
ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಮದ್ಯವರ್ಜನ ಶಿಬಿರಕ್ಕೆ ಚಾಲನೆ
ವೃತ್ತ ನಿರೀಕ್ಷಕ ಪಿಪಿ ಸೋಮೇಗೌಡ, ತಮ್ಮ ವೃತ್ತಿ ಅನುಭವದಲ್ಲಿ ಮಧ್ಯಪಾನದಿಂದ ಉಂಟಾದ ದುಷ್ಪರಿಣಾಮದ ನಿದರ್ಶನ ಗಳನ್ನು ಸಭೆಗೆ ತಿಳಿಸಿ ಪೊಲೀಸ್ ಇಲಾಖೆ ಬೆಂಬಲ ಪರಿಪೂರ್ಣವಾಗಿ ಒದಗಿಸಲಾಗುವುದು ಎಂದು ಭರವಸೆ ನೀಡಿದರು. ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೆ ಎಲ್ ಕುಮಾರ್ ಶಿಬಿರದ ಆಯೋಜನೆಗೆ ಜಾತಿ ಮತ ಧರ್ಮಗಳ ಭೇದವಿಲ್ಲದೆ ಸಹಕರಿಸಿದ ಮುಖಂಡರ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ವಲಯ ಒಕ್ಕಲಿಗ ಸಂಘದ ಅಧ್ಯಕ್ಷ ಅಶೋಕ್ ಡಿ.ಬಿ ಇದೊಂದು ಪುಣ್ಯದ ಕಾರ್ಯ. ಎಂಟು ದಿನಗಳ ಕಾಲ ಶಿಬಿರದ ಖರ್ಚಿಗೆ ₹4 ಲಕ್ಷ ಅಂದಾಜು ವೆಚ್ಚ ತೀರ್ಮಾನಿಸಲಾಗಿದೆ. 70ಕ್ಕೂ ಹೆಚ್ಚು ಶಿಬಿರಾರ್ಥಿಗಳು ಇದರ ಪ್ರಯೋಜನ ಪಡೆಯಲಿದ್ದಾರೆ ಎಲ್ಲಾ ಧರ್ಮಿಯರು ಉದಾರತೆಯಿಂದ ಕೊಡುಗೆ ನೀಡಿದ್ದಾರೆ ಎಂದು ಶ್ಲಾಘಿಸಿದರು.
ಅಧ್ಯಕ್ಷತೆ ವಹಿಸಿದ್ದ ನಾಡ ಪಟೇಲ್ ಎಎನ್ ವೀರೇಂದ್ರ ಭಾಸ್ಕರ್ ಗೌಡ ಶಿಬಿರವು ಅಚ್ಚುಕಟ್ಟಾಗಿ ನಡೆಯಲು ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು. ಮಹಾಗಣಪತಿ ಸೇವಾ ಸಮಿತಿ ಅಧ್ಯಕ್ಷ ಸಿ ಸುರೇಶ್ ಗೌಡ, ಬಿಲ್ಲವ ಸಂಘದ ಗೌರವಾಧ್ಯಕ್ಷ ಬೋಜ ಪೂಜಾರಿ ಬನ್ನೂರು, ಆಲ್ದೂರು ಕೃಷಿ ಪತ್ತಿನ ನಿರ್ದೇಶಕ ಕೌಶಿಕ್ ಹಳೆ ಆಲ್ದೂರು, ಬಿಜೆಪಿ ಹೋಬಳಿ ಘಟಕ ಅಧ್ಯಕ್ಷ ನಾಗೇಶ್ ಭೂತನ ಕಾಡು,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಮುದಾಬಿರ್, ಗೌರವಾಧ್ಯಕ್ಷ ಬಿ.ಬಿ. ರೇಣುಕಾರ್ಯ, ಅಂಬೇಡ್ಕರ್ ಹೋರಾಟ ವೇದಿಕೆ ಅಧ್ಯಕ್ಷ ನವರಾಜು ಎಚ್, ಬ್ಯಾರಿ ಒಕ್ಕೂಟದ ತಾಲೂಕು ಅಧ್ಯಕ್ಷ ಎ ಯು ಇಬ್ರಾಹಿಂ, ಸತ್ತಿಹಳ್ಳಿ ಕೃಷಿ ಪತ್ತಿನ ಅಧ್ಯಕ್ಷ ರಘು, ವೀರಭದ್ರ ಮುಕ್ತಿಧಾಮ ಸಮಿತಿ ಅಧ್ಯಕ್ಷ ನಿಂಗೇಗೌಡ, ಕಾರ್ಯದರ್ಶಿ ನಾಗೇಶ್ ಗಾಳಿ ಗಂಡಿ, ಪಂಚಾಯತಿ ಮಾಜಿ ಸದಸ್ಯ ಗಿರೀಶ್ ಎಚ್ ಕೆ, ಶಿಬಿರದ ಕಾರ್ಯದರ್ಶಿ ಬೇಬಿ ಕೆ, ಗ್ರಾಮಾಭಿವೃದ್ಧಿ ಯೋಜನೆ ಒಕ್ಕೂಟಗಳ ಅಧ್ಯಕ್ಷರು, ಪದಾಧಿಕಾರಿಗಳು ಶೌರ್ಯ ವಿಪತ್ತು ಘಟಕದ ಪ್ರತಿನಿಧಿಗಳು ಸದಸ್ಯರು ಭಾಗವಹಿಸಿದ್ದರು.