ಪ್ರವಾಹ ಭೀತಿ ಜಾಗದಲ್ಲಿ ಸರ್ಕಾರಿ ಆಸ್ಪತ್ರೆ, ಕ್ರೀಡಾಂಗಣ!

KannadaprabhaNewsNetwork |  
Published : Aug 29, 2025, 01:00 AM IST
ಕೃಷ್ಣಾ ನದಿ ಪ್ರವಾಹಕ್ಕೆ ರಬಕವಿ-ಬನಹಟ್ಟಿ ಸಮೀಪದ ಮದನಮಟ್ಟಿ ಗ್ರಾಮಕ್ಕೆ ತೆರಳುವ ರಸ್ತೆ ಸಂಚಾರ ಬಂದ್ ಆಗಿರುವದು. | Kannada Prabha

ಸಾರಾಂಶ

ಪ್ರಜಾಸೌಧ ಕಟ್ಟಡ ನಿರ್ಮಾಣಕ್ಕೆ ತಹಸೀಲ್ದಾರ, ಉಪವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳು ರಬಕವಿ ನಗರದ ಎರಡು ಸ್ಥಳಗಳ ಪರಿಶೀಲನೆ ನಡೆಸಿ ಅವಳಿ ನಗರದಲ್ಲಿ ಸ್ಥಳ ಕೊರತೆ ಇದೆ ಏನೋ ಎಂಬಂತೆ ಮುಳುಗಡೆಯಾಗದ ಹಾಗೂ ಪುನರ್ವಸತಿ ಜಾಗವನ್ನು ಹೈಕೋರ್ಟ್ ಮೆಟ್ಟಿಲೇರಿ ರಬಕವಿ ನಗರದಲ್ಲಿ ಪಡೆದುಕೊಂಡಿದ್ದು, ನಗರದ ಮುಳುಗಡೆ ಪ್ರದೇಶಗಳ ನಾಗರಿಕರ ಪುನರ್ವಸತಿಗೆ ಸಿಗದ ಸ್ಥಳ ಪಡೆದಿರುವುದು ಸ್ಥಳೀಯರ ಕೆಂಗಣ್ಣಿಗೆ ಗುರಿಯಾಗಿದೆ.

ಶಿವಾನಂದ ಪಿ.ಮಹಾಬಲಶೆಟ್ಟಿ

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಪ್ರಜಾಸೌಧ ಕಟ್ಟಡ ನಿರ್ಮಾಣಕ್ಕೆ ತಹಸೀಲ್ದಾರ, ಉಪವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳು ರಬಕವಿ ನಗರದ ಎರಡು ಸ್ಥಳಗಳ ಪರಿಶೀಲನೆ ನಡೆಸಿ ಅವಳಿ ನಗರದಲ್ಲಿ ಸ್ಥಳ ಕೊರತೆ ಇದೆ ಏನೋ ಎಂಬಂತೆ ಮುಳುಗಡೆಯಾಗದ ಹಾಗೂ ಪುನರ್ವಸತಿ ಜಾಗವನ್ನು ಹೈಕೋರ್ಟ್ ಮೆಟ್ಟಿಲೇರಿ ರಬಕವಿ ನಗರದಲ್ಲಿ ಪಡೆದುಕೊಂಡಿದ್ದು, ನಗರದ ಮುಳುಗಡೆ ಪ್ರದೇಶಗಳ ನಾಗರಿಕರ ಪುನರ್ವಸತಿಗೆ ಸಿಗದ ಸ್ಥಳ ಪಡೆದಿರುವುದು ಸ್ಥಳೀಯರ ಕೆಂಗಣ್ಣಿಗೆ ಗುರಿಯಾಗಿದೆ.

ಈ ಮಧ್ಯೆ ಮದನಮಟ್ಟಿ ಗ್ರಾಮಕ್ಕೆ ಹೊಂದಿರುವ ಪ್ರದೇಶದಲ್ಲಿ ತಾಲೂಕಾಸ್ಪತ್ರೆಗೆ ೮ ಎಕರೆ ಹಾಗೂ ಪ್ರದೇಶದಲ್ಲಿ ತಾಲೂಕು ಕ್ರೀಡಾಂಗಣಕ್ಕೆ ೭ ಎಕರೆ ಜಾಗ ನಿಗದಿ ಮಾಡಿರುವುದು ನಗರದ ನಾಗರಿಕರಲ್ಲಿ ಅಚ್ಚರಿ ಮೂಡಿಸಿದೆ. ಮಳೆಗಾಲದಲ್ಲಿ ಕೃಷ್ಣೆಗೆ ಪ್ರವಾಹ ಬಂದು ಸಂಚಾರ ಬಂದ್‌ ಆಗಿ ಈ ಪ್ರದೇಶಗಳಿಗೆ ತೆರಳುವುದು ಅಸಾಧ್ಯವಾಗಿದೆ. ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮುಳುಗಡೆಯಾಗುವ ಕಾರಣ ಪದವಿ ಕಾಲೇಜು ವಿದ್ಯಾರ್ಥಿಗಳು ತರಗತಿಗಳಿಗೆ ಹೋಗಲು ಸಾಧ್ಯವಾಗುವುದಿಲ್ಲ. ಏತನ್ಮಧ್ಯೆ ತಾಲೂಕು ಆಸ್ಪತ್ರೆ ಹಾಗೂ ತಾಲೂಕು ಕ್ರೀಡಾಂಗಣಕ್ಕೆ ಅಧಿಕೃತವಾಗಿ ಕಾಲೇಜು ಬಳಿಯೇ ಸ್ಥಳ ಗುರ್ತಿಸಿ, ₹೮ ಕೋಟಿ ಮತ್ತು ₹೨ ಕೋಟಿ ಸೇರಿ ಒಟ್ಟು ₹೧೦ ಕೋಟಿ ಹಣ ಬಿಡುಗಡೆಗೊಂಡಿದೆ.

ಸವಾಲಾದ ಸಂಚಾರ: ಈಗಾಗಲೇ ಪದವಿ ಕಾಲೇಜು ಇದೇ ಪ್ರದೇಶದಲ್ಲಿದ್ದು, ವರ್ಷದ ಎರಡ್ಮೂರು ತಿಂಗಳು ಮಳೆಗಾಲದಲ್ಲಿ ಈ ಪ್ರದೇಶದಲ್ಲಿ ಪ್ರವಾಹ ಸಾಮಾನ್ಯ ಎನ್ನುವಂತಾಗಿದೆ. ಪ್ರವಾಹದ ವೇಳ‍ೆ ಬನಹಟ್ಟಿ ಹಾಗೂ ರಬಕವಿ ಪಟ್ಟಣದಿಂದ ಈ ಪ್ರದೇಶಕ್ಕೆ ತೆರವುದು ಅಸಾಧ್ಯವೆನಿಸಿದೆ.

ಕೃಷ್ಣಾ ನದಿ ಕೊಂಚ ನದಿ ಏರಿಕೆ ಕಂಡರೆ ಸಾಕು ಆಸ್ಕಿ, ಆಸಂಗಿ, ಕುಲಹಳ್ಳಿ, ರಬಕವಿ, ನದಿ ರಸ್ತೆ ಸೇರಿದಂತೆ ತಾಲೂಕಿನ ಹಲವಾರು ಗ್ರಾಮಗಳು ಬೇಗ ಜಲಾವೃತಗೊಂಡು ರಸ್ತೆ ಸಂಚಾರ ಸ್ಥಗಿತಗೊಳ್ಳುತ್ತದೆ. ಕೃಷ್ಣೆ ಕೊಂಚ ಏರಿಕೆಗೊಂಡರೂ ನದಿ ರಸ್ತೆ ಮುಳುಗಡೆಯಾಗಿ ಸಂಚಾರ ಬಂದ್‌ ಆಗುತ್ತದೆ. ಈ ಅದೇ ಪ್ರದೇಶದಲ್ಲಿ ಹೊಸ ಕಾಮಗಾರಿಗಳಿಗೆ ಸ್ಥಳ ಗುರುತಿಸಿರುವುದು ಬೇಜವಾಬ್ದಾರಿತನ ಹಾಗೂ ಸರ್ಕಾರದ ಹಣ ಅಪವ್ಯಯವಾದಂತೆ ಎಂದು ನಾಗರಿಕರ ಅಭಿಮತವಾಗಿದೆ.

ರಬಕವಿ-ಮಹೇಶವಾಡಗಿ ಸೇತುವೆ ನನೆಗುದಿಗೆ: ಇದೀಗ ₹೫೦ ಕೋಟಿ ವೆಚ್ಚದಲ್ಲಿ ಬೆಳಗಾವಿ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ರಬಕವಿ-ಮಹೇಶವಾಡಗಿ ಸೇತುವೆ ಕಾಮಗಾರಿ ಒಂದು ದಶಕದಿಂದ ನಡೆಯುತ್ತಿದ್ದರೂ ಕಾಮಗಾರಿಗೆ ಮುಕ್ತಿ ಸಿಕ್ಕಿಲ್ಲ. ರಬಕವಿಯ ಹಳಿಂಗಳಿ ನಾಕಾಕ್ಕೆ ತಲುಪುವ ಸೇತುವೆ ರಸ್ತೆ ಕಾಮಗಾರಿ ಬಿಡಿ, ಇನ್ನೂ ಸೇತುವೆಯೇ ಪೂರ್ಣಗೊಂಡಿಲ್ಲ. ಯುಕೆಪಿ ಮುಂದಿನ ಹಂತದಲ್ಲಿ ಖಚಿತವಾಗಿ ಮುಳುಗಡೆಯಾಗುವ ಪ್ರದೇಶದಲ್ಲಿ ರಸ್ತೆ ನಿರ್ಮಾಣ ತಾಂತ್ರಿಕ ಸಮಸ್ಯೆ ಬಗ್ಗೆ ತಜ್ಞರ ನೆರವಲ್ಲಿ ಸರ್ಕಾರ ಕಾಮಗಾರಿ ಎತ್ತರಗೊಳಿಸುವ ಮೂಲಕ ಶಾಶ್ವತ ಪರಿಹಾರದತ್ತ ಮಹತ್ವದ ನಿರ್ಧಾರ ಕೈಗೊಳ್ಳಬೇಕಿದೆ.ಪ್ರಸಕ್ತ ಪದವಿ ಕಾಲೇಜಿಗೆ ತೆರಳಲು ವಿದ್ಯಾರ್ಥಿಗಳಿಗೆ ಸವಾಲಾಗಿದೆ. ತಾಲೂಕಾಸ್ಪತ್ರೆ, ಕ್ರೀಡಾಂಗಣ ನಿರ್ಮಾಣವಾಗುವ ಮುನ್ನ ತಾಂತ್ರಿಕವಾಗಿ ಪರಿಪೂರ್ಣ ಸಿದ್ಧತೆ ನಡೆಸಬೇಕು. ಇಲ್ಲವಾದಲ್ಲಿ ಸುರಕ್ಷಿತ ಸ್ಥಳದಲ್ಲಿ ನಿರ್ಮಾಣ ಮಾಡುವುದು ಸೂಕ್ತ.

-ಭೀಮಶಿ ಮಗದುಮ್, ಮಾಜಿ ನಿರ್ದೇಶಕರು, ಬಿಡಿಸಿಸಿ ಬ್ಯಾಂಕ

ಮುಳುಗಡೆಯಾಗುವ ಜಾಗಗಳಲ್ಲಿ ತಾಲೂಕು ಆಸ್ಪತ್ರೆ ಮತ್ತು ತಾಲೂಕು ಕ್ರೀಡಾಂಗಣಗಳಿಗೆ ಜಾಗ ಗುರ್ತಿಸುವಾಗ ಸರ್ಕಾರ ಪೂರ್ವಾಪರ ಮಾಹಿತಿ ಪಡೆಯಬೇಕಿತ್ತು. ಪ್ರವಾಹ ಭೀತಿ ಇರುವ ಸ್ಥಳದಲ್ಲಿ ಇಲಾಖೆಗಳ ಕಟ್ಟಡ ನಿರ್ಮಾಣ ಮಾಡಿದರೆ ಸಾರ್ವಜನಿಕರ ತೆರಿಗೆ ದುಡ್ಡು ಕೃಷ್ಣಾರ್ಪಣವಾಗುವುದು ಖಚಿತ.

-ಹರ್ಷವರ್ಧನ ಪಟವರ್ಧನ, ವಕೀಲ ಆಸಂಗಿ-ಬನಹಟ್ಟಿ

ಮುಳುಗಡೆಯಾಗುವ ರಸ್ತೆ ಮೂಲಕ ಸಾಗುವ ಪ್ರದೇಶದಲ್ಲಿ ಕೋಟಿಗಟ್ಟಲೆ ಅನುದಾನ ವ್ಯಯಿಸುವ ಮುನ್ನ ರಾಜ್ಯ ಸರ್ಕಾರ ಸಾಧಕ-ಬಾಧಕಗಳ ಬಗ್ಗೆ ಅರಿತು ಅವಳಿ ನಗರದ ಜನತೆ ದೂರ ಕ್ರಮಿಸುವ ಜಾಗ ಹೊರತುಪಡಿಸಿ ಸೂಕ್ತ ಜಾಗವನ್ನು ತಾಲೂಕಾಸ್ಪತ್ರೆ, ಕ್ರೀಡಾಂಗಣ ನಿರ್ಮಿಸಬೇಕು.

- ನೀಲಕಂಠ ಮುತ್ತೂರ ಅಧ್ಯಕ್ಷರು, ಪವರ್‌ಲೂಂ ಅಸೋಸಿಯೇಶನ್ ರಬಕವಿ

ಪ್ರಸಕ್ತ ಪದವಿ ಕಾಲೇಜಿಗೆ ತೆರಳಲು ವಿದ್ಯಾರ್ಥಿಗಳಿಗೆ ಸವಾಲಾಗಿದೆ. ತಾಲೂಕಾಸ್ಪತ್ರೆ, ಕ್ರೀಡಾಂಗಣ ನಿರ್ಮಾಣವಾಗುವ ಮುನ್ನ ತಾಂತ್ರಿಕವಾಗಿ ಪರಿಪೂರ್ಣ ಸಿದ್ಧತೆ ನಡೆಸಬೇಕು. ಇಲ್ಲವಾದಲ್ಲಿ ಸುರಕ್ಷಿತ ಸ್ಥಳದಲ್ಲಿ ನಿರ್ಮಾಣ ಮಾಡುವುದು ಸೂಕ್ತ.

-ಭೀಮಶಿ ಮಗದುಮ್, ಮಾಜಿ ನಿರ್ದೇಶಕರು, ಬಿಡಿಸಿಸಿ ಬ್ಯಾಂಕ

ಮುಳುಗಡೆಯಾಗುವ ಜಾಗಗಳಲ್ಲಿ ತಾಲೂಕು ಆಸ್ಪತ್ರೆ ಮತ್ತು ತಾಲೂಕು ಕ್ರೀಡಾಂಗಣಗಳಿಗೆ ಜಾಗ ಗುರ್ತಿಸುವಾಗ ಸರ್ಕಾರ ಪೂರ್ವಾಪರ ಮಾಹಿತಿ ಪಡೆಯಬೇಕಿತ್ತು. ಪ್ರವಾಹ ಭೀತಿ ಇರುವ ಸ್ಥಳದಲ್ಲಿ ಇಲಾಖೆಗಳ ಕಟ್ಟಡ ನಿರ್ಮಾಣ ಮಾಡಿದರೆ ಸಾರ್ವಜನಿಕರ ತೆರಿಗೆ ದುಡ್ಡು ಕೃಷ್ಣಾರ್ಪಣವಾಗುವುದು ಖಚಿತ.

-ಹರ್ಷವರ್ಧನ ಪಟವರ್ಧನ, ವಕೀಲ ಆಸಂಗಿ-ಬನಹಟ್ಟಿ

ಮುಳುಗಡೆಯಾಗುವ ರಸ್ತೆ ಮೂಲಕ ಸಾಗುವ ಪ್ರದೇಶದಲ್ಲಿ ಕೋಟಿಗಟ್ಟಲೆ ಅನುದಾನ ವ್ಯಯಿಸುವ ಮುನ್ನ ರಾಜ್ಯ ಸರ್ಕಾರ ಸಾಧಕ-ಬಾಧಕಗಳ ಬಗ್ಗೆ ಅರಿತು ಅವಳಿ ನಗರದ ಜನತೆ ದೂರ ಕ್ರಮಿಸುವ ಜಾಗ ಹೊರತುಪಡಿಸಿ ಸೂಕ್ತ ಜಾಗವನ್ನು ತಾಲೂಕಾಸ್ಪತ್ರೆ, ಕ್ರೀಡಾಂಗಣ ನಿರ್ಮಿಸಬೇಕು.

- ನೀಲಕಂಠ ಮುತ್ತೂರ ಅಧ್ಯಕ್ಷರು, ಪವರ್‌ಲೂಂ ಅಸೋಸಿಯೇಶನ್ ರಬಕವಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭವಿಷ್ಯದ ಭಾರತ ನಿರ್ಮಾಣಕ್ಕಾಗಿ ವಿದ್ಯಾರ್ಥಿಗಳು ಸಂಕಲ್ಪ ಮಾಡಿ: ಮಾಜಿ ಶಾಸಕ ಸುಧಾಕರ್ ಲಾಲ್
ದುಶ್ಚಟ ಬಿಟ್ಟರೆ ವಿವಾಹಕ್ಕೆ ಕನ್ಯೆಯರು ಸಿಕ್ಕಾರು: ಶಾಂತವೀರ ಶ್ರೀ