28ರಂದು ರೋಟರಿ ಜಿಲ್ಲಾ ಗವರ್ನರ್‌ ಸತೀಶ್‌ ಬೋಳಾರ್‌ ಅಧಿಕಾರ ಸ್ವೀಕಾರ

KannadaprabhaNewsNetwork |  
Published : Jun 28, 2026, 04:00 AM IST
ವಿಕ್ರಮದತ್ತ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು | Kannada Prabha

ಸಾರಾಂಶ

ರೋಟರಿ ಇಂಟರ್‌ನ್ಯಾಷನಲ್ ಜಿಲ್ಲಾ 3181ರ 2026–27ನೇ ಸಾಲಿನ ಜಿಲ್ಲಾ ಗವರ್ನರ್ ಆಗಿ ಆಯ್ಕೆಯಾಗಿರುವ ಸತೀಶ್ ಬೋಳಾರ್ ಜೂ. 28ರಂದು ಬೆಳಗ್ಗೆ 10.30ಕ್ಕೆ ಮಂಗಳೂರಿನ ಪಿಲಿಕುಳ ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿ ಕೇಂದ್ರದಲ್ಲಿ ನಡೆಯುವ ಸಮಾರಂಭದಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಮಾಜಿ ಜಿಲ್ಲಾ ಗವರ್ನರ್‌ ವಿಕ್ರಮದತ್ತ ತಿಳಿಸಿದರು.

ಮಂಗಳೂರು: ರೋಟರಿ ಇಂಟರ್‌ನ್ಯಾಷನಲ್ ಜಿಲ್ಲಾ 3181ರ 2026–27ನೇ ಸಾಲಿನ ಜಿಲ್ಲಾ ಗವರ್ನರ್ ಆಗಿ ಆಯ್ಕೆಯಾಗಿರುವ ಸತೀಶ್ ಬೋಳಾರ್ ಜೂ. 28ರಂದು ಬೆಳಗ್ಗೆ 10.30ಕ್ಕೆ ಮಂಗಳೂರಿನ ಪಿಲಿಕುಳ ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿ ಕೇಂದ್ರದಲ್ಲಿ ನಡೆಯುವ ಸಮಾರಂಭದಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಮಾಜಿ ಜಿಲ್ಲಾ ಗವರ್ನರ್‌ ವಿಕ್ರಮದತ್ತ ತಿಳಿಸಿದರು.ಅವರು ಶುಕ್ರವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದಕ್ಷಿಣ ಕನ್ನಡ, ಕೊಡಗು, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳನ್ನು ಒಳಗೊಂಡಿರುವ ರೋಟರಿ ಜಿಲ್ಲಾ 3181ರ ಸುಮಾರು 1,000ಕ್ಕೂ ಅಧಿಕ ರೋಟೇರಿಯನ್‌ಗಳು, ರೋಟರಾಕ್ಟರ್‌ಗಳು, ಇಂಟರಾಕ್ಟರ್‌ಗಳು, ಗಣ್ಯರು ಹಾಗೂ ಆಹ್ವಾನಿತರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.ಕಾರ್ಯಕ್ರಮದಲ್ಲಿ ರೋಟರಿ ಫೌಂಡೇಶನ್ ಟ್ರಸ್ಟಿ ಹಾಗೂ ಮಾಜಿ ರೋಟರಿ ಇಂಟರ್‌ನ್ಯಾಷನಲ್ ನಿರ್ದೇಶಕ ಡಾ.ಭರತ್ ಪಾಂಡ್ಯ, ಜಿಲ್ಲಾ ಗವರ್ನರ್ ರಾಮಕೃಷ್ಣ ಪಿ.ಕೆ. ಸೇರಿದಂತೆ ರೋಟರಿಯ ವಿವಿಧ ಪದಾಧಿಕಾರಿಗಳು, ಗಣ್ಯರು ಉಪಸ್ಥಿತರಿರಲಿದ್ದಾರೆ ಎಂದರು.

ನಿಯೋಜಿತ ಜಿಲ್ಲಾ ಗವರ್ನರ್‌ ಸತೀಶ್‌ ಬೋಳಾರ್‌ ರೋಟರಿ ಸಂಸ್ಥೆ ಹಾಗೂ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಪ್ರಮುಖರಾದ ಜಿ.ಕೆ.ಶೆಟ್ಟಿ, ಭಾಸ್ಕರ್‌ ರೈ ಕಟ್ಟ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯುವ ಜನತೆಯಲ್ಲಿ ಯೋಗದ ಬಗ್ಗೆ ರೆಡ್‌ಕ್ರಾಸ್‌ ಅರಿವು: ಸಿಎ ಶಾಂತಾರಾಮ ಶೆಟ್ಟಿ
ಸ್ತ್ರೀ ಪರಿಪೂರ್ಣತೆಯ ಸಂಕೇತ: ಡಾ. ಮೋಹನ್ ಆಳ್ವ