೆಯಂಡ ಡೀನ ಬೋಜಣ್ಣ, ಮೊಳ್ಳೆಕುಟ್ಟಂಡ ದಿನು ಬೋಜಪ್ಪ, ಕೊಂಡಿಜಮ್ಮನ ಎಂ.ಬಾಲಕೃಷ್ಣ, ಪಾನಿಕುಟ್ಟಿರ ಕೆ.ಕುಟ್ಟಪ್ಪ, ಪೊನ್ನಿರ ಯು.ಗಗನ್, ಕುಡಿಯರ ಎಂ.ಕಾವೇರಪ್ಪ, ನಾಯಂದಿರ ಆರ್.ಶಿವಾಜಿ, ಚೆಪ್ಪುಡಿರ ಎಸ್.ಉತ್ತಪ್ಪ, ನಾಯಕಂಡ ಬೇಬಿ ಚಿಣ್ಣಪ್ಪ, ಚೊಟ್ಟೆಯಂಡ ಎ.ಸಂಜು ಕಾವೇರಪ್ಪ, ನಾಪಂಡ ಸಿ.ಗಣೇಶ್, ರಿಜಿಸ್ಟ್ರಾರ್ ಚಿನ್ನಸ್ವಾಮಿ, ಅಮ್ಮತ್ತಿ ಕೊಡವ ಸಮಾಜದ ಆಡಳಿತ ಮಂಡಳಿ ಹಾಗೂ ಕೊಡವ ಬಲ್ಯ ನಮ್ಮೆ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು ಇದ್ದರು.ಜಮುನ ಪ್ರಾರ್ಥಿಸಿದರು. ಅಶ್ವಿನಿ ಮತ್ತು ತಂಡದವರು ಕೊಡವ ನೃತ್ಯ ಪ್ರದರ್ಶಿಸಿದರು. ಅಜ್ಜಿಕುಟ್ಟೀರ ಗಿರೀಶ್ ಮತ್ತು ಅನಿತಾ ನಿರೂಪಿಸಿದರು.