ಏತ ನೀರಾವರಿ ವಿದ್ಯುತ್‌ ಬಿಲ್‌ ಕಟ್ಟಲು ಸರ್ಕಾರದಲ್ಲಿ ಹಣ ಇಲ್ಲ

KannadaprabhaNewsNetwork |  
Published : Nov 05, 2025, 12:15 AM IST
ಜಜಜಜ | Kannada Prabha

ಸಾರಾಂಶ

ತುಮಕೂರು ಗ್ರಾಮಾಂತರ ಕ್ಷೇತ್ರದ ಹೊನ್ನುಡಿಕೆಯ ದೊಡ್ಡಕೆರೆ ತುಂಬಿದ ಸಂದರ್ಭದಲ್ಲಿ ಮಂಗಳವಾರ ಸಂಜೆ ಶಾಸಕ ಬಿ.ಸುರೇಶ್‌ಗೌಡರು ಗಂಗಾಪೂಜೆ ನೆರವೇರಿಸಿ ಬಾಗಿನ ಅರ್ಪಿಸಿದರು. ಇದರ ಅಂಗವಾಗಿ ಗ್ರಾಮದ ಹೊನ್ನಾದೇವಿ, ಲಕ್ಷ್ಮೀದೇವರ ವೈಭವದ ತೆಪ್ಪೋತ್ಸವ ನಡೆಯಿತು.

ಕನ್ನಡಪ್ರಭ ವಾರ್ತೆ, ತುಮಕೂರುತುಮಕೂರು ಗ್ರಾಮಾಂತರ ಕ್ಷೇತ್ರದ ಹೊನ್ನುಡಿಕೆಯ ದೊಡ್ಡಕೆರೆ ತುಂಬಿದ ಸಂದರ್ಭದಲ್ಲಿ ಮಂಗಳವಾರ ಸಂಜೆ ಶಾಸಕ ಬಿ.ಸುರೇಶ್‌ಗೌಡರು ಗಂಗಾಪೂಜೆ ನೆರವೇರಿಸಿ ಬಾಗಿನ ಅರ್ಪಿಸಿದರು. ಇದರ ಅಂಗವಾಗಿ ಗ್ರಾಮದ ಹೊನ್ನಾದೇವಿ, ಲಕ್ಷ್ಮೀದೇವರ ವೈಭವದ ತೆಪ್ಪೋತ್ಸವ ನಡೆಯಿತು.ಅಲಂಕೃತ ತೆಪ್ಪದಲ್ಲಿ ಪ್ರತಿಷ್ಠಾಪಿಸಿದ್ದ ದೇವರ ಮೂರ್ತಿಗಳಿಗೆ ಶಾಸಕರು ಪೂಜೆ ಸಲ್ಲಿಸಿ ತೆಪ್ಪೋತ್ಸವಕ್ಕೆ ಚಾಲನೆ ನೀಡಿದರು. ಮಾಗಡಿ ಜಡೆದೇವರ ಮಠ ಹಾಗೂ ಹೊನ್ನುಡಿಕೆ ಗೋಸಲ ಚನ್ನಬಸವೇಶ್ವರ ಗದ್ದಿಗೆ ಮಠದ ಇಮ್ಮಡಿ ಬಸವರಾಜ ಸ್ವಾಮೀಜಿ, ಶಿವಗಂಗೆಯ ಮಲಯಶಾಂತಮುನಿ ಸ್ವಾಮೀಜಿಗಳ ಸಮ್ಮುಖದಲ್ಲಿ ಪೂಜಾ ಕಾರ್ಯಕ್ರಮಗಳು ನೆರವೇರಿದವು. ಹೊನ್ನುಡಿಕೆ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನ ಆಗಮಿಸಿ ತೆಪ್ಪೋತ್ಸವವನ್ನು ಕಣ್ತುಂಬಿಕೊಂಡು ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಶಾಸಕರು ಹೆಣ್ಣುಮಕ್ಕಳಿಗೆ ಉಡುಗೊರೆಯಾಗಿ ಸೀರೆ ವಿತರಿಸಿದರು.ಈ ವೇಳೆ ಮಾತನಾಡಿದ ಶಾಸಕ ಸುರೇಶ್‌ಗೌಡರು, ವರುಣನ ಕೃಪೆಯಿಂದ ಹಾಗೂ ಹೇಮಾವತಿ ನೀರು ಹರಿಸಿದ್ದರಿಂದ ಗ್ರಾಮಾಂತರ ಕ್ಷೇತ್ರದ ಹಲವಾರು ಕೆರೆಗಳು ತುಂಬುತ್ತಿವೆ. ಪ್ರತಿ ವರ್ಷ ಹೀಗೇ ಕೆರೆಗಳು ತುಂಬಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ. ರೈತರಿಗೆ ಸಂತೃಷ್ಟ ನೀರು, ಸಮರ್ಪಕ ವಿದ್ಯುತ್ ಒದಗಿಸಿದರೆ ಅವರ ಬದುಕು ಹಸನಾಗುತ್ತದೆ. ಈ ಕಾರ್ಯಗಳಿಗೆ ತಾವು ಬದ್ಧರಾಗಿರುವುದಾಗಿ ಹೇಳಿದರು.ವೀರನಾಯಕನಹಳ್ಳಿ ರಸ್ತೆಯನ್ನುಒಂದು ಕೋಟಿ ರು..ವೆಚ್ಚದಲ್ಲಿ ಸಿಸಿ ರಸ್ತೆಯಾಗಿ ಅಭಿವೃದ್ಧಿ ಮಾಡಲಾಗುವುದು.50 ಲಕ್ಷ ರು. ಅಂದಾಜಿನಲ್ಲಿ ಈ ರಸ್ತೆಯಲ್ಲಿ ಸೇತುವೆ ನಿರ್ಮಾಣ ಮಾಡಲಾಗುವುದು. ಮತ್ತಷ್ಟು ಅಭಿವೃದ್ಧಿ ಕಾರ್ಯ ಮಾಡಲು ಸರ್ಕಾರ ಅನುದಾನ ಕೊಡುತ್ತಿಲ್ಲ. ಏತನೀರಾವರಿಯ ಕರೆಂಟ್ ಬಿಲ್ ಕಟ್ಟಲೂ ರಾಜ್ಯ ಸರ್ಕಾರದಲ್ಲಿ ಕಾಸಿಲ್ಲ, ಸರ್ಕಾರ ದಿವಾಳಿಯಾಗಿದೆ. ಆದರೂ ಕೇಂದ್ರ ಸರ್ಕಾರ ಅಥವಾ ಯಾವುದಾದರೂ ಯೋಜನೆಯಲ್ಲಿ ಅನುದಾನ ತಂದು ಅಭಿವೃದ್ಧಿ ಮಾಡುವುದಾಗಿ ಹೇಳಿದರು. ವೀರನಾಯಕನಹಳ್ಳಿ ಹಾಗೂ ಡಿ.ಜಿ. ಪಾಳ್ಯ ದೇವಸ್ಥಾನಗಳ ಅಭಿವೃದ್ಧಿಗೆ ನೆರವು ನೀಡುವುದಾಗಿ ತಿಳಿಸಿದರು.ಹೊನ್ನಡಿಕೆಯ ಶಾಲೆಯನ್ನು ಸುಸಜ್ಜಿತ ಶಾಲೆಯಾಗಿ ಮಾಡಲಾಗುತ್ತಿದೆ. 1 ರಿಂದ ಹತ್ತನೇ ತರಗತಿವರೆಗೆ ಕಲಿಯುವ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ತಮ್ಮಉದ್ದೇಶ. ಅದಕ್ಕಾಗಿ ಎಲ್ಲಾರೀತಿಯ ಸೌಕರ್ಯಗಳನ್ನು ಶಾಲೆಗೆ ಒದಗಿಸಲಾಗುವುದು ಎಂದರು. ಬಿಜೆಪಿ ಮುಖಂಡರಾದ ಸಿದ್ಧೇಗೌಡರು, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ರಾಮಚಂದ್ರಪ್ಪ, ಹೊಳಕಲ್ ಗ್ರಾಮ ಪಂಚಾಯ್ತಿ ಅಧ್ಯಕ್ಷ ಹಾಗೂ ಜಿಲ್ಲಾ ಬಿಜೆಪಿ ಎಸ್.ಸಿ. ಮೋರ್ಚಾ ಅಧ್ಯಕ್ಷ ಎ.ಹೆಚ್.ಆಂಜನಪ್ಪ, ಹೊನ್ನುಡಿಕೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆಗೀತಾರಾಜು, ಉಪಾಧ್ಯಕ್ಷ ಕೆಂಪರಾಜು, ಮಾಜಿ ಅಧ್ಯಕ್ಷರು, ಸದಸ್ಯರಾದ ವೆಂಕಟೇಶ್, ರಾಮಕೃಷ್ಣಪ್ಪ, ಸದಸ್ಯರಾದ ಉಮಾದೇವಿ ಶ್ರೀನಿವಾಸ್, ಸುಶೀಲಮ್ಮ, ರೂಪಾ, ತಾರಾದೇವಿ, ವಿಜಯಲಕ್ಷ್ಮಿ ಶ್ರೀನಿವಾಸ್, ಕಲಾವತಿ, ಮುಖಂಡರಾದಕಂಠಪ್ಪ, ನಾರಾಯಣಪ್ಪ, ಉಮೇಶ್‌ಸೇರಿದಂತೆ ವಿವಿಧಗ್ರಾಮ ಪಂಚಾಯ್ತಿಗಳ ಅಧ್ಯಕ್ಷರು, ಸದಸ್ಯರು, ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

''ದ್ವೇಷ ಮಸೂದೆಯಿಂದ ಭಿನ್ನ ದನಿ ದಮನ ಆಗಲ್ಲ ''
3 ವರ್ಷ ಮೊಮ್ಮಗನಿಗೆ ಬಾರಲ್ಲಿ ಹೆಂಡ ಕುಡಿಸಿದ ಅಜ್ಜ: ಆಕ್ರೋಶ