ಕುಷ್ಟಗಿ: ದಿನ ಆಧುನಿಕ ದಿನಗಳಲ್ಲಿ ಜಾನಪದ ಕಲಾವಿದರ ಬದುಕು ಕಷ್ಟದಾಯಕವಾಗಿದೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಕಲಾವಿದ ಶರಣಪ್ಪ ವಡಗೇರಿ ಹೇಳಿದರು.
ಕನ್ನಡ ಮತ್ತು ಸಾಂಸ್ಕೃತಿ ಇಲಾಖೆ ಕಲಾವಿದರಿಗೆ ಕಾರ್ಯಕ್ರಮ ನೀಡುವ ಮೂಲಕ ಪ್ರೋತ್ಸಾಹ ನೀಡುತ್ತಿದೆ.ಕಲೆ ನಂಬಿ ಜೀವನ ಮಾಡುವವರಿಗೆ ಆರ್ಥಿಕ ಸಹಕಾರ ಅತ್ಯಗತ್ಯವಾಗಿದೆ ಎಂದರು.
ಪುರಸಭೆ ಸದಸ್ಯ ವಸಂತ ಮೇಲಿನಮನಿ, ಬಸವರಾಜ ಬುಡಕುಂಟಿ, ಪತ್ರಕರ್ತ ರವೀಂದ್ರ ಬಾಕಳೆ ಮಾತನಾಡಿದರು. ಕಲಾವಿದ ಚೆನ್ನಪ್ಪ ಬಾವಿಮನಿ ಅವರಿಂದ ಸುಗಮ ಸಂಗೀತ ಜರುಗಿತು. ಹಾರ್ಮೊನಿಯಂ ಸಾಥ್ ಮಲ್ಲನಗೌಡ ಅಗಸಿಮುಂದಿನ, ತಬಲಾ ಶರಣಗೌಡ ಪಾಟೀಲ್ ನೀಡಿದರು.ಈ ವೇಳೆ ಸಂಘದ ಅಧ್ಯಕ್ಷ ಮೌನೇಶ ಬಡಿಗೇರ, ಕಲಾವಿದ ಶರಣಪ್ಪ ಬನ್ನಿಗೋಳ, ದೊಡ್ಡಪ್ಪ ಕೈಲವಾಡಗಿ, ಅನಿಲ್ ಕಮ್ಮಾರ, ಶರಣಪ್ಪ ಲೈನದ ಸೇರಿದಂತೆ ಅನೇಕರು ಇದ್ದರು.