ಶಂಕರ ಹಾವಿನಾಳ
ಚ್ಯಾಲೆಂಜ್‌ಗಾಗಿ ತೆಗೆದುಕೊಂಡ ಶಾಸಕರು ಸುಮ್ಮನಾದರೆಕೆ?ಕಳೆದ ಸರ್ಕಾರದ ಅವಧಿಯಲ್ಲಿರುವ ಶಾಸಕ ದೇವಾನಂದ ಚವ್ಹಾಣ ಅವರು ಶಾಸಕರಾಗಿ ಅಧಿಕಾರಕ್ಕೆ ಬಂದ ಕೆಲವೇ ತಿಂಗಳಲ್ಲಿ ಚಡಚಣ ಪಟ್ಟಣಕ್ಕೆ ಒಂದು ಸರ್ಕಾರಿ ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜು ಪ್ರಾರಂಭಿಸಲು ಮುಂದಾದರು. ಖ್ಯಾತ ಜವಳಿ ವ್ಯಾಪಾರಸ್ಥಾರ ಅಜಿತ ಮುತ್ತಿನ ಅವರಿಂದ ದೇಣಿಗೆಯಾಗಿ 2 ಎಕರೆ ಜಮೀನು ಪಡೆಯಲು ಮುಂದಾದರೂ ಜಮೀನು ಕೊಡುವ ಭರವಸೆ ನೀಡಿದ ನಿಮಿತ್ತ ಸಾರ್ವಜನಿಕ ಸಭೆಯಲ್ಲಿ ಅವರನ್ನು ಸನ್ಮಾನಿಸಲಾಯಿತು. ಮುಂದೆ ಸಮ್ಮಿಶ್ರ ಸರ್ಕಾರ ಅಧಿಕಾರ ಕಳೆದುಕೊಂಡು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಏನಾಯಿತು ಎಂಬುವುದು ಗೊತ್ತಾಗಲಿಲ್ಲ. ಅಲ್ಲಿಂದ ಇಲ್ಲಿಯವರಿಗೆ ಕನ್ನಡ ಮಾಧ್ಯಮ ಪ್ರೌಢಶಾಲೆ ಪ್ರಾರಂಭವಾಗುವ ಕನಸು ಕನಸಾಗಿಯೇ ಉಳಿದಿದೆ.ವಿದ್ಯಾಥಿಗಳಿಗೆ ಖಾಸಗಿ ಶಾಲೆಗಳೇ ಗತಿ:
ಚಡಚಣ ಶೈಕ್ಷಣಿಕ ತಾಲೂಕಿನಲ್ಲಿ ಒಟ್ಟು 47 ಪ್ರೌಢಶಾಲೆಯಳಿವೆ. ಅದರಲ್ಲಿ ಪಟ್ಟಣ ಹೊರತು ಪಡಿಸಿ ಸರ್ಕಾರಿ 22, ಪಟ್ಟಣ ಸೇರಿದಂತೆ ಅನುದಾನಿತ 15 ಹಾಗೂ ಅನುದಾನ ರಹಿತ 10 ಪ್ರೌಢಶಾಲೆಗಳಿವೆ. ಅದರಲ್ಲಿ ಸುಮಾರು 1 ರಿಂದ 10ನೇ ತರಗತಿಯವರೆಗೆ ಸುಮಾರು 39,400 ವಿದ್ಯಾಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಕೇವಲ ಪ್ರೌಢಶಾಲೆಯಲ್ಲಿ 11 ಸಾವಿರದಾ 754 ವಿದ್ಯಾಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಆದರೆ, ಪಟ್ಟಣದಲ್ಲಿ ಎರಡು ಅನುದಾನಿತ, ಎರಡು ಖಾಸಗಿ ಒಂದು ಉರ್ದು ಸರ್ಕಾರಿ ಪ್ರೌಢಶಾಲೆ ಹೊತರು ಪಡಿಸಿ ಒಂದೂ ಕನ್ನಡ ಮಾಧ್ಯಮ ಸರ್ಕಾರಿ ಪ್ರೌಢಶಾಲೆ ಇಲ್ಲದಿರುವುದರಿಂದ ಅನುದಾನಿತ ಹಾಗೂ ಖಾಸಗಿ ಶಾಲೆಗಳೇ ಗತಿ ಎನ್ನುವಂತಾಗಿದೆ. ಸರ್ಕಾರ, ರಾಜಕೀಯ ನಾಯಕರ ಹಾಗೂ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಬಡ ಕುಟುಂಬದ ಮಕ್ಕಳು ಅನಿವಾರ್ಯವಾಗಿ ಖಾಸಗಿ ಶಾಲೆಗೆ ಹೋಗಬೇಕಾಗಿದ್ದು, ಖಾಸಗಿ ಶಾಲೆಯ ವೆಚ್ಚವು ಬಡಕುಟುಂಬದ ಜೇಬಿಗೆ ಕತ್ತರಿ ಹಾಕಿದಂತಾಗಿದೆ. ಇನ್ನಾದರೂ ಸಂಬಂಧಿಸಿದ ಜನಪ್ರತಿನಿಧಿಗಳು, ಅಧಿಕಾರಿಗಳು ಸರ್ಕಾರಿ ಕನ್ನಡ ಮಾಧ್ಯಮ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳ ಮಂಜೂರಾತಿಗೆ ವಿಶೇಷ ಕಾಳಜಿ ಹಾಗೂ ಇಚ್ಛಾಶಕ್ತಿ ತೊರಿಸುವರೇ ಕಾಯ್ದು ನೋಡಬೇಕಾಗಿದೆ....ಕೋಟ್....
ಪಟ್ಟಣದಲ್ಲಿ ಸರ್ಕಾರಿ ಕನ್ನಡ ಮಾಧ್ಯಮ ಪ್ರೌಢಶಾಲೆ ಪ್ರಾರಂಭಿಸುವಂತೆ ಒತ್ತಾಯ ಮಾಡುವುದರ ಜೊತೆಗೆ ಮತಕ್ಷೇತ್ರದ ಶಾಸಕರಿಗೆ ಹಾಗೂ ಸಂಸದರಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಮುಂದೆವರೆದು ಜಿಲ್ಲಾಧಿಕಾರಿಗಳಿಗೂ ಮನವಿ ಸಲ್ಲಿಸಲಾಗಿದೆ. ಆದರೆ, ಇಲ್ಲಯವರೆಗೆ ಒಬ್ಬರೂ ಪ್ರೌಢಶಾಲೆ ಪ್ರಾರಂಭ ಮಾಡುವ ಗೋಜಿಗಿ ಹೋಗುತ್ತಿಲ್ಲ. ಖಾಸಗಿ ಶಾಲೆಗಳ ಆಡಳಿತ ಮಂಡಳಿಯವರ ಪ್ರಭಾವಕ್ಕೆ ಒಳಗಾಗಿ ಚಡಚಣದಲ್ಲಿ ಸರ್ಕಾರಿ ಪ್ರೌಢಶಾಲೆ ಪ್ರಾರಂಭವಾಗುತ್ತಿಲ್ಲ.
ಇಂಡಿ ಪಟ್ಟಣದಲ್ಲಿ ಸರ್ಕಾರಿ ಕನ್ನಡ ಮಾಧ್ಯಮ ಪ್ರೌಢಶಾಲೆ ಇಲ್ಲದಿರುವುದು ನಮ್ಮ ಗಮನಕ್ಕೂ ಬಂದಿದೆ. ಸರ್ಕಾರಿ ಕನ್ನಡ ಮಾಧ್ಯಮ ಪ್ರೌಢಶಾಲೆ ಪ್ರಾರಂಭಿಸಲು ಸಾರ್ವಜನಿಕರಿಂದ ಆಹವಾಲು ಬಂದರೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.
--
-ಪ್ರಭಾಕರ ನಿರಾಳೆ, ಅಧ್ಯಕ್ಷರು ಘೋಷಿತ ತಾಲೂಕು ಹೋರಾಟ ಸಮಿತಿ ಚಡಚಣ.