ಲೇಡಿಗೋಷನ್ ಆಸ್ಪತ್ರೆಯಲ್ಲಿ ಸುಸಜ್ಜಿತ ವಿಡಿಯೋ ಕಾನ್ಫರೆನ್ಸ್ ಹಾಲ್, ಆಧುನೀಕೃತ ಸಭಾಗೃಹ

KannadaprabhaNewsNetwork |  
Published : Jun 28, 2026, 04:00 AM IST
ಲೇಡಿಗೋಷನ್‌ ಆಸ್ಪತ್ರೆಯ ಸುಸಜ್ಜಿತ ಸಭಾಗೃಹ | Kannada Prabha

ಸಾರಾಂಶ

ಮಂಗಳೂರಿನ ಸರ್ಕಾರಿ ಲೇಡಿಗೋಷನ್ ಆಸ್ಪತ್ರೆಯಲ್ಲಿ ಸುಸಜ್ಜಿತ ಮಾರ್ಪಡಿತ ವೀಡಿಯೋ ಕಾನ್ಫರೆನ್ಸ್‌ ಹಾಲ್‌ ಮತ್ತು ಆಧುನಿಕೃತ ಸಭಾಂಗಣ ನಿರ್ಮಾಣಗೊಂಡಿದೆ.

ಮಂಗಳೂರು: ಮಂಗಳೂರಿನ ಸರ್ಕಾರಿ ಲೇಡಿಗೋಷನ್ ಆಸ್ಪತ್ರೆಯಲ್ಲಿ ಸುಸಜ್ಜಿತ ಮಾರ್ಪಡಿತ ವೀಡಿಯೋ ಕಾನ್ಫರೆನ್ಸ್‌ ಹಾಲ್‌ ಮತ್ತು ಆಧುನಿಕೃತ ಸಭಾಂಗಣ ನಿರ್ಮಾಣಗೊಂಡಿದೆ.ಈಗಾಗಲೇ ಲಯನ್ಸ್ ಕ್ಲಬ್ ಇಂಟರ್‌ನ್ಯಾಷನಲ್‌ ಸಂಸ್ಥೆ ವತಿಯಿಂದ ಅಂದಿನ ಲಯನ್ಸ್ ಗವರ್ನರ್ ವಸಂತ್ ಶೆಟ್ಟಿ ಅನುದಾನಿತಗೊಳಿಸಲ್ಪಟ್ಟು ಸರ್ಕಾರಿ ಲೇಡಿಗೋಷನ್ ಆಸ್ಪತ್ರೆಗೆ ಕೊಡುಗೆಯಾಗಿ ಬಂದ ವಿಡಿಯೋ ಕಾನ್ಫರೆನ್ಸ್ ಹಾಲ್‌ನ್ನು ಇದೀಗ ಮತ್ತಷ್ಟು ಮಾರ್ಪಡಿತವಾಗಿ ಸುಸಜ್ಜಿತಗೊಳಿಸಲಾಗಿದೆ.

ಉನ್ನತ ಮಟ್ಟದ ಸಭೆಗಳನ್ನು ನಡೆಸಲು ಅನುಕೂಲವಾಗುವಂತೆ ಸುಮಾರು 13 ಮೈಕ್ರೋಫೋನ್‌ಗಳ ಅಳವಡಿಕೆ, ಹೈ ಸ್ಟ್ಯಾಂಡರ್ಡ್ ಅಂಪ್ಲಿಫಯರ್‌ ಹಾಗೂ ಪೂರಕ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಸುಮಾರು 2.5 ಲಕ್ಷ ರು. ವೆಚ್ಚದಲ್ಲಿ ಈ ಉಪಕರಣಗಳು ದಾನಿಗಳಿಂದ ಪಡೆದುಕೊಂಡದ್ದಾಗಿದೆ. 50 ಜನರು ಏಕಕಾಲಕ್ಕೆ ಕುಳಿತುಕೊಳ್ಳಬಹುದಾದ ವ್ಯವಸ್ಥೆಯೂ ಇದೆ. ಉನ್ನತ ಮಟ್ಟದ ಸಭೆ ನಡೆಸಲು, ಆರೋಗ್ಯ ಶಿಕ್ಷಣ ಕಾರ್ಯಕ್ರಮಗಳು, ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಾಗಾರ, ಆರೋಗ್ಯ ತರಬೇತಿ ಕಾರ್ಯಕ್ರಮ ನೆರವೇರಿಸಲು ಪವರ್ ಪಾಯಿಂಟ್ ಪ್ರೆಸೆಂಟೇಷನ್ ವ್ಯವಸ್ಥೆ ಇಲ್ಲಿದೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ದುರ್ಗಾಪ್ರಸಾದ್ ಎಂ.ಆರ್. ಮಾಹಿತಿ ನೀಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯುವ ಜನತೆಯಲ್ಲಿ ಯೋಗದ ಬಗ್ಗೆ ರೆಡ್‌ಕ್ರಾಸ್‌ ಅರಿವು: ಸಿಎ ಶಾಂತಾರಾಮ ಶೆಟ್ಟಿ
ಸ್ತ್ರೀ ಪರಿಪೂರ್ಣತೆಯ ಸಂಕೇತ: ಡಾ. ಮೋಹನ್ ಆಳ್ವ