ಪಂಚ ಗ್ಯಾರಂಟಿ ಯೋಜನೆಗಳ ಆಶ್ವಾಸನೆಯೊಂದಿಗೆ ಚುನಾವಣೆ ಎದುರಿಸಿದ ರಾಜ್ಯ ಕಾಂಗ್ರೆಸ್, ಜನತೆಯ ಆಶಯಕ್ಕೆ ಚ್ಯುತಿ ಬಾರದೆ ತನ್ನ ಪಂಚ ಗ್ಯಾರಂಟಿಗಳ ಆಶ್ವಾಸನೆಯನ್ನು ಯಶಸ್ವಿಯಾಗಿ ಈಡೇರಿಸಿದ್ದು, ಸರ್ಕಾರದ ಇಚ್ಛಾಶಕ್ತಿಯಿಂದಾಗಿ ಜನಪರ ಯೋಜನೆಗಳ ಯಶಸ್ವಿ ಅನುಷ್ಠಾನವಾಗಿ ರಾಜ್ಯದ ಜನತೆಯು ಪಂಚ ಗ್ಯಾರಂಟಿಗಳ ಲಾಭ ಪಡೆದು ಕೋಟ್ಯಾಂತರ ಕುಟುಂಬಗಳಿಂದು ನೆಮ್ಮದಿಯ ಬದುಕು ಕಟ್ಟಿಕೊಂಡಿದೆ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ್‌ರಾವ್ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಕಾರ್ಕಳ
ಕಾಂಗ್ರೆಸ್ ನೇತೃತ್ವದ ಗ್ಯಾರಂಟಿ ಸರ್ಕಾರಕ್ಕೆ ಇದೀಗ ಎರಡನೇ ವರ್ಷದ ಸಂಭ್ರಮ. ಇದು ಕೇವಲ ಕಾಂಗ್ರೆಸ್ ಪಕ್ಷದ ಸಂಭ್ರಮವಲ್ಲ ಬದಲಿಗೆ ಇದು ಕರ್ನಾಟಕ ಜನತೆಯ ಸಂಭ್ರಮ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ್‌ರಾವ್ ಪ್ರಕಟಣೆಯಲ್ಲಿ ಹೇಳಿದ್ದಾರೆ.ಪಂಚ ಗ್ಯಾರಂಟಿ ಯೋಜನೆಗಳ ಆಶ್ವಾಸನೆಯೊಂದಿಗೆ ಚುನಾವಣೆ ಎದುರಿಸಿದ ರಾಜ್ಯ ಕಾಂಗ್ರೆಸ್, ಜನತೆಯ ಆಶಯಕ್ಕೆ ಚ್ಯುತಿ ಬಾರದೆ ತನ್ನ ಪಂಚ ಗ್ಯಾರಂಟಿಗಳ ಆಶ್ವಾಸನೆಯನ್ನು ಯಶಸ್ವಿಯಾಗಿ ಈಡೇರಿಸಿದ್ದು, ಸರ್ಕಾರದ ಇಚ್ಛಾಶಕ್ತಿಯಿಂದಾಗಿ ಜನಪರ ಯೋಜನೆಗಳ ಯಶಸ್ವಿ ಅನುಷ್ಠಾನವಾಗಿ ರಾಜ್ಯದ ಜನತೆಯು ಪಂಚ ಗ್ಯಾರಂಟಿಗಳ ಲಾಭ ಪಡೆದು ಕೋಟ್ಯಾಂತರ ಕುಟುಂಬಗಳಿಂದು ನೆಮ್ಮದಿಯ ಬದುಕು ಕಟ್ಟಿಕೊಂಡಿದೆ.ಶಕ್ತಿ ಯೋಜನೆಯು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಸೌಲಭ್ಯಗಳನ್ನು ಒದಗಿಸಿದ್ದು, ಶಕ್ತಿ ಯೋಜನೆಯಡಿ ಒಟ್ಟು ಪ್ರಯಾಣಿಸಿದವರ ಪ್ರಯಾಣಗಳ ಸಂಖ್ಯೆ 458 ಕೋಟಿ ಹಾಗೂ ಇದಕ್ಕೆ ತಗುಲಿದ ವೆಚ್ಚ 8,815 ಕೋಟಿ ರುಪಾಯಿಗಳು.ಗೃಹಿಣಿಯರಿಗೆ ತಿಂಗಳಿಗೆ ಕೊಡಲಾಗುವ 2000 ರುಪಾಯಿಯ ಗೃಹಲಕ್ಷ್ಮೀ ಯೋಜನೆಯಲ್ಲಿ ಒಟ್ಟು ಫಲಾನುಭವಿಗಳು 1.25 ಕೋಟಿ ಹಾಗೂ ಇದಕ್ಕೆ ಸರ್ಕಾರಿ ಭರಿಸಿದ ಮೊತ್ತ 47,773 ಕೋಟಿ ರುಪಾಯಿಗಳು.ಈ ಐದೂ ಗ್ಯಾರಂಟಿಗಳ ಒಟ್ಟು ವೆಚ್ಚ 89,428 ಕೋಟಿ ರುಪಾಯಿಗಳಾಗಿದೆ. ರಾಜ್ಯದ ಕಟ್ಟ ಕಡೆಯ ಜನರ ಶ್ರೇಯೋಭಿವೃದ್ಧಿಗಾಗಿ ಕೆಲಸ ಮಾಡುವ ಕಾಂಗ್ರೆಸ್ ಸರ್ಕಾರವು ಇದು ‘ಮನ್ ಕೀ ಬಾತ್’ ಸರ್ಕಾರ ಅಲ್ಲ ‘ಕಾಮ್ ಕೀ ಬಾತ್’ ಸರ್ಕಾರ ಆಗಿದೆ. ರಾಜ್ಯದಲ್ಲಿ ಒಬ್ಬನೇ ಒಬ್ಬ ಫಲಾನುಭವಿಯೂ ಕೂಡ ಇಲ್ಲಿ ತನಕ ಗ್ಯಾರಂಟಿ ಯೋಜನೆಗಳನ್ನು ತಿರಸ್ಕರಿಸಿದ ಉದಾಹರಣೆಗಳಿಲ್ಲ. ಹಾಗಾಗಿ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ರಾಜ್ಯದ ಜನರೂ ಮುಕ್ತ ಮನಸ್ಸಿನಿಂದ ಸ್ವೀಕಾರ ಮಾಡಿರುವುದಕ್ಕೆ ಇದು ಉದಾಹರಣೆಯಾಗಿದೆ ಮತ್ತು ಗ್ಯಾರಂಟಿ ಬಗ್ಗೆ ಅಪಪ್ರಚಾರ ನಡೆಸುತ್ತಿರುವ ರಾಜ್ಯ ಬಿಜೆಪಿಗೆ ಜನತೆ ನೀಡಿದ ತಪರಾಕಿಯಾಗಿದೆ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ್ ರಾವ್ ತಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.