ಬೀಜ, ಗೊಬ್ಬರ, ಯಂತ್ರೋಪಕರಣ ಸಬ್ಸಿಡಿಗೆ ₹111 ಕೋಟಿ: ಸಚಿವ ತಿಮ್ಮಾಪೂರ

KannadaprabhaNewsNetwork |  
Published : Jun 06, 2025, 12:12 AM ISTUpdated : Jun 06, 2025, 12:13 AM IST
ಮುಧೋಳದಲ್ಲಿ ಆತ್ಮಾ ಶ್ರೇಷ್ಟ ಕೃಷಿಕ ಪ್ರಶಸ್ತಿಯನ್ನು ಜಾಲಿಕಟ್ಟಿಯ ಗೋವಿಂದಪ್ಪ ನಾಯಕ ಅವರಿಗೆ ಸಚಿವ ತಿಮ್ಮಾಪೂರ ವಿತರಿಸಿದರು. | Kannada Prabha

ಸಾರಾಂಶ

ಮುಂಗಾರು ಹಂಗಾಮುಗೆ ರೈತರಿಗೆ ಕೃಷಿ ಚಟುವಟಿಕೆ ಮುನ್ನಡೆಸಲು ಸರ್ಕಾರ ₹ 111 ಕೋಟಿ ವೆಚ್ಚದಲ್ಲಿ ಸಬ್ಸಿಡಿ ಒದಗಿಸಲಾಗಿದೆ ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು.

ಕನ್ನಡಪ್ರಭ ವಾರ್ತೆ ಮುಧೋಳ

ಮುಂಗಾರು ಹಂಗಾಮುಗೆ ರೈತರಿಗೆ ಕೃಷಿ ಚಟುವಟಿಕೆ ಮುನ್ನಡೆಸಲು ಸರ್ಕಾರ ₹ 111 ಕೋಟಿ ವೆಚ್ಚದಲ್ಲಿ ಸಬ್ಸಿಡಿ ಒದಗಿಸಲಾಗಿದೆ ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು.

ನಗರದ ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಇಲಾಖೆ ಆಯೋಜಿಸಿದ್ದ ಮುಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಿಸಿ ಮಾತನಾಡಿ, ಎಲ್ಲೆಡೆ ಉತ್ತಮ ಮಳೆಯಾಗಿದೆ. ರೈತರಿಗೆ ಬೀಜ, ಗೊಬ್ಬರ, ಕೃಷಿ ಯಂತ್ರೋಪಕರಣ, ಕೃಷಿಭಾಗ್ಯ ಯೋಜನೆ, ಕಬ್ಬು ಕಟಾವು ಯಂತ್ರಕ್ಕೆ ಇತ್ಯಾದಿ ಕೃಷಿ ಪರಿಕರಗಳ ಖರೀದಿ ಮಾಡಿ ಸಬ್ಸಿಡಿ ಒದಗಿಲಾಗಿದೆ. ಮುಧೋಳ ತಾಲೂಕಿಗೆ ₹11.50 ಲಕ್ಷ ವೆಚ್ಚದಲ್ಲಿ ಸಬ್ಸಿಡಿ ಪೂರೈಕೆ ಮಾಡಲಾಗುತ್ತಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರ ವಿರುದ್ಧ ರೈತರು ಹಾಗೂ ಕಾಂಗ್ರೆಸ್ ಪಕ್ಷ ಸತತ ಹೋರಾಟದ ಫಲದಿಂದ ರೈತ ಬೆಳೆದ ಬೆಳೆಗೆ ಮಾರುಕಟ್ಟೆ ಕಲ್ಪಿಸಲು ಎಪಿಎಂಸಿ ಯಾರ್ಡ್ ಚಾಲು ಆಗಿವೆ. ಫಲವತ್ತಾದ ಭೂಮಿಗೆ ಅತಿಯಾದ ರಸಗೊಬ್ಬರ ಹಾಕಿ ಭವಿಷ್ಯದಲ್ಲಿ ಭಂಜರು ಮಾಡಬೇಡಿ ಎಂದರು.

ಜಿಲ್ಲಾ ಕೃಷಿ ಜಂಟಿ ನಿರ್ದೇಶಕ ಲಕ್ಷ್ಮಣ ಕಳ್ಳೆನ್ನವರ ಮಾತನಾಡಿ, ಎಲ್ಲೆಡೆ ರೈತ ಸಂಪರ್ಕ ಕೇಂದ್ರದಲ್ಲಿ ಮುಂಗಾರು ಬಿತ್ತನೆ ಬೀಜ ಕೊಡಲಾಗುತ್ತಿದೆ. ಅಲ್ಲದೆ, ರೈತರು ಸಂಗ್ರಹಿಸಿಟ್ಟುಕೊಂಡಿರುವ ಬಿತ್ತನೆ ಬೀಜ ಬಿಜೋಪಚಾರ ಮಾಡಿ ಇಳಿಜಾರಿಗೆ ಅಡ್ಡಲಾಗಿ ಬಿತ್ತನೆ ಮಾಡಿ ನಾಟಿ ಮಾಡ ಬೇಕೆಂದರು.

ಸಾಧಕರಿಗೆ ಸನ್ಮಾನ: 2023-24ನೇ ಸಾಲಿನಲ್ಲಿ ಆತ್ಮಾ ಶ್ರೇಷ್ಠ ಕೃಷಿಕ ಪುರಸ್ಕಾರಕ್ಕೆ ಆಯ್ಕೆಯಾದ ಕಾವೇರಿ ಗಣಿ, ಶಿವಪ್ಪ ಮುಚ್ಚಂಡಿ, ಶಂಕರ ಈರಪ್ಪನ್ನವರ, ಗೋವಿಂದಪ್ಪ ನಾಯಿಕ, ನಿಂಗಪ್ಪ ಪರಡ್ಡಿ ಅವರನ್ನು ಸಚಿವರು ಸನ್ಮಾನಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕಿವಡಿ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಮಹಾಂತೇಶ ಹಟ್ಟಿ, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ದುಂಡಪ್ಪ ಭರಮನಿ, ಎಪಿಎಂಸಿ ಅಧ್ಯಕ್ಷ ಸಂಗಪ್ಪ ಇಮ್ಮನ್ನವರ, ನಗರಸಭೆ ಅಧ್ಯಕ್ಷೆ ಸುನಂದಾ ತೇಲಿ, ಎಸ್.ಪಿ. ದಾನಪ್ಪಗೋಳ, ಸಂತೋಷ ಪಾಲೋಜಿ, ರಾಜು ಬಾಗವಾನ, ಜಿಲ್ಲಾ ಕೃಷಿ ಜಂಟಿ ನಿರ್ದೇಶಕ ಲಕ್ಷ್ಮಣ ಕಳ್ಳೆನ್ನವರ, ಸಹಾಯಕ ಕೃಷಿ ನಿರ್ದೇಶಕ ಎಸ್.ಬಿ. ದೊಡಮನಿ, ಅಧಿಕಾರಿಗಳಾದ ಎ.ಎಸ್. ಅಗಸನಾಳ, ಎಸ್.ಎಸ್. ಕಟ್ಟಿಮನಿ, ರೇಣುಕಾ ಗೌಡಪ್ಪನ್ನವರ, ಎಂ.ಎಸ್. ಬಿರಾದಾರ, ಐ.ಎಂ. ಧಾರವಾಡಮಠ ಇತರರು ಇದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ