ನೀನು ಬದುಕು, ಇತರರನ್ನು ಬದುಕಲು ಬಿಡು

KannadaprabhaNewsNetwork |  
Published : Sep 13, 2025, 02:04 AM IST
58 | Kannada Prabha

ಸಾರಾಂಶ

ನಾವು ಸಂತೋಷವಾಗಿ ಬದುಕಿದರೆ ಇತರರು ಸಂತೋಷವಾಗಿ ಬದುಕುತ್ತಾರೆ

ಕನ್ನಡಪ್ರಭ ವಾರ್ತೆ ಪಿರಿಯಾಪಟ್ಟಣನೀನು ಬದುಕು ಇತರರನ್ನು ಬದುಕಲು ಬಿಡು ಎಂದು ನಿವೃತ್ತ ಪ್ರಾಂಶುಪಾಲ ಪುಟ್ಟಶಟ್ಟಿ ಹೇಳಿದರು.ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ನಾವು ಸಂತೋಷವಾಗಿ ಬದುಕಿದರೆ ಇತರರು ಸಂತೋಷವಾಗಿ ಬದುಕುತ್ತಾರೆ. ಮಹಾವೀರ ಗೌತಮ ಬುದ್ಧರಂಥ ಮಹಾತ್ಮರು ಮನುಷ್ಯ ಹೇಗೆ ಬದುಕಬೇಕೆಂದು ಹೇಳಿದ್ದಾರೆ ಬೋಧನೆ ಮತ್ತು ಮೌನ ತುಂಬಾ ಮಹತ್ವವಾದದ್ದು. ಮನುಷ್ಯ ಸಾಮಾನ್ಯನಲ್ಲ ಮನಸ್ಸು ಮಾಡಿದರೆ ಆತ ದೇವರಾಗಬಹುದು ಎಂದರು.ಸೋಲು- ಗೆಲುವು ಇರುತ್ತದೆ. ಆದರೆ ನಮ್ಮ ಗೆಲುವು ನಮ್ಮ ಸಂಭ್ರಮಕ್ಕಿಂತ ಇತರರ ಸಂಭ್ರಮಕ್ಕೆ ಕಾರಣವಾಗುವ ಗೆಲುವು ನಿಜವಾದ ಗೆಲವು, ಸಾಧನೆ ಅದೃಷ್ಟದ ಮೇಲೆ ನಿಂತಿರುವುದಿಲ್ಲ. ಅದು ಸಾಧಕನ ಶ್ರಮದ ಮೇಲೆ ನಿಂತಿರುತ್ತದೆ. ಮನಸ್ಸಿಗೆ ಕಸ ತುಂಬಬೇಡಿ ಜ್ಞಾನ ತುಂಬಿದರೆ ಅದು ನಿಮ್ಮನ್ನ ತಲೆಯೆತ್ತಿ ನಡೆಯುವಂತೆ ಮಾಡುತ್ತದೆ ಎಂದು ಅವರು ಹೇಳಿದರು.ಮುಖ್ಯ ಭಾಷಣಕಾರಾಗಿದ್ದ ಎಸ್. ನಾಗಣ್ಣ ಮಾತನಾಡಿ, ಶಿಕ್ಷಣ ಅತ್ಯಂತ ಸುಲಭವಾಗಿ ಗಳಿಸುವ ಸಂಪತ್ತು. ತಂತ್ರಜ್ಞಾನದ ಯುಗದಲ್ಲಿ ಜ್ಞಾನ ಭಿನ್ನ ನೆಲೆಗಳಲ್ಲಿ ದೊರೆಯುತ್ತದೆ. ನಮಗೆ ಬಳಸಿಕೊಳ್ಳುವ ಶಕ್ತಿಬೇಕು. ಹಣದ ಸಂಸ್ಕೃತಿಗೆ ಒಳಗಾಗಬೇಡಿ ಓದುವ ಸಂಸ್ಕೃತಿಗೆ ನಿಮ್ಮನ್ನು ತೊಡಗಿಸಿಕೊಳ್ಳಿ. ಬದುಕಿನ ಒಳನೋಟಗಳನ್ನು ಅರ್ಥ ಮಾಡಿಕೊಂಡು ಬದುಕಬೇಕು. ಬಸವಣ್ಣನವರ ವಚನಗಳು ಸಪ್ತ ಸೂತ್ರದಂತೆ ನಮ್ಮ ಬದುಕಿಗೆ ದಾರಿ ದೀಪ. ಬಸವಾದಿ ಶರಣರ ವಚನಗಳು ಎಂದರು.ಪ್ರಾಂಶುಪಾಲ ಡಾ. ನಂಜುಂಡಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಪ್ರತಿಭಾವಂತ ವಿದ್ಯಾಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವೇದಿಕೆಯಲ್ಲಿ ಸಹಾಯಕ ಪ್ರಾಧ್ಯಾಪಕ ಮಂಜುನಾಥ್, ಡಾ. ಗುರು ಬಸವರಾಜಸ್ವಾಮಿ, ಪಂಡಿತ ರಾಜಗೋಪಾಲ, ವಿಶ್ವನಾಥ್, ಸಿ.ಆರ್‌. ಸಾಗರ್‌, ಎಸ್‌. ರೂಪಾ, ಡಾ. ಶೈಲಾಶ್ರೀ, ಎಂ.ಪಿ. ಸ್ವಾತಿ, ಗ್ರಂಥಪಾಲಕ ರಮೇಶ್, ಅಧೀಕ್ಷಕಿ ಬಿ.ಜಿ. ಕವಿತಾ, ಕಾಲೇಜಿನ ಬೋಧಕೇತರ ಸಿಬ್ಬಂದಿ ಕೆ.ಎಂ. ರವಿ, ಸಚಿನ್, ಅನಿತಾ ಮೊದಲಾದವರು ಇದ್ದರು.

PREV

Recommended Stories

ಬಿಪಿಎಲ್‌ ಕಾರ್ಡ್‌ಗೆ 1.20 ಲಕ್ಷ ಆದಾಯ ಮಿತಿ ಕೇಂದ್ರದ್ದು: ಸಿಎಂ
ಪೇದೆ ನೇಮಕಕ್ಕೆ ವಯೋಮಿತಿ ಸಡಿಲಕ್ಕೆ ಶೀಘ್ರ ಪ್ರಸ್ತಾವ : ಪರಂ