ಕನ್ನಡಪ್ರಭ ವಾರ್ತೆ ಮೇಲುಕೋಟೆ
150 ವರ್ಷಪೂರೈಸಿದ ಹಿರಿಯ ಪ್ರಾಥಮಿಕ ಶಾಲೆ ಮತ್ತು ನೂತನವಾಗಿ ಆರಂಭವಾಗಿರುವ ಪ್ರೌಢ ಶಾಲಾಭಿವೃದ್ಧಿಗೆ ಪೂರಕವಾದ ಎಲ್ಲಾ ಸೌಕರ್ಯ ಒದಗಿಸಿಕೊಡಲಾಗುತ್ತದೆ. ಶಾಲೆಯಲ್ಲಿ ಎಲ್.ಕೆ.ಜಿಯಿಂದ ಹತ್ತರವರೆಗೆ ತರಗತಿಗಳಿದ್ದು, ಪೋಷಕರು ನಿಮ್ಮ ಮಕ್ಕಳನ್ನು ಶಾಲೆಗೆ ಸೇರಿಸುವ ಮೂಲಕ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಪಾಂಡವಪುರ ಕ್ಷೇತ್ರಶಿಕ್ಷಣಾಧಿಕಾರಿ ಧರ್ಮಶೆಟ್ಟಿ ಮಾತನಾಡಿ, ಮೇಲುಕೋಟೆ ಐತಿಹಾಸಿಕವಾದ ಕ್ಷೇತ್ರವಾಗಿ ಶಾಲೆಯನ್ನು ಕರ್ನಾಟಕ ಪಬ್ಲಿಕ್ ಶಾಲೆಯನ್ನಾಗಿ ಪರಿವರ್ತಿಸಲು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮೇಲುಕೋಟೆ ಶಾಲೆಗೆ ಸಾಕಷ್ಟು ಜಾಗವಿದ್ದು ಸರ್ಕಾರದ ಆಶಯದಂತೆ ಕಟ್ಟಡಗಳನ್ನು ನಿರ್ಮಿಸಲು ಎಲ್ಲಾ ಸೌಕರ್ಯವಿದೆ. ಹೀಗಾಗಿ ಮೇಲುಕೋಟೆಯಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಗೆ ಆರಂಭಿಸಲು ಶೀಘ್ರ ಮಂಜೂರಾತಿಯೂ ದೊರೆಯಲಿದೆ. ಶೈಕ್ಷಣಿಕವಾಗಿ ಮೇಲುಕೋಟೆಯಲ್ಲಿ ಹೊಸ ಬದಲಾವಣೆಗೆ ಕ್ರಾಂತಿಯಾಗಲಿದೆ. ಇದು ಬಡ ಪೋಷಕರಿಗೆ ಮಕ್ಕಳು ಅತ್ಯಾಧುನಿಕವಾದ ಉಚಿತ ಶಿಕ್ಷಣ ಪಡೆಯಲು ಸಹಕಾರಿಯಾಗಲಿದೆ. ಶಾಸಕರ ಮಾರ್ಗದರ್ಶನದಲ್ಲಿ ನಾನು ಮುಖ್ಯಶಿಕ್ಷಕ ಸಂತಾನರಾಮನ್ ಪರಿಶ್ರಮಪಟ್ಟ ಕಾರಣ ಕೆ.ಆರ್.ಪೇಟೆಯಲ್ಲಿ ಶೂನ್ಯ ದಾಖಲಾತಿಯಿಂದ ಮುಚ್ಚಿಹೋಗಿದ್ದ ಸರ್ಕಾರಿ ಪ್ರೌಢಶಾಲೆ 11 ಹುದ್ದೆಯೊಂದಿಗೆ ಮೇಲುಕೋಟೆಗೆ ಸ್ಥಳಾಂತರವಾಗಿದ್ದು ಈ ವರ್ಷ 8ನೇತರಗತಿ ಆರಂಭವಾಗಿದೆ.ಮೇಲುಕೋಟೆ ಗ್ರಾಪಂ ಅಧ್ಯಕ್ಷೆ ಭವಾನಿ ಹರಿಧರ್ ಅಧ್ಯಕ್ಷತೆವಹಿಸಿದ್ದರು. ಚೆಲುವನಾರಾಯಣಸ್ವಾಮಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕನಗೋನಹಳ್ಳಿ ಪರಮೇಶಗೌಡ, ವ್ಯವಸ್ಥಾಪನಾಸಮಿತಿ ಸದಸ್ಯ ಕಾಡೇನಹಳ್ಳಿ ಸತೀಶ್, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಕಾಡೇನಹಳ್ಳಿ ರಾಮಚಂದ್ರು, ವಿ.ಎಸ್.ಎಸ್.ಎನ್ ಅಧ್ಯಕ್ಷ ಯೋಗನರಸಿಂಹೇಗೌಡ, ಗ್ರಾ.ಪಂ ಉಪಾಧ್ಯಕ್ಷ ಜಯರಾಮೇಗೌಡ, ಮುಖ್ಯಶಿಕ್ಷಕ ಸಂತಾನರಾಮನ್, ಸಿ.ಆರ್.ಪಿ ಬೆಟ್ಟಸ್ವಾಮಿಗೌಡ, ಶಿಕ್ಷಕರಾದ ಚೇತನ್, ಪೂರ್ಣಿಮಾ, ಬಿ.ಜಯಂತಿ, ಶಂಕರ, ಚಂದ್ರಿಕಾ, ಸ್ಮಿತಾ, ಕವಿತ ಇದ್ದರು. ಇದೇ ವೇಳೆ ಮಕ್ಕಳಮನೆಯನ್ನೂ ವೀಕ್ಷಿಸಿದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಸೆಲ್ಫಿಗೆ ಮುಗಿಬಿದ್ದ ಮಕ್ಕಳೊಂದಿಗೆ ಫೋಟೋ ತೆಗೆಸಿಕೊಂಡರು.
ಪದ್ಮಶ್ರೀಪುರಸ್ಕೃತ ಕವಿ ಪು.ತಿ.ನ ವ್ಯಾಸಂಗ ಮಾಡಿದ 150 ವಸಂತ ಪೂರೈಸಿರುವ ಶತಮಾನದ ಸರ್ಕಾರಿ ಶಾಲೆಯನ್ನು ತಕ್ಷಣ ಕರ್ನಾಟಕ ಪಬ್ಲಿಕ್ ಶಾಲೆಯನ್ನಾಗಿ ಪರಿವರ್ತಿಸಿ ಆದೇಶ ನೀಡಬೇಕು ಎಂದು ರಾಜ್ಯಪ್ರಶಶ್ತಿ ಪುರಸ್ಕೃತ ನಿ.ಮುಖ್ಯಶಿಕ್ಷಕ ಹಾಗೂ ಚೆಲುವನಾರಾಯಣಸ್ವಾಮಿ ದೇವಾಲಯದ ಆಡಳಿತ ಸಮಿತಿ ಸದಸ್ಯ ವಿ.ವೆಂಕಟರಾಮೇಗೌಡ ಮನವಿ ಮಾಡಿದರು.