ಕನ್ನಡಪ್ರಭ ವಾರ್ತೆ ಪುತ್ತೂರು
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿ ಖಾತೆಯ ಸ್ಥಳ ಮಾರಾಟ ಮಾಡುವ ಅವಕಾಶ ಇದ್ದರೂ ಅದನ್ನು ಖರೀದಿ ಮಾಡುವವರಿಗೆ ಮನೆ ನಿರ್ಮಿಸಬೇಕಾದರೆ ಸಿಂಗಲ್ ಲೇಔಟ್ ವ್ಯವಸ್ಥೆ ಮಾಡಬೇಕಾಗುತ್ತದೆ. ಹಾಗಾಗಿ ಇಲ್ಲಿ ಒಂದಷ್ಟು ಗೊಂದಲ ಇದೆ. ಜನಸಾಮಾನ್ಯರು ಗೊಂದಲ ಮಾಡಿಕೊಳ್ಳದೆ ಸರಿಯಾದ ಮಾಹಿತಿ ಪಡೆದುಕೊಂಡ ಬಳಿಕವೇ ಇಂತಹ ಸ್ಥಳಗಳ ಖರೀದಿಗೆ ಮುಂದಾಗಬೇಕು. ಯಾಕೆಂದರೆ ಅನಧಿಕೃತ ಕಟ್ಟಡ ಮತ್ತು ಜಾಗ ಬಿ ಖಾತೆ ಪಡೆದುಕೊಂಡ ತಕ್ಷಣ ಅದು ಸಕ್ರಮ ಆಗುವುದಿಲ್ಲ. ಅನಧಿಕೃತ ಕಟ್ಟಡ-ಸ್ಥಳಗಳ ಬಿ ಖಾತೆಯನ್ನು ಕಾವೇರಿ ತಂತ್ರಾಂಶಕ್ಕೆ ಲಿಂಕ್ ಮಾಡುವ ಕಾರಣ ಸಾಲ ಸೌಲಭ್ಯಕ್ಕೆ ಅವಕಾಶ ಕಲ್ಪಿಸಿದರೂ ಸಾಲ ಸಿಗುವುದು ಬ್ಯಾಂಕ್‌ಗಳ ವ್ಯವಸ್ಥೆಗೆ ಬಿಟ್ಟದ್ದಾಗಿದೆ. ಆದರೆ ಮಾರಾಟ ಮಾಡಲು ಯಾವುದೇ ಸಮಸ್ಯೆ ಬರುವುದಿಲ್ಲ ಎಂದು ತಿಳಿಸಿದರು.
ಕಟ್ ಕನ್ವರ್ಷನ್‌ಗೂ ಬಿ ಖಾತೆ:ಕಟ್ ಕನ್ವರ್ಷನ್‌ಗಳಿಗೆ ಬಿ ಖಾತೆ ನೀಡಲು ಅವಕಾಶ ಇದೆ. ಆದರೆ ಈ ಸ್ಥಳದಲ್ಲಿ ಮನೆ ನಿರ್ಮಾಣಕ್ಕೆ ಅವಕಾಶ ಸಿಗಬೇಕಾದರೆ ಸಿಂಗಲ್ ಲೇಔಟ್ ಅನುಮೋದನೆಯಾಗಬೇಕು. ಇದಕ್ಕೆ ನಿಯಮಕ್ಕೆ ತಿದ್ದುಪಡಿ ತರಬೇಕಾಗುತ್ತದೆ. ಸಂಪನ್ಮೂಲ ಕ್ರೋಢೀಕರಣದ ಉದ್ದೇಶದಿಂದ ಈ ಕಾಯಿದೆ ತರಲಾಗಿದೆ. ಅಕ್ರಮವನ್ನು ಸಕ್ರಮೀಕರಿಸುವ ಹಿನ್ನಲೆಯಿಂದ ಅಲ್ಲ ಎಂದು ಅವರು ತಿಳಿಸಿದರು.
ಸುದ್ಧಿಗೋಷ್ಠಿಯಲ್ಲಿ ನಗರ ಸಭೆ ಸದಸ್ಯ ಮಹಮ್ಮದ್ ರಿಯಾಜ್, ನಾಮ ನಿರ್ದೇಶಿತ ಸದಸ್ಯ ರೋಶನ್ ರೈ ಬನ್ನೂರು, ಭೂ ನ್ಯಾಯ ಮಂಡಳಿ ಸದಸ್ಯ ಮಂಜುನಾಥ, ನಗರ ಸಭೆ ಮಾಜಿ ಅಧ್ಯಕ್ಷೆ ಜಯಂತಿ ಬಲ್ನಾಡು ಇದ್ದರು.