ಕನ್ನಡಪ್ರಭ ವಾರ್ತೆ ಅಥಣಿ
ಪಟ್ಟಣದ ಮಹಾವೀರ ನಗರದಲ್ಲಿರುವ ಸರ್ಕಾರಿ ನೌಕರರ ಭವನದಲ್ಲಿ ನಡೆದ ಸಂಘದ 22ನೇ ಸರ್ವ ಸಾಧಾರಣ ಸಭೆ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಮ್ಮ ಸೊಸೈಟಿ ಮಾ.31ರವರೆಗೆ ₹42 ಕೋಟಿಗಿಂತಲೂ ಹೆಚ್ಚು ದುಡಿಯುವ ಬಂಡವಾಳ ಹೊಂದಿದೆ. ಸದಸ್ಯರಿಗೆ ವಿವಿಧ ಯೋಜನೆಯಡಿ ₹24,39,92,778 ಸಾಲ ನೀಡಿದೆ. ಸದಸ್ಯರಿಂದ ₹34,28,83,417 ಠೇವಣಿ ಹಣ ಸಂಗ್ರಹಿಸಲಾಗಿದೆ. ಪ್ರತಿ ವರ್ಷವೂ ಸರ್ಕಾರಿ ನೌಕರರ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕೊಡಲಾಗುತ್ತಿದೆ ಎಂದರು.ಸಂಘದ ಸಂಸ್ಥಾಪಕ ಸದಸ್ಯ ಮತ್ತು ಜಿಪಂ ಅಭಿಯಂತರ ವೀರಣ್ಣ ವಾಲಿ ಮಾತನಾಡಿ, ಸರ್ಕಾರಿ ನೌಕರರಿಗೆ ಶೇ.10 ಕ್ಕಿಂತ ಕಡಿಮೆ ಬಡ್ಡಿ ದರದಲ್ಲಿ ಸಂಘದ ಮೂಲಕ ಸಾಲ ಕೊಡುತ್ತಿರುವುದು ನಮ್ಮ ಸೊಸೈಟಿಯ ಹಿರಿಮೆಯಾಗಿದೆ. ಸಹಕಾರಿ ಸಂಘದ ಮೂಲಕ ಬಂಗಾರದ ಖರೀದಿಗೆ ಮತ್ತು ಬಂಗಾರ ಅಡುವು ಇಟ್ಟುಕೊಂಡು ಸಾಲ ಮತ್ತು ಗೃಹ ಸಾಲ ಕೊಡುವ ಹಾಗೂ ಇ-ಸ್ಟಾಂಪ್ ವ್ಯವಸ್ಥೆ ಮಾಡಿಕೊಳ್ಳಿ ಎಂದರು. ನೌಕರ ಸಂಘದ ರಾಜ್ಯ ಪರಿಷತ್ ಮಾಜಿ ಸದಸ್ಯ ಅರುಣ ಯಲಗುದ್ರಿ ಮಾತನಾಡಿ, ಚಿಕ್ಕೋಡಿ ಅಥವಾ ಕಾಗವಾಡದಲ್ಲಿ ಶಾಖೆ ಪ್ರಾರಂಭಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಾಗಿದೆ ಎಂದರು.
ಹಿರಿಯ ಸದಸ್ಯರಾದ ಶಿವಾನಂದ ದಿವಾನಮಳ, ಶ್ರೀಕಾಂತ ಮಾಕಾಣಿ ಮಾತನಾಡಿ, ಅನೇಕ ಹಿರಿಯ ಸರ್ಕಾರಿ ನೌಕರರು ಈ ಸಂಸ್ಥೆಯನ್ನು ಹುಟ್ಟು ಹಾಕಿದ್ದಾರೆ. ಪ್ರಾರಂಭದಲ್ಲಿ ಈ ಸೊಸೈಟಿಯನ್ನು ಒಂದು ಹಂತಕ್ಕೆ ತರಬೇಕಾದರೇ ಸಾಕಷ್ಟು ಕಷ್ಟ ಪಟ್ಟಿದ್ದಾರೆ. ಆ ಹಿರಿಯ ಸಂಸ್ಥಾಪಕರ ಸಲಹೆ ಸೂಚನೆಗಳನ್ನು ಅಳವಡಿಸಿಕೊಳ್ಳಿ. ಸದಸ್ಯರಿಗೆ ಅಂಚೆ ಕಚೇರಿ ಮೂಲಕ ಆರೋಗ್ಯ ವಿಮೆ ಮಾಡಿಸುವ ನಿಟ್ಟಿನಲ್ಲಿ ಯೋಚನೆ ಮಾಡಿ ಎಂದು ತಿಳಿಸಿದರು.ಸಹಕಾರಿ ಸಂಘದ ವ್ಯವಸ್ಥಾಪಕ ಅಧಿಕಾರಿ ಚಿದಾನಂದ ಬಡವಗೋಳ ಅಢಾವೆ ಪತ್ರಿಕೆ ಓದಿ ಸಹಕಾರ ಸಂಘದ ಎಲ್ಲ ಸದಸ್ಯರು ಒಪ್ಪಿಗೆ ಪಡೆದುಕೊಂಡರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಮಲ್ಟಿಪರಪಜ್ ಕೋ ಆಪ್ ಸೊಸೈಯಿಟಿಯಿಂದ ಸರ್ಕಾರಿ ನೌಕರರಿಗೆ ರಾಷ್ಟ್ರೀಕೃತ ಬ್ಯಾಂಕ್‌ಗಳಿಗಿಂತ ಸ್ಪರ್ಧಾತ್ಮಕ ಅಂದರೆ ಶೇ.10ಕ್ಕಿಂತ ಕಡಿಮೆ ಬಡ್ಡಿ ದರದಲ್ಲಿ ಸಾಲ ವಿತರಿಸುತ್ತಿದ್ದು, ಇದರ ಲಾಭ ಪಡೆದುಕೊಳ್ಳಬೇಕು. ಸರ್ಕಾರಿ ನೌಕರರಿಗೆ ಕಡಿಮೆ ಬಡ್ಡಿ ದರದಲ್ಲಿ ಕಳೆದ 22 ವರ್ಷಗಳಿಂದ ನಿರಂತರವಾಗಿ ಸಾಲದ ಮೂಲಕ ಆರ್ಥಿಕ ಭದ್ರತೆ ಒದಗಿಸುತ್ತಿದೆ ಎಂದು ಮಲ್ಲಿಕಾರ್ಜುನ ಮಗದುಮ್ಮ ತಿಳಿಸಿದರು.