ಯೂರಿಯಾ ನೀಡುವಲ್ಲಿ ಸರ್ಕಾರ ವಿಫಲ: ಡಾ.ನವೀನಕುಮಾರ್‌

KannadaprabhaNewsNetwork |  
Published : Jul 30, 2025, 12:45 AM IST
೨೯ ಜೆಜಿಎಲ್ ೦೧ : ಜಗಳೂರು : ಮಂಗಳವಾರ ಪಟ್ಟಣದ ಕೃಷಿ ಇಲಾಖೆ ಮುಂಭಾಗದಲ್ಲಿ ಬಿಜೆಪಿಯ ರೈತ ಮೊರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾತನಾಡಿದರು.೨೯ ಜೆಜಿಎಲ್ ೦2 : ಜಗಳೂರು : ಯೂರಿಯ ಗೊಬ್ಬರ ಬಾರದ ಹಿನ್ನಲೆಯಲ್ಲಿ ಅಂಬೇಡ್ಕರ್  ವೃತ್ತದಲ್ಲಿ ದಿಡೀರನೇ ರಸ್ತೆ ತಡೆ ಮಾಡಿದ ಕರ್ನಾಟಕ ರಾಜ್ಯ ರೈತ ಸಂಘಗಳ ನೇತೃತ್ವದಲ್ಲಿ ನಡೆಸುತ್ತಿರುವ ಪ್ರತಿಭಟನೆ ಸ್ಥಳಕ್ಕೆ ದಾವಣಗೆರೆ ಕೃಷಿ ಇಲಾಖೆಯ ಜಂಟಿನಿರ್ಧೇಶಕ ಜಯಾವುಲ್ಲಾ ಇತರರು ಆಗಮಿಸಿ ಮನವೊಲಿಸುತ್ತಿರುವುದು. | Kannada Prabha

ಸಾರಾಂಶ

ರೈತರಿಗೆ ಯೂರಿಯಾ ನೀಡಲು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ವಿಫಲವಾಗಿದೆ. ಇತ್ತ ರೈತರ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲದ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ನಿದ್ದೆಯಲ್ಲಿದ್ದಾರೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ನವೀನ್ ಕುಮಾರ್ ಕಿಡಿಕಾರಿದ್ದಾರೆ.

ಕನ್ನಡಪ್ರಭ ವಾರ್ತೆ ಜಗಳೂರು

ರೈತರಿಗೆ ಯೂರಿಯಾ ನೀಡಲು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ವಿಫಲವಾಗಿದೆ. ಇತ್ತ ರೈತರ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲದ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ನಿದ್ದೆಯಲ್ಲಿದ್ದಾರೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ನವೀನ್ ಕುಮಾರ್ ಕಿಡಿಕಾರಿದರು.

ಮಂಗಳವಾರ ಸಂಜೆ ಪಟ್ಟಣದ ಕೃಷಿ ಇಲಾಖೆಗೆ ಆಗಮಿಸಿ ಅಧಿಕಾರಿಗಳಿಂದ ಗೊಬ್ಬರ ಅಭಾವ ಬಗ್ಗೆ ಮಾಹಿತಿ ಪಡೆದು, ರೈತರನ್ನು ಉದ್ದೇಶಿಸಿ ಅವರು ಮಾತನಾಡಿದರು. ಯೂರಿಯಾ ಗೊಬ್ಬರದ ಸಮಸ್ಯೆ ತಾರಕಕ್ಕೇರಿದೆ. ರೈತರು ಊಟ, ನೀರು ಇಲ್ಲದೇ ಯೂರಿಯಾಕ್ಕಾಗಿ ಕಾಯುವಂಥ ದುಸ್ಥಿತಿ ಕಾಂಗ್ರೆಸ್ ಸರ್ಕಾರ ಮಾಡಿದೆ. ಪ್ರತಿನಿತ್ಯ ಟಿ.ವಿ.ಗಳಲ್ಲಿ ಜಗಳೂರು ರೈತರ ಸಮಸ್ಯೆ ವರದಿಯಾಗುತ್ತಿದೆ. ಉಸ್ತುವಾರಿ ಸಚಿವರು, ಶಾಸಕರು ರೈತರ ಸಮಸ್ಯೆಗಳ ಆಲಿಸುತ್ತಿಲ್ಲ. ಇನ್ನೆರಡು ದಿನಗಳಲ್ಲಿ ಸಮಸ್ಸೆಗಳನ್ನು ಬಗೆಹರಿಸದಿದ್ದರೆ ಜಿಲ್ಲಾ ಉಸ್ತುವಾರಿ ಸಚಿವರ ಮನೆ ಎದುರು ಪ್ರತಿಭಟನೆ, ಕೃಷಿ ಇಲಾಖೆ ಮುಂಭಾಗದಲ್ಲಿ ಮಾಜಿ ಶಾಸಕ ರಾಜೇಶ್ ನೇತೃತ್ವದಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುವ ಎಚ್ಚರಿಕೆ ನೀಡಿದರು.

ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ್ ಮಾತನಾಡಿ, ಕೇಂದ್ರ ಸರ್ಕಾರ ಜಿಲ್ಲೆಗೆ ನಿಗದಿಯಂತೆ ೩೪ ಸಾವಿರ ಮೆಟ್ರಿಕ್ ಟನ್ ಯೂರಿಯಾ ಪೂರೈಸಬೇಕಾಗಿತ್ತು. ಆದರೆ ೩೮ ಸಾವಿರ ಮೆಟ್ರಿಕ್ ಟನ್‌ ಯೂರಿಯಾ ಸರಬರಾಜಗಿದೆ. ಇದನ್ನು ನೋಡಿದರೆ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ ಎಂಬ ಅನುಮಾನ ಕಾಡುತ್ತಿದೆ ಎಂದು ದೂರಿದರು.

ರೈತರ ಸಮಸ್ಯೆ ಬಗೆಹರಿಸಿ:

ಮಾಜಿ ಶಾಸಕ ಎಚ್.ಪಿ.ರಾಜೇಶ್ ಮಾತನಾಡಿ, ನಾನು ಸಚಿವ ಸ್ಥಾನದ ಆಕಾಂಕ್ಷಿ ಎಂದು ಹೇಳುವ ಶಾಸಕ ಬಿ.ದೇವೇಂದ್ರಪ್ಪ ಅವರು ರೈತರ ಸಮಸ್ಯೆ ಮೊದಲು ಬಗೆಹರಿಸಲಿ. ಅವರಿಗೆ ರೈತ ಎಂದರೆ ಗೊತ್ತಿಲ್ಲ. ಯೂರಿಯಾ ಗೊಬ್ಬರದ ಸಮಸ್ಯೆ ಇದ್ದರೂ ಅಧಿಕಾರಿಗಳ ಸಭೆ ಮಾಡದೇ ನಿರ್ಲಕ್ಷೆ ಮಾಡುವ ಶಾಸಕರಿಗೆ ಈ ಸಮಸ್ಯೆ ಎಲ್ಲಿ ಬಗೆಹರಿಸುತ್ತಾರೆ ಎಂದು ವಾಗ್ದಾಳಿ ಮಾಡಿದರು.

ಸ್ಥಳಕ್ಕೆ ಕೃಷಿ ಅಧಿಕಾರಿ:

ದಾವಣಗೆರೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಜಿಯಾವುಲ್ಲಾ ಅವರು ಅಂಬೇಡ್ಕರ್ ವೃತ್ತದಲ್ಲಿ ರೈತ ಸಂಘಟನೆಗಳು ನಡೆಸುತ್ತಿದ್ದ ರಸ್ತೆ ತಡೆ ಸ್ಥಳಕ್ಕೆ ಆಗಮಿಸಿದರು. ಬುಧವಾರ ಜಗಳೂರು ಪಟ್ಟಣಕ್ಕೆ 16 ಟನ್ ಯೂರಿಯಾ ದಾಸ್ತಾನು ಎಪಿಎಂಸಿ ಆವರಣಕ್ಕೆ ಬರಲಿದೆ. ಗುರುವಾರ ರೈತರಿಗೆ ವಿತರಣೆ ಮಾಡಲಾಗುವುದು ಎಂದು ಭರವಸೆ ನೀಡಿದರು. ಬಳಿಕ ರಸ್ತೆ ತಡೆ ಕೊನೆಗೊಂಡಿತು.

ಈ ವೇಳೆ ದಾವಣಗೆರೆ ಕೃಷಿ ಇಲಾಖೆ ಉಪ ಕೃಷಿ ನಿರ್ದೇಶಕ ಅಶೋಕ ಎಸ್., ಡಿವೈಎಸ್ಪಿ ಬಸವರಾಜಪ್ಪ, ತಹಸೀಲ್ದಾರ್ ಸೈಯದ್ ಕಲೀಂ ಉಲ್ಲಾ, ಪಿಐ ಸಿದ್ದರಾಮಯ್ಯ, ಜಗಳೂರು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ವೇತಾ, ಉಭಯ ಬಣದ ರೈತ ಸಂಘಟನೆಗಳ ಅಧ್ಯಕ್ಷರು, ರೈತರು, ಪಟ್ಟಣ ಪಂಚಾಯಿತಿ ಅಧ್ಯಕ್ಷ ನವೀನ್‌ಕುಮಾರ್, ಪಪಂ ಸದಸ್ಯ ಸಿದ್ದಪ್ಪ, ಮುಖಂಡರಾದ ಜೆ.ವಿ. ನಾಗರಾಜ್, ಬಿಸ್ತುವಳ್ಳಿ ಬಾಬು, ಬಿದರಕೆರೆ ರವಿ, ಕ್ಯಾಂಪ್ ಓಬಳೇಶ್ ಮತ್ತಿತರರು ಹಾಜರಿದ್ದರು.

- - -

-೨೯ಜೆಜಿಎಲ್೦೧: ಜಗಳೂರಲ್ಲಿ ಮಂಗಳವಾರ ಕೃಷಿ ಇಲಾಖೆ ಮುಂಭಾಗ ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ನವೀನ್ ಕುಮಾರ್ ಮಾತನಾಡಿದರು.

-೨೯ಜೆಜಿಎಲ್02: ಜಗಳೂರಿನಲ್ಲಿ ಯೂರಿಯಾ ಅಭಾವ ಖಂಡಿಸಿ ರೈತ ಸಂಘಟನೆಗಳು ನಡೆಸುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ದಾವಣಗೆರೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಿಯಾವುಲ್ಲಾ ಇತರರು ಆಗಮಿಸಿ ಅಹವಾಲು ಆಲಿಸಿದರು.

PREV

Recommended Stories

ಮಾಲೇಗಾಂವ ಸ್ಫೋಟ ತೀರ್ಪು; ಸಂಭ್ರಮಾಚರಣೆ
ಧರ್ಮಸ್ಥಳ ಕ್ಷೇತ್ರದ ಹೆಸರು ಕೆಡಿಸಲು ಷಡ್ಯಂತ್ರ: ಪ್ರಮೋದ ಮುತಾಲಿಕ