ಸರ್ಕಾರದ ಪಂಚಗ್ಯಾರಂಟಿ ಬೋಗಸ್ ಯೋಜನೆಗಳು: ಭರತ್ ಗಿಣಕಲ್

KannadaprabhaNewsNetwork |  
Published : Jul 28, 2026, 01:15 AM IST
ೇ್ | Kannada Prabha

ಸಾರಾಂಶ

ಶೃಂಗೇರಿ: ಹಿಂದಿನ ಸರ್ಕಾರಗಳೆಲ್ಲ ಯೋಜನೆಗಳನ್ನು ಅಭಿವೃದ್ಧಿ ಪಡಿಸಿದರೆ ಈಗಿನ ಕಾಂಗ್ರೇಸ್ ಸರ್ಕಾರ ಬಡವರ ಯೋಜನೆಗಳಿಗೆ ಕತ್ತರಿ ಹಾಕಿ ದ್ರೋಹ ಮಾಡುತ್ತಿದೆ. ಸರ್ಕಾರದ ಪಂಚಗ್ಯಾರಂಟಿ ಯೋಜನೆಗಳು ಬೋಗಸ್ ಆಗಿವೆ ಎಂದು ಜೆಡಿಎಸ್ ಮುಖಂಡ ಭರತ್ ಗಿಣಕಲ್ ಕಿಡಿಕಾರಿದರು.

ಶೃಂಗೇರಿ: ಹಿಂದಿನ ಸರ್ಕಾರಗಳೆಲ್ಲ ಯೋಜನೆಗಳನ್ನು ಅಭಿವೃದ್ಧಿ ಪಡಿಸಿದರೆ ಈಗಿನ ಕಾಂಗ್ರೇಸ್ ಸರ್ಕಾರ ಬಡವರ ಯೋಜನೆಗಳಿಗೆ ಕತ್ತರಿ ಹಾಕಿ ದ್ರೋಹ ಮಾಡುತ್ತಿದೆ. ಸರ್ಕಾರದ ಪಂಚಗ್ಯಾರಂಟಿ ಯೋಜನೆಗಳು ಬೋಗಸ್ ಆಗಿವೆ ಎಂದು ಜೆಡಿಎಸ್ ಮುಖಂಡ ಭರತ್ ಗಿಣಕಲ್ ಕಿಡಿಕಾರಿದರು.

ಪಟ್ಟಣದ ತಾಲೂಕು ಕಚೇರಿ ಎದುರು ವೃದ್ದಾಪ್ಯ ವೇತನ, ಅಂಗವಿಕಲರ ವೇತನ,ಸಂಧ್ಯಾಸುರಕ್ಷಾ, ವಿಧವಾ ವೇತನ ಸಹಿತ ಬಡವರ ಯೋಜನೆ ಗಳನ್ನು ರದ್ದುಪಡಿಸಿರುವ ಹಾಗೂ ರಾಜ್ಯ ಸರ್ಕಾರ ವಿಫಲತೆ ವಿರುದ್ಧ ಜೆಡಿಎಸ್ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿ ವೃದ್ದಾಪ್ಯ ವೇತನದಲ್ಲಿ ಜೀವನ ನಡೆಸುತ್ತಿದ್ದ ಅದೆಷ್ಟೋ ಕುಟುಂಬಗಳಿದ್ದವು. ಹಿಂದಿನ ಸರ್ಕಾರ ಬಡವರ ಬದುಕಿಗೆ ಅನೇಕ ಯೋಜನೆಗಳನ್ನು ಜಾರಿಗೊಳಿಸಿತ್ತು. ಆದರೆ ಈಗಿನ ರಾಜ್ಯ ಸರ್ಕಾರ ನೀಡಲಾಗದೇ ರದ್ದುಪಡಿಸುತ್ತಿವೆ. ಸರ್ಕಾರದ ಪಂಚಗ್ಯಾರಂಟಿ ಕೇವಲ ಬೋಗಸ್ ಯೋಜನೆ. ಗೃಹಲಕ್ಷ್ಮಿ ಹಣ ಬರುತ್ತಿಲ್ಲ. ಗೃಹಜ್ಯೋತಿ ಯೋಜನೆಯಲ್ಲಿ ಉಚಿತ ವಿದ್ಯುತ್ ಯೋಜನೆ ಹೆಸರಲ್ಲಿ ಸುಲಿಗೆ ಮಾಡಲಾಗುತ್ತಿದೆ. ಯುವನಿಧಿ ಹೆಸರಿಗೆ ಮಾತ್ರ ಇದೆ ಹೊರತು ಯಾರಿಗೂ ಹಣ ಬಂದಿಲ್ಲ. ಗ್ಯಾರಂಟಿ ಯೋಜನೆಗಳಿಗೆ ಹಣ ಒದಗಿಸ ಲಾಗದೇ ಬಡವರ ಯೋಜನೆಗಳನ್ನು ರದ್ದು ಮಾಡಲಾಗುತ್ತಿದೆ. ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದರು.

ಕ್ಷೇತ್ರದಲ್ಲಿ ಅಭಿವೃದ್ಧಿ ಯೋಜನೆಗಳಿಲ್ಲ. ಅಭಿವೃದ್ಧಿ ಕುಂಠಿತವಾಗಿದೆ. ಶಾಸಕರು ಕೇವಲ ಸಭೆ, ಭಾಷಣಗಳನ್ನು ಬಿಗಿದು ಹೋಗುತ್ತಾರೆ ಅಷ್ಟೇ. ಸಂಪೂರ್ಣ ವಿಫಲರಾಗಿದ್ದಾರೆ. ಸರ್ಕಾರ ಕೂಡಲೇ ವೃ್ದ್ದಾಪ್ಯ ವೇತನ, ಸಂಧ್ಯಾ ಸುರಕ್ಷಾ, ಅಂಗವಿಕಲರ ವೇತನ,ವಿದವಾ ವೇತನ ಹಾಗೂ ಬಡವರ ಯೋಜನೆಗಳನ್ನು ರದ್ದುಪಡಿಸಿರುವುದನ್ನು ಹಿಂಪಡೆಯಬೇಕು. ಬಡ ಹಿರಿಯ ನಾಗರೀಕರಿಗೆ ಪಿಂಚಣಿಯನ್ನು ಕೂಡಲೇ ಮುಂದುವರಿಸಬೇಕು ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ಜೆಡಿಎಸ್ ನ ಕೆ.ಎಸ್ ವೆಂಕಪ್ಪ ಮಾತನಾಡಿ ಕಾಂಗ್ರೇಸ್ ನವರು ಮೊದಲು ಸಂವಿಧಾನವನ್ನು ಚೆನ್ನಾಗಿ ಓದಿ ತಿಳಿದುಕೊಂಡು ಮಾತನಾಡಬೇಕು. ಕೇವಲ ಕಂಕುಳಲ್ಲಿ ಸಂವಿಧಾನ ಪುಸ್ತಕ ಹಿಡಿದುಕೊಂಡು ಓಡಾಡಿದರೆ ಸಾಲದು. ಅರಸು,ಹೆಗಡೆ ಕಾಲದಲ್ಲಿ ಸೇರಿದಂತೆ ಹಿಂದಿನ ಸರ್ಕಾರಗಳು ಜಾರಿಗೆತಂದ ಜನಪರ ಯೋಜನೆಗಳನ್ನು ರದ್ದು ಪಡಿಸುತ್ತಿದ್ದಾರೆ ಎಂದರು.

ಜೆಡಿಎಸ್ ನ ಶ್ರೀಧರ್,ಚಂದ್ರಶೇಖರ್ ಮಾತನಾಡಿದರು. ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು .ಕಂದಾಯ ಇಲಾಖೆ ಶಿರಸ್ತೇದಾರ್ ಇಫ್ತಿಕಾರ್ ಅಹಮದ್ ಮನವಿ ಸ್ವೀಕರಿಸಿದರು. ನವೀನ್ ಕುಮಾರ್ ಕೊಲ್ಲಿ, ಅಚ್ಚುತ್ತಾ, ಶ್ರೀನಿವಾಸ್ ಕೊಡಿಗೆ ಮಕ್ಕಿ,ಸತೀಶ್, ಶಂಕರಪ್ಪ,ಕೃಷ್ಣಮೂರ್ತಿ ಮತ್ತಿತರರು ಹಾಜರಿದ್ದರು.

27 ಶ್ರೀ ಚಿತ್ರ 1-

ಶೃಂಗೇರಿ ತಾಲೂಕು ಕಚೇರಿ ಎದುರು ಜೆಡಿಎಸ್ ಪ್ರತಿಭಟನೆ ನಡೆಸಿ ಮನವಿ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂಗನವಾಡಿ ಕಾರ್ಯಕರ್ತೆ ನೇಮಿಸಿಸಲು ಪೋಷಕರ ಒತ್ತಾಯ
೩೦-೩೧ ರಂದು ವಿಸ್ಮಯ ಕೀಟ ಪ್ರಪಂಚ ಪ್ರದರ್ಶನ