ಗಂಗಾವತಿ:
ಈ ವೇಳೆ ಶಾಸಕ ಗಾಲಿ ಜನಾರ್ದನ ರೆಡ್ಡಿ ಮಾತನಾಡಿ, ರಾಜ್ಯ ಸರ್ಕಾರ ಬೇಡಿಕೆಗಿಂತ ಕೇಂದ್ರ ಸರ್ಕಾರ ಹೆಚ್ಚು ರಸಗೊಬ್ಬರ ಪೂರೈಕೆ ಮಾಡಿದ್ದರೂ ಆಡಳಿತ ಪಕ್ಷದ ಜನಪ್ರತಿನಿಧಿಗಳು, ಅಧಿಕಾರಿಗಳು ಒಳಒಪ್ಪಂದ ಮಾಡಿಕೊಂಡು ಕಾಳಸಂತೆಯಲ್ಲಿ ಮಾರಾಟ ಮಾಡಿ ಹಣ ಮಾಡಿಕೊಳ್ಳುತ್ತಿದ್ದಾರೆ.
ರಾಜ್ಯ ಸರ್ಕಾರ 6.30 ಲಕ್ಷ ಮೆಟ್ರಿಕ್ ಟನ್ ಬೇಡಿಕೆ ಇಟ್ಟರ ಕೇಂದ್ರ ಸರ್ಕಾರ 8.73 ಲಕ್ಷ ಟನ್ ಯೂರಿಯಾವನ್ನು ರಾಜ್ಯಕ್ಕೆ ನೀಡಿದೆ. ಆದರೂ ರಾಜ್ಯದಲ್ಲಿ ಯೂರಿಯಾ ಗೊಬ್ಬರ ಸಕಾಲಕ್ಕೆ ಸಿಗದೆ ರೈತರು ಹಗಳು-ರಾತ್ರಿಯನ್ನದೆ ಅಂಗಡಿ ಹಾಗೂ ಸಹಕಾರಿ ಸಂಘಗಳ ಎದುರು ಸರತಿಯಲ್ಲಿ ನಿಲ್ಲುತ್ತಿದ್ದಾರೆ. ಇದಕ್ಕೆಲ್ಲ ರಾಜ್ಯ ಸರ್ಕಾರವೇ ಕಾರಣವೆಂದು ದೂರಿದರು.ನವಲಿ ಸಮಾನಂತರ ಜಲಾಶಯ ನಿರ್ಮಾಣದ ಕುರಿತು ನಿರ್ಲಕ್ಷ್ಯ ತೋರಿರುವ ರಾಜ್ಯ ಸರ್ಕಾರ, ತೆಲಂಗಾಣ ಮತ್ತು ಆಂಧ್ರಪ್ರದೇಶ ಸರ್ಕಾರದ ಜತೆಗೆ ಮಾತನಾಡಿದೆ ಕಾಲಹರಣ ಮಾಡುತ್ತಿದೆ ಎಂದು ಕಿಡಿಕಾರಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೇಸೂಗುರು ಮಾತನಾಡಿ, ಈ ಸರ್ಕಾರಕ್ಕೆ ರೈತರ ಕಾಳಜಿ ಬೇಕಾಗಿಲ್ಲ. ಹಲವು ದಿನಗಳಿಂದ ರೈತರು ಯೂರಿಯಾ ಗೊಬ್ಬರಕ್ಕಾಗಿ ಅಂಗಡಿಯಿಂದ ಅಂಗಡಿಗೆ, ಊರೂರು ಸುತ್ತಿದರೂ ಸಿಗುತ್ತಿಲ್ಲ. ಇತ್ತ ಜಿಲ್ಲಾ ಉಸ್ತುವಾರಿ ಸಚಿವರಿಗೂ ಕೃಷಿಯ ಬಗ್ಗೆ ಜ್ಞಾನವಿಲ್ಲವೆಂದು ದೂರಿದರು.ಈ ವೇಳೆ ಮಾಜಿ ಶಾಸಕ ಪರಣ್ಣ ಮುನವಳ್ಳಿ, ಮಾಜಿ ಸಂಸದ ಶಿವರಾಮಗೌಡ, ಬಸವರಾಜ ಕ್ಯಾಟವರ್, ಶರಣು ತಳ್ಳಿಕೇರಿ, ಹೊಸಕೇರಿ ಗಿರೇಗೌಡ, ಜಿ. ಶ್ರೀಧರ, ಜೋಗದ ಹನುಮಂತಪ್ಪ ನಾಯಕ, ನಗರಸಭೆ ಸದಸ್ಯ ವೀರಭದ್ರಪ್ಪ ನಾಯಕ, ಶಂಭುನಾಥ ದೊಡ್ಮನಿ, ಅರ್ಜುನ ನಾಯಕ ಸೇರಿದಂತೆ ಕಾರ್ಯಕರ್ತರು ಭಾಗವಹಿಸಿದ್ದರು.