ಸರ್ಕಾರಿ ಪಿಯು ಕಾಲೇಜಿಗೆ 2.50 ಲಕ್ಷ ದಾಖಲು ಗುರಿ

KannadaprabhaNewsNetwork |  
Published : May 03, 2026, 02:00 AM IST
ಪಿಯು ಕಾಲೇಜು | Kannada Prabha

ಸಾರಾಂಶ

ರಾಜ್ಯಾದ್ಯಂತದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ 2026-27ನೇ ಶೈಕ್ಷಣಿಕ ವರ್ಷದಲ್ಲಿ ಬರೋಬ್ಬರಿ 2.50 ಲಕ್ಷ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳುವ ಗುರಿಯನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಕಿಕೊಂಡಿದೆ.

ವಿಶ್ವನಾಥ ಮಲೇಬೆನ್ನೂರು

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ರಾಜ್ಯಾದ್ಯಂತದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ 2026-27ನೇ ಶೈಕ್ಷಣಿಕ ವರ್ಷದಲ್ಲಿ ಬರೋಬ್ಬರಿ 2.50 ಲಕ್ಷ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳುವ ಗುರಿಯನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಕಿಕೊಂಡಿದೆ.

ರಾಜ್ಯದಲ್ಲಿರುವ ಒಟ್ಟು ಆರು ಸಾವಿರಕ್ಕೂ ಅಧಿಕ ಪದವಿ ಪೂರ್ವ ಕಾಲೇಜುಗಳ ಪೈಕಿ 1,358 ಕಾಲೇಜುಗಳು ಸರ್ಕಾರಿ ಪದವಿ ಪೂರ್ವ ಕಾಲೇಜುಗಳು. ಇವುಗಳಲ್ಲಿ 1,37,849 ವಿದ್ಯಾರ್ಥಿಗಳು ಕಳೆದ 2025-26ನೇ ಸಾಲಿನಲ್ಲಿ ದಾಖಲಾತಿ ಪಡೆದುಕೊಂಡಿದ್ದರು. ಈ ಬಾರಿ ಆ ಸಂಖ್ಯೆಯನ್ನು ಬರೋಬ್ಬರಿ 2.50 ಲಕ್ಷಕ್ಕೆ ಏರಿಕೆ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ.

2026ರ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 2,87,888 ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಪೈಕಿ 2.50 ಲಕ್ಷ ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಳ್ಳಬೇಕು. ಸರ್ಕಾರಿ ಪ್ರೌಢಶಾಲೆ ಮಾತ್ರವಲ್ಲದೇ ಸರ್ಕಾರಿ ಪದವಿ ಪೂರ್ವ ಕಾಲೇಜು ವ್ಯಾಪ್ತಿಯ ಖಾಸಗಿ ಶಾಲಾ ವಿದ್ಯಾರ್ಥಿಗಳನ್ನೂ ದಾಖಲು ಮಾಡಿಕೊಳ್ಳಲು ಪ್ರಯತ್ನಿಸುವಂತೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ ಎಂದು ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.

ಜಿಲ್ಲಾವಾರು ಗುರಿ ಹಂಚಿಕೆ:

ರಾಜ್ಯದ ಒಟ್ಟಾರೆ 2.50 ಲಕ್ಷ ವಿದ್ಯಾರ್ಥಿಗಳನ್ನು ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿಗೆ ದಾಖಲು ಮಾಡಿಕೊಳ್ಳುವ ಗುರಿಯನ್ನು ಜಿಲ್ಲಾವಾರು ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಸಂಖ್ಯೆ, ಕಳೆದ ವರ್ಷದ ದಾಖಲಾತಿ ಸಂಖ್ಯೆ ಹಾಗೂ ಎಸ್‌ಎಸ್ಎಲ್‌ಸಿ ಪರೀಕ್ಷೆಯಲ್ಲಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಉತ್ತೀರ್ಣರಾದ ಅಂಕಿ-ಸಂಖ್ಯೆ ಆಧರಿಸಿ ಗುರಿ ಹಂಚಿಕೆ ಮಾಡಲಾಗಿದೆ.

ಜಿಲ್ಲಾಮಟ್ಟದಲ್ಲಿ ಗುರಿ ಸಾಧನೆ ಮಾಡುವುದಕ್ಕೆ ಶಾಲಾ ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರು ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಇಬ್ಬರಿಗೂ ಜವಾಬ್ದಾರಿ ನೀಡಲಾಗಿದೆ. ಡಿಡಿಪಿಐಗಳು ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಿಗೆ ಎಸ್‌ಎಸ್‌ಎಲ್‌ಸಿ ಪಾಸ್‌ ಆದ ವಿದ್ಯಾರ್ಥಿಗಳನ್ನು ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿಗೆ ದಾಖಲಾತಿ ಮಾಡಿಕೊಳ್ಳಲು ಉತ್ತೇಜಿಸುವ ಕ್ರಮ ಕೈಗೊಳ್ಳಬೇಕು. ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು ಮತ್ತು ಉಪನ್ಯಾಸಕರು, ಸರ್ಕಾರಿ ಪ್ರೌಢಶಾಲೆಗಳಿಗೆ ಭೇಟಿ ನೀಡಿ ಎಸ್‌ಎಸ್‌ಎಲ್‌ಸಿ ಪಾಸ್‌ ಆಗಿರುವ ವಿದ್ಯಾರ್ಥಿಗಳನ್ನು ತಮ್ಮ ಕಾಲೇಜಿಗೆ ದಾಖಲಾತಿ ಆಗುವಂತೆ ಪ್ರಚಾರ ನಡೆಸಬೇಕು ಎಂದು ಸೂಚಿಸಲಾಗಿದೆ.

-- ಬಾಕ್ಸ್‌--

ಹೊಸ ಕೋರ್ಸ್‌ ಅನುಮತಿಗೂ ಸಿದ್ಧ

ಸರ್ಕಾರಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಬೇಡಿಕೆಯಂತೆ ಹೊಸ ಕೋರ್ಸ್‌ಗಳನ್ನು ಆರಂಭಿಸಲು ಬೇಕಾದ ಅನುಮತಿ ಸಹ ನೀಡಲಾಗುವುದು. ಯಾವ ಕೋರ್ಸ್‌ಗೆ ಹೆಚ್ಚಿನ ಬೇಡಿಕೆ ಇದೆ ಎಂಬುದನ್ನು ತಿಳಿದು ಡಿಡಿಪಿಯು ಮೂಲಕ ಪ್ರಸ್ತಾವನೆ ಸಹ ಕಳುಹಿಸುವಂತೆ ನಿರ್ದೇಶಿಸಲಾಗಿದೆ.

---ಬಾಕ್ಸ್‌---

ಬ್ಯಾನರ್ ಅಳವಡಿಕೆ, ಕರಪತ್ರ ಹಂಚಿಕೆ

ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಮುಂದೆ 2026ರ ಫಲಿತಾಂಶದ ಕುರಿತು ಬ್ಯಾನರ್ ಅಳವಡಿಕೆ ಮಾಡಿ, ಕಾಲೇಜಿನಲ್ಲಿರುವ ಸರ್ಕಾರಿ ಸೌಲಭ್ಯಗಳ ಬಗ್ಗೆ ಕರಪತ್ರ ಮುದ್ರಿಸಿ ಹಂಚಿ, ಪ್ರಚಾರ ನಡೆಸುವಂತೆ ಸೂಚಿಸಲಾಗಿದೆ.ಜಿಲ್ಲಾವಾರು ಗುರಿ ವಿವರ:

ಜಿಲ್ಲೆ2026ರಲ್ಲಿ ಪಾಸ್‌ ಆದ ಸರ್ಕಾರಿ ಶಾಲೆ ವಿದ್ಯಾರ್ಥಿಗಳು2025-26ರ ದಾಖಲಾತಿ ಸಂಖ್ಯೆ2026-27ರ ಗುರಿ

ಬಾಗಲಕೋಟೆ14,6956,59713,226

ಬಳ್ಳಾರಿ18,2205,50916,398

ಬೆಳಗಾವಿ9,8188,2638,836

ಬೆಂಗಳೂರು ಉತ್ತರ501441364513

ಬೆಂಗಳೂರು ಗ್ರಾಮೀಣ419215523723

ಬೆಂಗಳೂರು ದಕ್ಷಿಣ617732845000

ಬೀದರ್‌756413196808

ಚಾಮರಾಜನಗರ457527144118

ಚಿಕ್ಕಬಳ್ಳಾಪುರ574338355169

ಚಿಕ್ಕಮಗಳೂರು524313094719

ಚಿಕ್ಕೋಡಿ17,116499815404

ಚಿತ್ರದುರ್ಗ691138416220

ದಕ್ಷಿಣ ಕನ್ನಡ799062487191

ದಾವಣಗೆರೆ701438096301

ಧಾರವಾಡ726127955500

ಗದಗ651233715861

ಹಾಸನ873750747863

ಹಾವೇರಿ938235878444

ಕಲಬುರಗಿ15272333510500

ಕೊಡಗು161611681454

ಕೋಲಾರ657735115900

ಕೊಪ್ಪಳ14230577712807

ಮಂಡ್ಯ875932807883

ಮೈಸೂರು13072985211765

ರಾಯಚೂರು17486429912500

ರಾಮನಗರ441026013969

ಶಿವಮೊಗ್ಗ924377568319

ತುಮಕೂರು12082585310874

ಉಡುಪಿ575942195183

ಉತ್ತರ ಕನ್ನಡ717962966461

ವಿಜಯಪುರ11,10250129,000

ಯಾದಗಿರಿ893724488043

ಒಟ್ಟು2,87,8881,37,8492,50,000

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆಯುರ್ವೇದ-ಯೋಗಕ್ಕೆ ಜಾಗತಿಕ ಮಾನ್ಯತೆ
ಏರುತ್ತಿದೆ ತಾಪಮಾನ: ಹೀಟ್‌ಸ್ಟ್ರೋಕ್‌ ವಾರ್ಡ್‌ ಸ್ಥಾಪನೆ!