ಬರಗಾಲ ಎದುರಿಸಲು ಸರ್ಕಾರ ಸಿದ್ಧ: ಕೆ.ಎಚ್‌.ಮುನಿಯಪ್ಪ

KannadaprabhaNewsNetwork |  
Published : Jul 07, 2026, 02:00 AM IST
6ಕೆಜಿಎಫ್‌1 | Kannada Prabha

ಸಾರಾಂಶ

ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಿಗೆ ಉಸ್ತುವಾರಿ ಸಚಿವನಾಗಿರುವುದರಿಂದ ಬರಗಾಲವನ್ನು ನಿಭಯಿಸುವ ನಿಟ್ಟಿನಲ್ಲಿ ಅಧಿಕಾರಿಗಳ ಸಭೆಯನ್ನು ಕರೆದಿದ್ದೇನೆ,

ಮೋಡ ಬಿತ್ತನೆ ಬಗ್ಗೆ ಸಾಧಕ ಬಾಧಕಗಳ ಚರ್ಚೆ । ಸಿಎಂ, ಡಿಸಿಎಂ ಕ್ಯಾಬಿನೆಟ್ ದರ್ಜೆ ಸಚಿವರೊಂದಿಗೆ ಸಮಾಲೋಚನೆ

ಕನ್ನಡಪ್ರಭ ವಾರ್ತೆ ಕೆಜಿಎಫ್

ರಾಜ್ಯದ ಕೆಲವು ಭಾಗಗಳಲ್ಲಿ ಮಳೆ ಕಂಡು ಬಂದರು ಹಲವು ಕಡೆ ಮಳೆ ಅಭಾವ ತೀವ್ರವಾಗಿ ಕಾಡುತ್ತಿದೆ. ಬರಗಾಲವನ್ನು ಸಮರ್ಥವಾಗಿ ನಿಭಯಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಎಲ್ಲಾ ಕ್ಯಾಬಿನೆಟ್ ದರ್ಜೆ ಸಚಿವರೊಂದಿಗೆ ನಾಳೆ ಸಮಾಲೋಚನೆ ನಡೆಸಿ ಮೋಡ ಬಿತ್ತನೆ ಮಾಡುವುದರ ಬಗ್ಗೆಯು ಸಾಧಕ ಬಾಧಕಗಳ ಬಗ್ಗೆ ಸರ್ಕಾರ ಚರ್ಚೆ ನಡೆಸಲಿದೆ ಎಂದು ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.

ನಗರದ ಶ್ರೀ ಪ್ರಸನ್ನ ಲಕ್ಷ್ಮೀ ವೆಂಕಟರಮಣಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಮಳೆಗಾಗಿ ಪ್ರಾರ್ಥನೆ ಸಲ್ಲಿಸಿ ಮಾತನಾಡಿದರು. ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಿಗೆ ಉಸ್ತುವಾರಿ ಸಚಿವನಾಗಿರುವುದರಿಂದ ಬರಗಾಲವನ್ನು ನಿಭಯಿಸುವ ನಿಟ್ಟಿನಲ್ಲಿ ಅಧಿಕಾರಿಗಳ ಸಭೆಯನ್ನು ಕರೆದಿದ್ದೇನೆ, ಎರಡು ಜಿಲ್ಲೆಗಳಲ್ಲಿ ಮಳೆಯ ಪ್ರಮಾಣದ ಕುರಿತು ಮಾಹಿತಿ ಪಡೆದುಕೊಂಡು ಕುಡಿವ ನೀರು, ಜಾನುವಾರುಗಳಿಗೆ ಮೇವಿಗೆ ಸರಕಾರ ಮೊದಲ ಅದ್ಯತೆ ನೀಡಲಾಗುವುದೆಂದು ತಿಳಿಸಿದರು.೧೩ ರಿಂದ ೧೪ ಲಕ್ಷ ಅನರ್ಹ ಪಡಿತರ ಚೀಟಿ:

ರಾಜ್ಯದಲ್ಲಿ ೪ ಕೋಟಿ ೬೦ ಲಕ್ಷ ಪಡಿತರ ಕಾರ್ಡ್‌ಗಳಿಗೆ ಆಹಾರ ಧಾನ್ಯವನ್ನು ವಿತರಣೆ ಮಾಡಲಾಗುತ್ತಿದೆ. ದಕ್ಷಿಣ ಭಾರತದಲ್ಲಿ ಜನಸಂಖ್ಯೆ ಆಧಾರದ ಮೇರೆಗೆ ರಾಜ್ಯದಲ್ಲಿ ಶೇ. ೭೦ರಷ್ಟು ಕುಟುಂಬಗಳಿಗೆ ಪಡಿತರ ವಿತರಣೆ ಮಾಡಲಾಗುತ್ತಿದೆ. ಕೇಂದ್ರ ಸರಕಾರ ಪಡಿತರ ಕಾರ್ಡ್‌ಗಳನ್ನು ಪರಿಷ್ಕರಣೆ ಮಾಡಿ ೭.೫೦ ಲಕ್ಷ ಪಡಿತರ ಕಾರ್ಡಳನ್ನು ರದ್ದುಪಡಿಸಿದೆ. ಆದರೆ ರಾಜ್ಯದಲ್ಲಿ ೧೩ ರಿಂದ ೧೪ ಲಕ್ಷ ಅನರ್ಹ ಪಡಿತರ ಚೀಟಿದಾರರು ಇನ್ನು ಇದ್ದು, ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳಿಗೆ ಲಭ್ಯವಾಗ ಬೇಕಿದ್ದ ಪಡಿತರ ಕಾರ್ಡಳು ಎಪಿಎಲ್ ಪಡಿತರ ಚೀಟಿ ಹೊಂದಿರಬೇಕಿರುವ ಕುಟುಂಬಗಳು ಬಿಪಿಎಲ್ ಕಾರ್ಡ್ ಹೊಂದಿದ್ದು, ಅವರೇ ಸ್ವಯಂ ತೀರ್ಮಾನ ಕೈಗೊಂಡು ತಮ್ಮ ಕಾರ್ಡಳನ್ನು ಎಪಿಎಲ್‌ಗೆ ಬದಲಾವಣೆ ಮಾಡಿಕೊಂಡಲ್ಲಿ ಲಕ್ಷಾಂತರ ಅರ್ಹ ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳು ಪಡಿತರವನ್ನು ಎದುರು ನೋಡುತ್ತಿದ್ದಾರೆ ಎಂದು ಹೇಳಿದರು.ಮಾನವೀಯತೆ ಆಧಾರದ ಮೇರೆಗೆ ಪರಿಗಣಿಸಿ:ಸಾಲವನ್ನು ಪಡೆಯುವ ನಿಟ್ಟಿನಲ್ಲಿ ತೆರಿಗೆ ಪಾವತಿದಾರರು ಎಂದು ಬಂದರೆ ನೀವು ಸ್ಥಳ ಪರಿಶೀಲನೆ ನಡೆಸಿ ಮಹಜರು ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಿ ಕುಟುಂಬಗಳ ಆದಾಯ ಮಿತಿಯನ್ನು ೩ ಲಕ್ಷಗಳಿಗೆ ಏರಿಕೆ ಮಾಡಲು ಸರ್ಕಾರ ಚಿಂತನೆ ನಡೆಸುತ್ತಿದೆ. ಸದ್ಯದಲ್ಲೇ ಸರ್ಕಾರ ತೀರ್ಮಾನವನ್ನು ತೆಗೆದುಕೊಳ್ಳಲಾಗುವುದೆಂದು ತಿಳಿಸಿದರು.

ಇತ್ತೀಚೆಗೆ ನಿಧನರಾದ ಹಿರಿಯ ಪತ್ರಕರ್ತರಾದ ಶ್ರೀಧರ್ ಪಿಳ್ಯೆ ಮನೆಗೆ ಸಚಿವ ಕೆ.ಎಚ್.ಮುನಿಯಪ್ಪ ಭೇಟಿ ನೀಡಿ ಕುಟುಂಬಸ್ಥರಿಗೆ ಸಾತ್ವಂತ ಹೇಳಿದರು. ಶ್ರೀಧರ್ ಪಿಳ್ಯೆ ನನ್ನೊಂದಿಗೆ ಕಳೆದ ೩೦ ವರ್ಷಗಳಿಂದ ಉತ್ತಮ ಸಂಬಂಧವನ್ನು ಹೊಂದಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಅವರ ಕುಟುಂಬ ವರ್ಗದವರಿಗೆ ನೋವು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ಗಾಯತ್ರಿ ಅವರು ಸಚಿವರಿಗೆ ಪೂರ್ಣಕುಂಭ ಸ್ವಾಗತವನ್ನು ಕೋರಲಾಯಿತು. ಶಿರಸ್ತೇದಾರ ಮಂಜುನಾಥ್, ದೇವಾಲಯದ ಪ್ರಾಧನ ಅರ್ಚಕರಾದ ರಂಜಿತ್ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸನ್,ನಗರ ಕಾಂಗ್ರೆಸ್ ಅಧ್ಯಕ್ಷ ಮಾಣಿಕ್ಯಂ, ವರ್ಕಿಂಗ್ ಕಮಿಟಿ ಅಧ್ಯಕ್ಷ ಮೋಹನ್‌ರಾಜ್, ಮಾಜಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜಯಪಾಲ್, ಮಾಜಿ ನಗರಸಭೆ ಅಧ್ಯಕ್ಷ ವಳ್ಳಲ್‌ಮುನಿಸ್ವಾಮಿ, ತಾಲೂಕು ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ರಾದಾಕೃಷ್ಣರೆಡ್ಡಿ, ದೇವಾಲಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ಪದ್ಮನಾಬರೆಡ್ಡಿ, ಕಾಂಗ್ರೆಸ್ ಲೇಬರ್ ಕಮಿಟಿ ಸದಸ್ಯರಾದ ಶಶಿಕುಮಾರ್, ವಿಷ್ಣುಕಾಂತ, ಜಿಪಂ ಮಾಜಿ ಸದಸ್ಯ ಅ.ಮು.ಲಕ್ಷ್ಮೀ ನಾರಾಯಣ, ಜಯದೇವ್ ಹಾಗೂ ಇತರರು ಹಾಜರಿದ್ದರು.೬ಕೆಜಿಎಫ್೧ದೇವಾಲಯಕ್ಕೆ ಭೇಟಿ ನೀಡಿ ಅಹಾರ ಸಚಿವ ಕೆ.ಎಚ್.ಮುನಿಯಪ್ಪ ಅವರಿಗೆ ತಹಸೀಲ್ದಾರ್ ಗಾಯತ್ರಿ ಅವರು ಪೂರ್ಣಕುಂಭ ಸ್ವಾಗತ ಕೋರಾಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

4 ಕೋಟಿಗೂ ಅಧಿಕ ವಿಮೆ ಹಣ ಅರ್ಹ ರೈತರಿಗೆ ವಿತರಣೆ: ಸಿ.ಶಿವಕುಮಾರ್
ಕೃಷಿ ಕ್ಷೇತ್ರದಲ್ಲಿ ಜಗಜೀವನ್ ರಾಮ್‌ ಪಾತ್ರ ಅಪಾರ: ಲೋಕೇಶ್